ಇಲಿ ಕೊಂದ ಆರೋಪದಡಿ ಆರೋಪಿಯ ವಿರುದ್ಧ ಬಿತ್ತು 30 ಪುಟಗಳ ಚಾರ್ಜ್ ಶೀಟ್
ಉತ್ತರಪ್ರದೇಶದ ಬದೌನ್ ಜಿಲ್ಲೆಯ ಮನೋಜ್ ಕುಮಾರ್ ನವೆಂಬರ್ 25, 2022 ರಂದು ಇಲಿಯ ಬಾಲಕ್ಕೆ ಇಟ್ಟಿಗೆಯನ್ನು ಕಟ್ಟಿ ಎಳೆದೊಯ್ದು ಚರಂಡಿಯಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಂದಿದ್ದಾನೆ.
ಉತ್ತರಪ್ರದೇಶ: ಸಾಮಾನ್ಯ ಪ್ರತೀ ಮನೆಗಳಲ್ಲಿ ಅಯ್ಯೋ ಇಲಿ ಕಾಟ ಜಾಸ್ತಿಯಾಗಿದೆ ಅನ್ನುವವರೇ ಹೆಚ್ಚು. ಗೃಹಿಣಿಯರಂತೂ ಪ್ರತೀ ದಿನ ಟೋಮೆಟೋ ಒಂದೊಂದಾಗಿ ಕಾಣೆಯಾಗುತ್ತಿದೆ, ಈ ಇಲಿಗೆ ಏನಾದರೂ ಮಾಡಿ ಓಡಿಸಿ ಎಂದು ಹೇಳುವುದು ನೀವು ಕೇಳಿರುತ್ತೀರಿ ಅಥವಾ ನಿಮ್ಮ ಮನೆಯಲ್ಲಿಯೂ ಅನುಭವವಾಗಿರಬಹುದು. ಅದಕ್ಕಾಗಿ ಕೆಲವರು ಇಲಿ ಹಿಡಿಯೋಕೆ ಬೋನ್, ಇಲಿ ಪಾಷಾಣ ಅಂತಾ ಏನೇನೋ ಮಾಡ್ತಾರೆ. ಇದಕ್ಕೂ ಮೇಲೆ ಮನೆಯಲ್ಲಿ ಬೆಕ್ಕು ಸಾಕುವವರೂ ಇದ್ದಾರೆ. ಆದರೆ ಇಲೊಬ್ಬ ಇಲಿಯನ್ನು ಕೊಂದಿದ್ದಕ್ಕೆ ಜೈಲು ಪಾಲಗಿದ್ದಾನೆ. ಹೌದು ಇಲಿ ಕೊಂದ ಆರೋಪದಡಿ ಆರೋಪಿಯ ವಿರುದ್ಧ 30 ಪುಟದ ಚಾರ್ಜ್ ಶೀಟ್ ದಾಖಲಿಸಲಾಗಿದೆ.
ಉತ್ತರಪ್ರದೇಶದ ಬದೌನ್ ಜಿಲ್ಲೆಯ ಮನೋಜ್ ಕುಮಾರ್ ನವೆಂಬರ್ 25, 2022 ರಂದು ಇಲಿಯ ಬಾಲಕ್ಕೆ ಇಟ್ಟಿಗೆಯನ್ನು ಕಟ್ಟಿ ಎಳೆದೊಯ್ದು ಚರಂಡಿಯಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗಾ ಅತನನ್ನು ಆರೋಪಿಯೆಂದು ಘೋಷಿಸಿ ಪ್ರಾಣಿ ಹಿಂಸೆ ಕಾಯಿದೆಯ ಅಡಿ 30 ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಏಪ್ರಿಲ್ 10 ರಂದು ಪೊಲೀಸರು ಸಲ್ಲಿಸಿದ್ದ ಚಾರ್ಜ್ ಶೀಟ್ ಅನ್ನು ಕೋರ್ಟ್ ಅಂಗೀಕರಿಸಿದ್ದು, ಈಗ ಇಲಿ ಕೊಂದವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆಸ್ತಿಯ ವ್ಯಾಮೋಹ, ಸಾವನ್ನಪ್ಪಿದ ವೃದ್ಧೆ ಕೈಯಿಂದ ಆಸ್ತಿ ಪತ್ರಕ್ಕೆ ಹೆಬ್ಬೆಟ್ಟು ಹಾಕಿಸಿಕೊಂಡ ಸಂಬಂಧಿಕರು
ಆರೋಪಿ ವಿರುದ್ದ ದೂರು ನೀಡಿದ್ದ ಪ್ರಾಣಿ ಹಕ್ಕು ಕಾರ್ಯಕರ್ತ ವಿಕೇಂದ್ರ ಶರ್ಮಾ, ಪ್ರಾಣಿಯನ್ನು ಹಿಂಸಿಸಿ ಕೊಂದಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ತಾನು ಇಲಿಯ ಪ್ರಾಣವನ್ನು ರಕ್ಷಿಸಲು ಮುಂದಾಗಿದ್ದೆ, ಅದರೆ ಅಷ್ಟು ಹೊತ್ತಿಗಾಗಲೇ ಇಲಿ ಉಸಿರುಗಟ್ಟಿ ಪ್ರಾಣವನ್ನು ಕಳೆದುಕೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ದೂರನ್ನು ಸ್ವೀಕರಿಸಿದ ಸದರ್ ಕೊತ್ವಾಲಿ ಪೊಲೀಸರು ಇಲಿಯ ಮರಣೋತ್ತರ ಪರೀಕ್ಷೆ ನಡೆಸಿ ಅದರ ವರದಿಯ ಆದರದ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.
ಈ ರೀತಿಯ ಹಿಂಸಾತ್ಮಕ ಕ್ರಿಯೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಟ್ಟು ಹಾಸ್ಯಸ್ಪದವಾದ ನೋಡುವ ಬದಲಾಗಿ, ಪ್ರಾಣಿ ಹಿಂಸೆ ಮಾಡಿದವರ ವಿರುದ್ಧ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆ ವಿಧಿಸಬೇಕು. ಇದು ಮುಂದೆ ಕೌರ್ಯ ಎಸಗುವವರಿಗೆ ಎಚ್ಚರಿಕೆಯ ಚಿಹ್ನೆಯಾಗಲಿದೆ ಎಂದು ವಿಕೇಂದ್ರ ಶರ್ಮಾ ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:46 am, Wed, 12 April 23