WhatsApp New Feature: ಫೇಸ್​ಬುಕ್ ಪ್ರಿಯರು ಫುಲ್ ಖುಷ್: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅಚ್ಚರಿಯ ಫೀಚರ್

WhatsApp Status: ವಾಟ್ಸ್​ಆ್ಯಪ್ ಕೆಲವೇ ದಿನಗಳಲ್ಲಿ ತನ್ನ ಸ್ಟೇಟಸ್ ವಿಭಾಗದಲ್ಲಿ ಬದಲಾವಣೆ ಮಾಡಲಿದೆ. ಅಂದರೆ ನೀವು ವಾಟ್ಸ್​ಆ್ಯಪ್​ನಲ್ಲಿ ಏನಾದರು ಸ್ಟೇಟಸ್ ಹಂಚಿಕೊಂಡರೆ ಅದು ನೇರವಾಗಿ ಫೇಸ್​ಬುಕ್​ ಸ್ಟೇಟಸ್​ನಲ್ಲೂ ಕಾಣಿಸಲಿದೆ.

WhatsApp New Feature: ಫೇಸ್​ಬುಕ್ ಪ್ರಿಯರು ಫುಲ್ ಖುಷ್: ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಅಚ್ಚರಿಯ ಫೀಚರ್
WhatsApp New Feature
Follow us
|

Updated on: Apr 08, 2023 | 1:59 PM

ಮೆಟಾ (Meta) ಒಡೆತನದ ನಂಬರ್ ಒನ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ದಿನಕ್ಕೊಂದು ಅಪ್ಡೇಟ್ ಅನ್ನು ಘೋಷಿಸುತ್ತಿದೆ. ಈಗಾಗಲೇ ಸಾಲು ಸಾಲು ಹೊಸ ಫೀಚರ್​ಗಳು ಬಿಡುಗಡೆಗೆ ತಯಾರಾಗಿ ನಿಂತಿದ್ದರೆ ಇನ್ನೂ ಕೆಲವು ಪರೀಕ್ಷಾ ಹಂತದಲ್ಲಿದೆ. ವಾಟ್ಸ್​ಆ್ಯಪ್ (WhatsApp) ಕೇವಲ ತನ್ನ ಆ್ಯಪ್​ಗೆ ಸಹಕಾರಿ ಆಗುವ ಫೀಚರ್​ಗಳನ್ನು ಮಾತ್ರ ಅಭಿವೃದ್ದಿ ಪಡಿಸುತ್ತಿಲ್ಲ. ಬದಲಾಗಿ ತನ್ನ ಒತರೆ ಸಾಮಾಜಿಕ ತಾಣಕ್ಕೆ ಸಹಕಾರಿ ಆಗುವಂತಹ ಆಯ್ಕೆಯನ್ನು ಕೂಡ ನೀಡುತ್ತಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ನೂತನ ಆಯ್ಕೆಗಳನ್ನು ಬಿಡುಗಡೆ ಮಾಡುವ ವಾಟ್ಸ್​ಆ್ಯಪ್​ನಲ್ಲಿ ಮುಂದಿನ ದಿನಗಳಲ್ಲಿ ಊಹಿಸಲಾಗದ ಫೀಚರ್​ಗಳು ಬರಲಿದೆ. ಸದ್ಯ ವಾಟ್ಸ್​ಆ್ಯಪ್ ನೂತನ ಫೀಚರ್ ಬಗ್ಗೆ ಮಾಹಿತಿ ನೀಡಿದ್ದು ಇದರಿಂದ ಫೇಸ್​ಬುಕ್ (Facebook) ಪ್ರಿಯರಂತು ಸಖತ್ ಖುಷಿ ಆಗಿದ್ದಾರೆ.

ವಾಟ್ಸ್​ಆ್ಯಪ್ ಕೆಲವೇ ದಿನಗಳಲ್ಲಿ ತನ್ನ ಸ್ಟೇಟಸ್ ವಿಭಾಗದಲ್ಲಿ ಬದಲಾವಣೆ ಮಾಡಲಿದೆ. ಅಂದರೆ ನೀವು ವಾಟ್ಸ್​ಆ್ಯಪ್​ನಲ್ಲಿ ಏನಾದರು ಸ್ಟೇಟಸ್ ಹಂಚಿಕೊಂಡರೆ ಅದು ನೇರವಾಗಿ ಫೇಸ್​ಬುಕ್​ ಸ್ಟೇಟಸ್​ನಲ್ಲೂ ಕಾಣಿಸಲಿದೆ. ಈ ಹಿಂದೆ ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್ ಹಂಚಿಕೊಂಡರೆ ಅದನ್ನು ಎಫ್​ಬಿಗೂ ಶೇರ್ ಮಾಡಬೇಕಿತ್ತು. ಆದರೀಗ ಹೊಸ ಫೀಚರ್ ಪ್ರಕಾರ ಅಟೋಮೆಟ್ ಆಗಿ ವಾಟ್ಸ್​ಆ್ಯಪ್​ನಲ್ಲಿ ಶೇರ್ ಮಾಡಿದ ಸ್ಟೇಟಸ್ ಫೇಸ್​ಬುಕ್​ ಸ್ಟೇಟಸ್​ಗೂ ಅಪ್​ಲೋಡ್ ಆಗಲಿದೆ. ಹಾಗಂತ ಇದು ಕಡ್ಡಾಯವಲ್ಲ. ವಾಟ್ಸ್​ಆ್ಯಪ್​ನಲ್ಲಿ ಹೊಸ ಆಯ್ಕೆಯೊಂದು ಕಾಣಿಸಲಿದ್ದು ಆನ್​-ಆಫ್ ಮಾಡುವ ಮೂಲಕ ಇದನ್ನು ಬಳಸಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸದ್ಯದಲ್ಲೇ ಈ ಆಯ್ಕೆ ಸಿಗಲಿದೆಯಂತೆ.

Redmi 12C: ಭಾರತದಲ್ಲಿ ಖರೀದಿಗೆ ಸಿಗುತ್ತಿದೆ ರೆಡ್ಮಿ 12C ಸ್ಮಾರ್ಟ್‌ಫೋನ್: ಬೆಲೆ ಕೇವಲ 8,999 ರೂ.

ಇದನ್ನೂ ಓದಿ
Image
Moto G13: ಬೆಲೆ ಇಳಿಕೆ: ಕೈಗೆಟಕುವ ದರಕ್ಕೆ ಮಾರಾಟ ಆಗುತ್ತಿದೆ ಮೋಟೋ G13 ಸ್ಮಾರ್ಟ್​ಫೋನ್
Image
iQoo Neo 6: ವಿಶೇಷ ಆಫರ್ ₹5,000 ಡಿಸ್ಕೌಂಟ್​ನಲ್ಲಿ ಐಕ್ಯೂ ಸ್ಮಾರ್ಟ್​ಫೋನ್
Image
Ptron Basspods Encore: ಮ್ಯೂಸಿಕ್ ಪ್ರಿಯರಿಗೆ ಬಜೆಟ್ ದರದ ಉತ್ತಮ ಇಯರ್​ಬಡ್ಸ್
Image
Apple Store: ಮುಂಬೈನಲ್ಲಿ ದೇಶದ ಮೊತ್ತಮೊದಲ ಆ್ಯಪಲ್ ಸ್ಟೋರ್ ಶೀಘ್ರ ಓಪನ್

ಚಾಟ್ ಅನ್ನು ಲಾಕ್ ಮಾಡಬಹುದು:

ಇನ್ನು ಸದ್ಯದಲ್ಲೇ ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ತಮಗೆ ಬೇಕಾದ ಚಾಟ್ ಅನ್ನು ಲಾಕ್ ಮಾಡಬಹುದು ಅಥವಾ ಹೈಡ್ ಮಾಡಬಹುದು. ವಾಟ್ಸ್​ಆ್ಯಪ್ ಕುರಿತ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವ Wabetainfo ಈ ಬಗ್ಗೆ ವರದಿ ಮಾಡಿದ್ದು, ವಾಟ್ಸ್​ಆ್ಯಪ್​ನಲ್ಲಿ ಚಾಟ್ ಅನ್ನು ಲಾಕ್ ಮಾಡಿದಾಗ ಬಳಕೆದಾರರು ತಮ್ಮ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಅನ್ನು ಬಳಸಿಕೊಂಡು ಮಾತ್ರ ತೆರೆಯಲು ಸಾಧ್ಯವಾಗುತ್ತಂತೆ. ಹೀಗಿದ್ದಾಗ ಇದನ್ನು ಬೇರೆ ಯಾರೂ ಸಹ ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ.

ಈ ಆಯ್ಕೆ ಚಾಟ್​ನ ಕಾಂಟೆಕ್ಟ್ ಅಥವಾ ಗ್ರೂಪ್​ನ ಇನ್​ಫೋದಲ್ಲಿ ಇರುತ್ತದೆ. ಇದನ್ನು ಆ್ಯಕ್ಟಿವ್ ಮಾಡಿದ ತಕ್ಷಣ ಆ ಚಾಟ್ ಹೈಡ್ ಆಗಿ ಹೊಸ ಸೆಕ್ಷನ್​ಗೆ ಹೋಗುತ್ತದೆ. ಸದ್ಯಕ್ಕೆ ಈ ಫೀಚರ್ಸ್‌ ಅಭಿವೃದ್ಧಿ ಹಂತದಲ್ಲಿದೆ. ಆಂಡ್ರಾಯ್ಡ್ ಬೀಟಾ ಆವೃತ್ತಿಯ 2.23.8.2 ಅಪ್ಡೇಟ್​ನಲ್ಲಿ ಪರೀಕ್ಷಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮೊದಲಿಗೆ ಆಂಡ್ರಾಯ್ಡ್ ಬಳಕೆದಾರರು ಈ ಫೀಚರ್ಸ್‌ ಅನ್ನು ಬಳಕೆ ಮಾಡಬಹುದು ಎಂದು ತಿಳಿದುಬಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು