Apple Store: ಮುಂಬೈನಲ್ಲಿ ಭಾರತದ ಮೊದಲ ಆ್ಯಪಲ್ ಸ್ಟೋರ್ ಶೀಘ್ರ ಓಪನ್
ಮುಂಬೈನಲ್ಲಿ ಭಾರತದ ಮೊದಲ Apple Store ಏಪ್ರಿಲ್ ಮೂರನೇ ವಾರದಲ್ಲಿ ತೆರೆಯುತ್ತಿದೆ. ದೇಶದ ಮೊದಲ ಸ್ಟೋರ್ ಅನ್ನು ವಾಣಿಜ್ಯ ನಗರಿಯಲ್ಲಿ ತೆರೆಯುವ ಮೂಲಕ ಆ್ಯಪಲ್ ಭಾರತದಲ್ಲಿ ಸೇವೆ ಮತ್ತು ಮಾರಾಟಕ್ಕೆ ಅಧಿಕೃತ ಮುದ್ರೆ ಒತ್ತುತ್ತಿದೆ. ಜಾಗತಿಕವಾಗಿ ಹಲವು ರಾಷ್ಟ್ರಗಳಲ್ಲಿ ಆ್ಯಪಲ್ ಸ್ಟೋರ್ ಹೊಂದಿದ್ದರೂ, ಭಾರತದಲ್ಲಿ ಇದೇ ಮೊದಲ ಬಾರಿಗೆ ಅತಿದೊಡ್ಡ ಶೋರೂಮ್ ತೆರೆಯುತ್ತಿದೆ.
ಆ್ಯಪಲ್ ಕಂಪನಿ ಐಫೋನ್(iPhone) ಮತ್ತು ಮ್ಯಾಕ್, ಐಪ್ಯಾಡ್ ಸಹಿತ ಪ್ರೀಮಿಯಂ ಗ್ಯಾಜೆಟ್ಗಳಿಗೆ ಹೆಸರುವಾಸಿ. ಆ್ಯಪಲ್, ವಿವಿಧ ರಾಷ್ಟ್ರಗಳಲ್ಲಿ ತನ್ನ ಸ್ವಂತದ ಸ್ಟೋರ್ ಅನ್ನು ತೆರೆದಿದೆ. ಅವುಗಳನ್ನು ಆ್ಯಪಲ್ ಸ್ವತಃ ನಿರ್ವಹಿಸುತ್ತದೆ. ಕಂಪನಿಯ ಎಲ್ಲ ಮಾರಾಟ ಮತ್ತು ಸೇವೆಗಳು ಈ ಸ್ಟೋರ್ನಲ್ಲಿ ಲಭ್ಯವಿರುತ್ತದೆ. ಈ ಬಾರಿ ಆ್ಯಪಲ್, ಭಾರತದಲ್ಲಿ ಮೊತ್ತಮೊದಲ ಸ್ಟೋರ್ ಅನ್ನು ತೆರೆಯುತ್ತಿದೆ. ಆ್ಯಪಲ್ ಕಂಪನಿ ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಮಾರಾಟ ಮತ್ತು ಸೇವೆ ನೀಡುತ್ತಿದ್ದರೂ, ಕಂಪನಿಯ ಮಾನದಂಡಕ್ಕೆ ಪೂರಕವಾದ ಸ್ವಂತದ ಮಳಿಗೆಯನ್ನು ಹೊಂದಿರಲಿಲ್ಲ. ಮುಂಬೈನಲ್ಲಿ ದೇಶದ ಮೊದಲ ಆ್ಯಪಲ್ ಸ್ಟೋರ್ (Apple Store) ತೆರೆಯಲು ಕಂಪನಿ ಸಜ್ಜಾಗಿದ್ದು, ಈಗಾಗಲೇ ಕಟ್ಟಡದ ಫೋಟೊ, ವಿಡಿಯೊ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದೆ. ಆ್ಯಪಲ್ ನೂತನ ಸ್ಟೋರ್ ಕುರಿತ ವಿವರ ಇಲ್ಲಿದೆ. ಮುಂಬೈನ ಆ್ಯಪಲ್ ಸ್ಟೋರ್ ಶೀಘ್ರದಲ್ಲೇ ಆರಂಭವಾಗಲಿದೆ.
ದೇಶದ ಮೊದಲ ಆ್ಯಪಲ್ ಸ್ಟೋರ್
ಆ್ಯಪಲ್ ಕಂಪನಿಯ ಸ್ವಂತದ ಮೊದಲ ಸ್ಟೋರ್ ಶೀಘ್ರ ಆರಂಭವಾಗುತ್ತಿದೆ. ಎಪ್ರಿಲ್ ಮೂರನೇ ವಾರದಲ್ಲಿ ಮುಂಬೈನ ಪ್ರಮುಖ ತಾಣದಲ್ಲಿ ಆ್ಯಪಲ್ ಮೊದಲ ಸ್ಟೋರ್ ತೆರೆಯಲಿದೆ. ಪ್ರತಿಷ್ಠಿತ ಮತ್ತು ಜನಪ್ರಿಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಮೊದಲ ಸ್ಟೋರ್ ತೆರೆಯಲು ಆ್ಯಪಲ್ ಸಜ್ಜಾಗಿದೆ. ಇದು ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ಮಾಲ್ ಎನ್ನುವುದು ಗಮನಾರ್ಹ ಸಂಗತಿ. ನೂತನ ಸ್ಟೋರ್ ಹೊರಗಡೆ ಹಲೋ ಮುಂಬೈ (Mumbai) ಎಂಬ ಪೋಸ್ಟರ್ ಮೂಲಕ ಹೊಸ ಸ್ಟೋರ್ ತೆರೆಯುತ್ತಿರುವ ಬಗ್ಗೆ ಆ್ಯಪಲ್ ವಿವರ ನೀಡಿದೆ.
ದೆಹಲಿಯಲ್ಲೂ ಬರಲಿದೆ ಆ್ಯಪಲ್ ಸ್ಟೋರ್
ಮುಂಬೈನಲ್ಲಿ ಮೊದಲ ಸ್ಟೋರ್ ತೆರೆದ ಬಳಿಕ, ಮುಂದೆ ದೆಹಲಿಯಲ್ಲೂ ಆ್ಯಪಲ್ ಕಂಪನಿ ಹೊಸ ಸ್ಟೋರ್ ತೆರೆಯಲಿದೆ. ನಂತರ, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲೂ ಮಳಿಗೆ ತೆರೆಯಲು ಅ್ಯಪಲ್ ಉತ್ಸಾಹ ತೋರಿದೆ. ಮುಂಬೈನ ಆ್ಯಪಲ್ ಸ್ಟೋರ್ ಕುರಿತಂತೆ ಆ್ಯಪಲ್ ಕಂಪನಿ ಹೆಚ್ಚಿನ ವಿವರ ಬಿಡುಗಡೆ ಮಾಡಿಲ್ಲ. ಆದರೆ ಅತ್ಯಂತ ಜನನಿಬಿಡ, ದುಬಾರಿ ಪ್ರದೇಶದಲ್ಲಿ ಆ್ಯಪಲ್ ಮೊದಲ ಮಳಿಗೆ ತೆರೆಯುತ್ತಿರುವುದರಿಂದ ಸಹಜವಾಗಿಯೇ ಜನರಿಗೆ ಕುತೂಹಲ ಹೆಚ್ಚಾಗಿದೆ. ಆ್ಯಪಲ್ ಕಂಪನಿಯ ಎಲ್ಲ ಮಾರಾಟ ಮತ್ತು ಸೇವೆಗಳು ಈ ಸ್ಟೋರ್ನಲ್ಲಿ ಲಭ್ಯವಿರಲಿದೆ. ಮಾರಾಟ ಮತ್ತು ನಂತರದ ಸೇವೆಗಳು, ವೈಯಕ್ತೀಕರಿಸಿದ ಗ್ಯಾಜೆಟ್ಗಳ ಮಾರಾಟ, ಅಕ್ಸೆಸ್ಸರಿಗಳು ಕೂಡ ಆ್ಯಪಲ್ ಸ್ಟೋರ್ ಮೂಲಕ ಲಭ್ಯವಾಗಲಿದೆ. ಈವರೆಗೆ ಆ್ಯಪಲ್, ಪ್ರೀಮಿಯಂ ರಿಸೆಲ್ಲರ್ ಫ್ರಾಂಚೈಸಿ ಮೂಲಕ ದೇಶದಲ್ಲಿ ವ್ಯಾಪಾರ-ವಹಿವಾಟು ನಡೆಸುತ್ತಿತ್ತು. ಉಳಿದಂತೆ, ಕೆಲವರ್ಷಗಳ ಹಿಂದೆ ಭಾರತದಲ್ಲಿ ಆನ್ಲೈನ್ ಸ್ಟೋರ್ ಸ್ಥಾಪಿಸಿತ್ತು. ಈಗ ತನ್ನದೇ ಸ್ವಂತದ ಸ್ಟೋರ್ ತೆರೆಯುತ್ತಿದ್ದು, ಆ್ಯಪಲ್ ಐಫೋನ್, ಮ್ಯಾಕ್, ಐಪ್ಯಾಡ್, ವಾಚ್ ಸಹಿತ ಎಲ್ಲ ಮಾದರಿಯ ಗ್ಯಾಜೆಟ್ಗಳು ಒಂದೇ ಸೂರಿನಡಿ ಲಭ್ಯವಾಗಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Fri, 7 April 23