AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ptron Basspods Encore: ಮ್ಯೂಸಿಕ್ ಪ್ರಿಯರಿಗೆ ಬಜೆಟ್ ದರದ ಉತ್ತಮ ಇಯರ್​ಬಡ್ಸ್

Ptron Basspods Encore: ಮ್ಯೂಸಿಕ್ ಪ್ರಿಯರಿಗೆ ಬಜೆಟ್ ದರದ ಉತ್ತಮ ಇಯರ್​ಬಡ್ಸ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Apr 08, 2023 | 9:01 AM

Share

ಪಿಟ್ರಾನ್, ಆಕರ್ಷಕ ವಿನ್ಯಾಸದ ಪಿಟ್ರಾನ್ ಬಾಸ್​ಪಾಡ್ಸ್ ಎನ್​ಕೋರ್ ಇಯರ್​ಬಡ್ಸ್ ಪರಿಚಯಿಸಿದೆ. ಬಜೆಟ್ ದರಕ್ಕೆ ಉತ್ತಮ ಫೀಚರ್ಸ್ ಇರುವ ಆಡಿಯೊ ಒದಗಿಸುವುದು ಕಂಪನಿ ಗುರಿಯಾಗಿದೆ. ಹೊಸ ಇಯರ್​ಬಡ್ಸ್ ವಿವರ ಇಲ್ಲಿದೆ.

ವೈರ್​ಲೆಸ್ ಬಡ್ಸ್, ಇಯರ್​ಪಾಡ್ಸ್ ಮತ್ತು ಮ್ಯೂಸಿಕ್ ಪ್ರಿಯರಿಗೆ ಈಗ ವಿವಿಧ ಆಯ್ಕೆಗಳು ದೊರೆಯುತ್ತವೆ. ಇಯರ್​ಬಡ್ಸ್, ಇಯರ್​ಪಾಡ್ಸ್, ಹೆಡ್​ಫೋನ್ ಮತ್ತು ವೈರ್​ಲೆಸ್ ಬಡ್ಸ್ ಖರೀದಿಗೆ ವಿವಿಧ ಆಯ್ಕೆಗಳು ದೊರೆಯುತ್ತವೆ. ಉಳಿದಂತೆ, ಜನರ ಅವಶ್ಯಕತೆ ಮತ್ತು ಬಜೆಟ್​ಗೆ ಪೂರಕವಾಗಿ ಹಲವು ಮಾದರಿಗಳು ದೊರೆಯುತ್ತವೆ. ಬಜೆಟ್ ದರಕ್ಕೆ ವಿವಿಧ ಗ್ಯಾಜೆಟ್, ಅಕ್ಸೆಸ್ಸರಿ ಬಿಡುಗಡೆ ಮಾಡಿರುವ ಪಿಟ್ರಾನ್, ಆಕರ್ಷಕ ವಿನ್ಯಾಸದ ಪಿಟ್ರಾನ್ ಬಾಸ್​ಪಾಡ್ಸ್ ಎನ್​ಕೋರ್ ಇಯರ್​ಬಡ್ಸ್ ಪರಿಚಯಿಸಿದೆ. ಬಜೆಟ್ ದರಕ್ಕೆ ಉತ್ತಮ ಫೀಚರ್ಸ್ ಇರುವ ಆಡಿಯೊ ಒದಗಿಸುವುದು ಕಂಪನಿ ಗುರಿಯಾಗಿದೆ. ಹೊಸ ಇಯರ್​ಬಡ್ಸ್ ವಿವರ ಇಲ್ಲಿದೆ. ಪಿಟ್ರಾನ್ ಬಾಸ್​ಪಾಡ್ಸ್ ಎನ್​ಕೋರ್ ಇಯರ್​ಬಡ್ಸ್ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, 50 ಗಂಟೆಗಳ ಪ್ಲೇಬ್ಯಾಕ್ ಒದಗಿಸಲಿದೆ ಟ್ರೂ ವೈರ್​ಲೆಸ್ ಇಯರ್​ಬಡ್ಸ್. ನೀಲಿ, ಕಪ್ಪು ಮತ್ತು ಬೂದು ಬಣ್ಣಗಳಲ್ಲಿ ಲಭ್ಯವಿದೆ ಪಿಟ್ರಾನ್ ಇಯರ್​ಬಡ್ಸ್. ಅಲ್ಲದೆ, ಫ್ಲಿಪ್​ಕಾರ್ಟ್ ಮೂಲಕ ಖರೀದಿಗೆ ಲಭ್ಯವಿದ್ದು, ಪಿಟ್ರಾನ್ ಬಾಸ್​ಪಾಡ್ಸ್ ಎನ್​ಕೋರ್ ಇಯರ್​ಬಡ್ಸ್
₹899 ದರ ಹೊಂದಿದೆ. ನೂತನ ಪಿಟ್ರಾನ್ ಬಾಸ್​ಪಾಡ್ಸ್ ಎನ್​ಕೋರ್ ಇಯರ್​ಬಡ್ಸ್ ಯುಎಸ್​ಬಿ ಟೈಪ್-ಸಿ ಕ್ವಿಕ್ ಚಾರ್ಜಿಂಗ್ ಬೆಂಬಲ ಹೊಂದಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.