AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tecno Spark 10C: ಕಡಿಮೆ ದರಕ್ಕೆ ವೈವಿಧ್ಯಮಯ ಫೀಚರ್ಸ್ ನೀಡುವ ಟೆಕ್ನೋ ಫೋನ್

Tecno Spark 10C: ಕಡಿಮೆ ದರಕ್ಕೆ ವೈವಿಧ್ಯಮಯ ಫೀಚರ್ಸ್ ನೀಡುವ ಟೆಕ್ನೋ ಫೋನ್

ಕಿರಣ್​ ಐಜಿ
|

Updated on: Apr 09, 2023 | 9:15 AM

ಹೊಸ ಫೋನ್ ಶೀಘ್ರದಲ್ಲೇ ಭಾರತದ ಗ್ಯಾಜೆಟ್ ಮಾರುಕಟ್ಟೆ ಪ್ರವೇಶಿಸಲಿದೆ. ಟಕ್ನೋ ಫೋನ್ ಫೀಚರ್ಸ್, ತಾಂತ್ರಿಕ ವೈಶಿಷ್ಟ್ಯಗಳ ವಿವರ ಈ ವಿಡಿಯೊದಲ್ಲಿದೆ. ಆಫ್ರಿಕಾ ಮಾರುಕಟ್ಟೆಗೆ ಹೊಸ ಸ್ಮಾರ್ಟ್​ಫೋನ್ ಬಿಡುಗಡೆಯಾಗಿದೆ.

ಟೆಕ್ನೋ ಫೋನ್ ಬಜೆಟ್ ದರದ ಸ್ಮಾರ್ಟ್​ಫೋನ್ ಎಂದೇ ಹೆಸರು ಗಳಿಸಿದೆ. ಟೆಕ್ನೋ ಕಂಪನಿಯ ವಿವಿಧ ಬ್ರ್ಯಾಂಡ್ ಹೆಸರಿನಲ್ಲಿ ಹಲವು ಮಾದರಿಗಳ ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಪ್ರವೇಶಿಸಿದೆ. ಟೆಕ್ನೋ ಈ ಬಾರಿ ಸ್ಪಾರ್ಕ್ ಸರಣಿಯಲ್ಲಿ ಹೊಸ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಅದಕ್ಕೂ ಮೊದಲು, ಸ್ಪಾರ್ಕ್ ಸರಣಿಯಲ್ಲಿ ನೂತನ ಟೆಕ್ನೋ ಸ್ಪಾರ್ಕ್ 10C ಆಫ್ರಿಕಾದಲ್ಲಿ ಬಿಡುಗಡೆಯಾಗಿದೆ. ಹೊಸ ಫೋನ್ ಶೀಘ್ರದಲ್ಲೇ ಭಾರತದ ಗ್ಯಾಜೆಟ್ ಮಾರುಕಟ್ಟೆ ಪ್ರವೇಶಿಸಲಿದೆ. ಹೊಸ ಟಕ್ನೋ ಫೋನ್ ಫೀಚರ್ಸ್, ತಾಂತ್ರಿಕ ವೈಶಿಷ್ಟ್ಯಗಳ ವಿವರ ಈ ವಿಡಿಯೊದಲ್ಲಿದೆ. ಆಫ್ರಿಕಾ ಮಾರುಕಟ್ಟೆಗೆ ಹೊಸ ಸ್ಮಾರ್ಟ್​ಫೋನ್ ಬಿಡುಗಡೆಯಾಗಿದೆ. ಟೆಕ್ನೋ ಸ್ಪಾರ್ಕ್ ಸರಣಿಯಲ್ಲಿ ಬಿಡುಗಡೆಯಾಗಿರುವ ಟೆಕ್ನೋ ಸ್ಪಾರ್ಕ್ 10C ಫೋನ್, 6.6 ಇಂಚಿನ HD+(720×1612 pixels) ಡಿಸ್​ಪ್ಲೇ 90Hz ರಿಫ್ರೆಶ್ ರೇಟ್ ಹೊಂದಿದೆ. ಅಲ್ಲದೆ, Android 12 ಆಧಾರಿತ HiOS 8.6 ಮೂಲಕ ಕಾರ್ಯನಿರ್ವಹಿಸುತ್ತಿದ್ದು, 16 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಟೆಕ್ನೋ ಫೋನ್​ನಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದ್ದು, ಟೆಕ್ನೋ ಸ್ಪಾರ್ಕ್ 10C ಮಾದರಿ 4 GB+ 128 GB ಸ್ಟೋರೇಜ್ ಆಯ್ಕೆ ಹೊಂದಿದೆ. ಜತೆಗೆ 5,000mAh ಬ್ಯಾಟರಿ ಮತ್ತು 18W ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ.