iQoo Neo 6: ವಿಶೇಷ ಆಫರ್ ₹5,000 ಡಿಸ್ಕೌಂಟ್ನಲ್ಲಿ ಐಕ್ಯೂ ಸ್ಮಾರ್ಟ್ಫೋನ್
ಐಕ್ಯೂ ನಿಯೋ 6 ಸ್ಮಾರ್ಟ್ಫೋನ್ ಮೇಲೆ ₹5,000 ಡಿಸ್ಕೌಂಟ್ ದೊರೆಯುತ್ತಿದೆ. ಅಮೆಜಾನ್ ಮತ್ತು ಐಕ್ಯೂ ಆನ್ಲೈನ್ ತಾಣದಲ್ಲಿ ವಿಶೇಷ ಆಫರ್ ಸಲುವಾಗಿ ₹5,000 ಡಿಸ್ಕೌಂಟ್ ಪ್ರಕಟಿಸಲಾಗಿದೆ.
ಐಕ್ಯೂ ನಿಯೋ ಸ್ಮಾರ್ಟ್ಫೋನ್ ಸರಣಿಯಲ್ಲಿ ಬಿಡುಗಡೆಯಾಗಿರುವ ಐಕ್ಯೂ ನಿಯೋ 6 ಸ್ಮಾರ್ಟ್ಫೋನ್ ಖರೀದಿಸುವವರಿಗೆ ಸಂತಸದ ಸುದ್ದಿ ಒಂದಿದೆ. ಬಳಕೆದಾರರಿಗೆ ಐಕ್ಯೂ ನಿಯೋ 6 ಸ್ಮಾರ್ಟ್ಫೋನ್ ಮೇಲೆ ₹5,000 ಡಿಸ್ಕೌಂಟ್ ದೊರೆಯುತ್ತಿದೆ. ಅಮೆಜಾನ್ ಮತ್ತು ಐಕ್ಯೂ ಆನ್ಲೈನ್ ತಾಣದಲ್ಲಿ ವಿಶೇಷ ಆಫರ್ ಸಲುವಾಗಿ ₹5,000 ಡಿಸ್ಕೌಂಟ್ ಪ್ರಕಟಿಸಲಾಗಿದೆ. ಅದರ ಜತೆಗೆ ಎಕ್ಸ್ಚೇಂಜ್ ಕೊಡುಗೆ ಕೂಡ ಇದ್ದು, ಬಳಕೆದಾರರು ಹಳೆಯ ಫೋನ್ ಎಕ್ಸ್ಚೇಂಜ್ ಮಾಡಿಕೊಂಡು, ಹೊಸ ಫೋನ್ ಖರೀದಿಸಬಹುದು. ಇದರಿಂದ ಇನ್ನಷ್ಟು ಹೆಚ್ಚಿನ ಆಫರ್ ಕೊಡುಗೆಯ ಪ್ರಯೋಜನ ಪಡೆಯಬಹುದು. ಐಕ್ಯೂ ನಿಯೋ 6 ಸ್ಮಾರ್ಟ್ಫೋನ್ ಮೇಲೆ ₹5,000 ಡಿಸ್ಕೌಂಟ್ ಇದ್ದು, 8GB + 128GB RAM ಆವೃತ್ತಿಗೆ ಈ ಮೊದಲು ಇದ್ದ ದರ ₹29,999 ಬದಲು, ಡಿಸ್ಕೌಂಟ್ ಬಳಿಕ ಐಕ್ಯೂ ನಿಯೋ 6 ಫೋನ್ ₹24,999ಕ್ಕೆ ಲಭ್ಯವಿದೆ. 12GB + 256GB ಆವೃತ್ತಿಗೂ ಆಫರ್ ಇದ್ದು ₹28,999ಕ್ಕೆ ಲಭ್ಯವಿದೆ. 6.62 ಇಂಚಿನ E4 AMOLED ಡಿಸ್ಪ್ಲೇ ಹೊಂದಿರುವ ಐಕ್ಯೂ ಫೋನ್, ಎಕ್ಸ್ಚೇಂಜ್ ಮೂಲಕ ₹22,000ಕ್ಕೆ ಫೋನ್ ಖರೀದಿಸುವ ಅವಕಾಶವಿದೆ. ಸ್ನ್ಯಾಪ್ಡ್ರ್ಯಾಗನ್ 870 ಪ್ರೊಸೆಸರ್ ಹೊಂದಿರುವ ಐಕ್ಯೂ ನಿಯೋ 6ರಲ್ಲಿ 64MP+8MP+2MP ತ್ರಿವಳಿ ಹಿಂಬದಿ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
