iQoo Neo 6: ₹5,000 ಭರ್ಜರಿ ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ ಹೊಸ ಸ್ಮಾರ್ಟ್​ಫೋನ್

ವಿಶೇಷ ಆಫರ್ ಮೂಲಕ ₹5,000 ಡಿಸ್ಕೌಂಟ್​ನಲ್ಲಿ ಐಕ್ಯೂ ಸ್ಮಾರ್ಟ್​ಫೋನ್ ದೊರೆಯುತ್ತಿದೆ. ಈ ಫೋನ್ ಖರೀದಿಸಬೇಕು ಎಂದು ನೀವು ಬಯಸಿದ್ದರೆ, iQoo Neo 6 ಈಗ ಆಫರ್ ದರದಲ್ಲಿ ದೊರೆಯುತ್ತಿದೆ. ಅದರ ಜತೆಗೆ ಇಎಂಐ ಮತ್ತು ಹಳೆಯ ಫೋನ್ ಎಕ್ಸ್​ಚೇಂಜ್ ಆಫರ್ ಬಳಸಿದರೆ, ಮತ್ತಷ್ಟು ಹೆಚ್ಚಿನ ಆಫರ್ ನಿಮ್ಮದಾಗಬಹುದು.

iQoo Neo 6: ₹5,000 ಭರ್ಜರಿ ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ ಹೊಸ ಸ್ಮಾರ್ಟ್​ಫೋನ್
ಐಕ್ಯೂ ನಿಯೋ 6 ಸ್ಮಾರ್ಟ್​ಫೋನ್
Follow us
ಕಿರಣ್​ ಐಜಿ
|

Updated on:Apr 07, 2023 | 5:23 PM

ಐಕ್ಯೂ ನಿಯೋ ಸ್ಮಾರ್ಟ್​ಫೋನ್ ಸರಣಿಯಲ್ಲಿ ಬಿಡುಗಡೆಯಾಗಿರುವ ಐಕ್ಯೂ ನಿಯೋ 6 ಸ್ಮಾರ್ಟ್​ಫೋನ್ ಖರೀದಿಸುವವರಿಗೆ ಸಂತಸದ ಸುದ್ದಿ ಒಂದಿದೆ. ಬಳಕೆದಾರರಿಗೆ ಐಕ್ಯೂ ನಿಯೋ 6 (iQoo Neo 6) ಸ್ಮಾರ್ಟ್​ಫೋನ್ ಮೇಲೆ ₹5,000 ಡಿಸ್ಕೌಂಟ್ ದೊರೆಯುತ್ತಿದೆ. ಅಮೆಜಾನ್ ಮತ್ತು ಐಕ್ಯೂ ಆನ್​ಲೈನ್ ತಾಣದಲ್ಲಿ ವಿಶೇಷ ಆಫರ್ ಸಲುವಾಗಿ ₹5,000 ಡಿಸ್ಕೌಂಟ್ ಪ್ರಕಟಿಸಲಾಗಿದೆ. ಅದರ ಜತೆಗೆ ಎಕ್ಸ್​ಚೇಂಜ್ ಕೊಡುಗೆ ಕೂಡ ಇದ್ದು, ಬಳಕೆದಾರರು ಹಳೆಯ ಫೋನ್ ಎಕ್ಸ್​ಚೇಂಜ್ ಮಾಡಿಕೊಂಡು, ಹೊಸ ಫೋನ್ ಖರೀದಿಸಬಹುದು. ಇದರಿಂದ ಇನ್ನಷ್ಟು ಹೆಚ್ಚಿನ ಆಫರ್ ಕೊಡುಗೆಯ ಪ್ರಯೋಜನ ಪಡೆಯಬಹುದು. ಐಕ್ಯೂ ನಿಯೋ ಸರಣಿಯಲ್ಲಿ ಈಗಾಗಲೇ ನಿಯೋ 7 ಫೋನ್ ಬಿಡುಗಡೆಯಾಗಿದೆ. ಹೀಗಾಗಿ, ನಿಯೋ 6 ಫೋನ್ ಡಿಸ್ಕೌಂಟ್​ನಲ್ಲಿ ದೊರೆಯುತ್ತಿದೆ.

ಐಕ್ಯೂ ನಿಯೋ 6 ಆಫರ್

ಐಕ್ಯೂ ನಿಯೋ 6 ಸ್ಮಾರ್ಟ್​ಫೋನ್ ಮೇಲೆ ₹5,000 ಡಿಸ್ಕೌಂಟ್ ಘೋಷಿಸಲಾಗಿದೆ. 8GB + 128GB RAM ಆವೃತ್ತಿಗೆ ಈ ಮೊದಲು ಇದ್ದ ದರ ₹29,999 ಆಗಿದ್ದು, ವಿಶೇಷ ಆಫರ್ ಡಿಸ್ಕೌಂಟ್ ಬಳಿಕ ಐಕ್ಯೂ ನಿಯೋ 6 ಫೋನ್ ₹24,999ಕ್ಕೆ ಲಭ್ಯವಾಗುತ್ತಿದೆ. ಅಲ್ಲದೆ, ಇದೇ ಸರಣಿಯಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ ಮತ್ತೊಂದು ಆವೃತ್ತಿ 12GB + 256GB ಆವೃತ್ತಿಗೂ ಆಫರ್ ಇದ್ದು ₹28,999ಕ್ಕೆ ಲಭ್ಯವಿದೆ. ಪ್ರೀಮಿಯಂ ಲುಕ್ ಹೊಂದಿರುವ ಐಕ್ಯೂ ಫೋನ್ 6.62 ಇಂಚಿನ E4 AMOLED ಡಿಸ್​ಪ್ಲೇ ಹೊಂದಿದೆ. ಅಲ್ಲದೆ, ಬಳಕೆದಾರರು ಐಕ್ಯೂ ಫೋನ್ ಖರೀದಿಸುವಾಗ ಹಳೆಯ ಫೋನ್ ಕೊಟ್ಟು ಎಕ್ಸ್​ಚೇಂಜ್ ಮೂಲಕ ₹22,000ಕ್ಕೆ ಫೋನ್ ಖರೀದಿಸುವ ಅವಕಾಶವೂ ಇದೆ. ಅಂದರೆ ನಿಮ್ಮ ಹಳೆಯ ಫೋನ್​ನ ದರಕ್ಕೆ ಅನುಗುಣವಾಗಿ ಎಕ್ಸ್​ಚೇಂಜ್ ದರದ ಆಫರ್ ಅನ್ವಯವಾಗಲಿದೆ.

ಐಕ್ಯೂ ನಿಯೋ 6 ಕ್ಯಾಮೆರಾ ಮತ್ತು ವಿಶೇಷತೆ

ಐಕ್ಯೂ ನಿಯೋ 6 ಸ್ಮಾರ್ಟ್​ಫೋನ್ ಸ್ನ್ಯಾಪ್​ಡ್ರ್ಯಾಗನ್ 870 ಪ್ರೊಸೆಸರ್ ಹೊಂದಿದೆ. ಹೀಗಾಗಿ ಗೇಮಿಂಗ್​ನಂತಹ ಅಪ್ಲಿಕೇಶನ್ ಸುಲಭದಲ್ಲಿ, ಉತ್ತಮ ಕಾರ್ಯನಿರ್ವಹಣೆ ನೀಡಲು ಸಾಧ್ಯವಾಗುತ್ತದೆ. ಜತೆಗೆ ಐಕ್ಯೂ ನಿಯೋ 6 ಸ್ಮಾರ್ಟ್​ಫೋನ್​ನಲ್ಲಿ 64 MP ಮುಖ್ಯ ಕ್ಯಾಮೆರಾ ಜತೆಗೆ 8 MP +2 MP ತ್ರಿವಳಿ ಹಿಂಬದಿ ಕ್ಯಾಮೆರಾ ಹೊಂದಿದೆ. ಐಕ್ಯೂ ಫೋನ್​ನಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದ್ದು, 4,700mAh ಬ್ಯಾಟರಿ ಮತ್ತು 80W ಫ್ಲ್ಯಾಶ್​ಚಾರ್ಜ್ ಸೌಲಭ್ಯ ಇದರ ವಿಶೇಷತೆಯಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:23 pm, Fri, 7 April 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ