POCO C51: ಕೇವಲ 7,999 ರೂ. ಗೆ ಹೊಸ ಸ್ಮಾರ್ಟ್‌ಫೋನ್ ರಿಲೀಸ್ ಮಾಡಿದ ಪೋಕೋ: ಖರೀದಿಗೆ ಕ್ಯೂ ಗ್ಯಾರಂಟಿ
ಸಮಯ ತೆಗೆದುಕೊಂಡು ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿರುವ ಪೋಕೋ ಇದೀಗ ದೇಶೀಯ ಮಾರುಕಟ್ಟೆಯಲ್ಲಿ ಹೊಸ ಪೋಕೋ ಸಿ51 (POCO C51) ಫೋನನ್ನು ರಿಲೀಸ್ ಮಾಡಿದೆ.
ಪೋಕೋ (Poco) ಸಂಸ್ಥೆ 2023 ರ ಕಳೆದ ಮೂರೂವರೆ ತಿಂಗಳಲ್ಲಿ ಬಿಡುಗಡೆ ಮಾಡಿರುವುದು ಅತಿ ಕಡಿಮೆ ಮೊಬೈಲ್ಗಳನ್ನು. ಅಪರೂಪಕ್ಕೆ ಒಂದೊಂದು ಸ್ಮಾರ್ಟ್ಫೋನ್ಗಳನ್ನಷ್ಟೆ ಅನಾವರಣ ಮಾಡುತ್ತಿದೆ. ಹೀಗಿರುವಾಗ ಇದೀಗ ಪೋಕೋ ಭಾರತೀಯ ಮಾರುಕಟ್ಟೆಯಲ್ಲಿ ದಿಢೀರ್ ಆಗಿ ಕಡಿಮೆ ಬೆಲೆಯ ಆಕರ್ಷಕ ಮೊಬೈಲ್ ಅನ್ನು ಅನಾವರಣ ಮಾಡಿದೆ. ಸಮಯ ತೆಗೆದುಕೊಂಡು ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿರುವ ಪೋಕೋ ಇದೀಗ ದೇಶೀಯ ಮಾರುಕಟ್ಟೆಯಲ್ಲಿ ಹೊಸ ಪೋಕೋ ಸಿ51 (POCO C51) ಫೋನನ್ನು ರಿಲೀಸ್ ಮಾಡಿದೆ. ಇದೊಂದು ಬಜೆಟ್ ಬೆಲೆಯ ಫೋನಾಗಿದ್ದರೂ ಆಕರ್ಷಕ ಫೀಚರ್ಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದೆ. ಹಾಗಾದ್ರೆ ಪೋಕೋ C51 ಫೋನಿನ ಬೆಲೆ ಎಷ್ಟು?, ಏನೆಲ್ಲ ವಿಶೇಷತೆ ಇದೆ? ಎಂಬುದನ್ನು ನೋಡೋಣ.
ಬೆಲೆ ಎಷ್ಟು?:
ಪೋಕೋ C51 ಸ್ಮಾರ್ಟ್‌ಫೋನ್ ಭಾರತದಲ್ಲಿ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಅನಾವರಣಗೊಂಡಿದೆ. ಇದರ 4GB RAM + 64GB ಸ್ಟೋರೇಜ್ ಸಾಮರ್ಥ್ಯಕ್ಕೆ ಕೇವಲ 8,499 ರೂ. ನಿಗದಿ ಮಾಡಲಾಗಿದೆ. ಈ ಫೋನ್ ರಾಯಲ್ ಬ್ಲೂ ಮತ್ತು ಪವರ್ ಬ್ಲಾಕ್ ಬಣ್ಣಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮೂಲಕ ಏಪ್ರಿಲ್ 10 ರಿಂದ ಖರೀದಿಗೆ ಲಭ್ಯವಿದೆ. ಮೊದಲ ಸೇಲ್ ದಿನ 7,999 ರೂ. ಗೆ ಖರೀದಿಸಬಹುದು. ಜೊತೆಗೆ ಫ್ಲಿಪ್ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 5 ರಷ್ಟು ಡಿಸ್ಕೌಂಟ್ ಸಿಗಲಿದೆ.
Experience max power, speed, & performance in the all-new POCO C51 with its MediaTek Helio G36 processor, a 6.52” display, and a 7GB Turbo RAM*.
Sale goes live on 10th April, 12 noon on @flipkart, starting at ₹7,799**.
**Special first sale day price pic.twitter.com/DNTZels62N
— POCO India (@IndiaPOCO) April 7, 2023
Acer Aspire 3 15: ಜನಸಾಮಾನ್ಯರ ಬಳಕೆಗೆ ಸೂಕ್ತ ಏಸರ್ ಲ್ಯಾಪ್ಟಾಪ್
ಏನು ಫೀಚರ್ಸ್?:
ಈ ಸ್ಮಾರ್ಟ್‌ಫೋನ್ 720*1600 ಪಿಕ್ಸೆಲ್ಸ್ ರೆಸಲೂಷನ್ ಸಾಮರ್ಥ್ಯದ 6.52 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಈ ಫೋನಿನ ಡಿಸೈನ್ ಅದ್ಭುತವಾಗಿದ್ದು ಗ್ರಾಹಕರು ಫಿದಾ ಆಗುವುದು ಗ್ಯಾರೆಂಟಿ. ಅಂತೆಯೆ ಮೀಡಿಯಾಟೆಕ್ ಹೀಲಿಯೊ G36 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 13 ಕಾರ್ಯನಿರ್ವಹಿಸಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕವೂ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದು.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಪೋಕೋ C55 ಸ್ಮಾರ್ಟ್‌ಫೋನ್ ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾ ಕೆಲವು ಬೇಸಿಕ್ ಫೀಚರ್ಗಳನ್ನು ಒಳಗೊಂಡಿದೆ.
ಈ ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದುಕೊಂಡಿಲ್ಲ. 4G LTE, Wi-Fi, ಬ್ಲೂಟೂತ್, GPS/ A-GPS, USB ಟೈಪ್-C, 3.55mm ಆಡಿಯೋ ಜ್ಯಾಕ್ ಮತ್ತು ಫಿಂಗರ್ಪ್ರಿಂಟ್ ಸ್ಕ್ಯಾನರ್ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ