OnePlus Nord Buds 2 : ಗದ್ದಲಕ್ಕೆ ಗುಡ್ಬೈ ಹೇಳಿ ಬೆಸ್ಟ್ ಮ್ಯೂಸಿಕ್ ಕೇಳಿಸಿಕೊಳ್ಳಿ
ವಿವಿಧ ಕಂಪನಿಗಳ, ಬ್ರ್ಯಾಂಡ್ಗಳ ಇಯರ್ಬಡ್ಸ್ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಒನ್ಪ್ಲಸ್, ನಾರ್ಡ್ ಬಡ್ಸ್ ಸರಣಿಯಲ್ಲಿ ಹೊಸ ಮಾದರಿಯನ್ನು ಜನತೆಗೆ ಪರಿಚಯಿಸಿದೆ. ಒನ್ಪ್ಲಸ್ ನಾರ್ಡ್ ಬಡ್ಸ್ 2 ವಿಶೇಷತೆಗಳ ವಿಡಿಯೊ ಇಲ್ಲಿದೆ.
ಬಳಕೆದಾರರಿಗೆ ಪ್ರೀಮಿಯಂ ಸ್ಮಾರ್ಟ್ಫೋನ್ ಅನುಭವ ಒದಗಿಸಿದ ಬಳಿಕ ಒನ್ಪ್ಲಸ್, ಆಡಿಯೋ ಕ್ಷೇತ್ರದತ್ತ ಗಮನ ಹರಿಸಿದೆ. ಯುವಜನತೆಗೆ ವೈರ್ಲೆಸ್ ಮ್ಯೂಸಿಕ್ ಕುರಿತು ಕ್ರೇಜ್ ಹೆಚ್ಚಾಗಿರುವುದರಿಂದ, ಇಯರ್ಬಡ್ಸ್ ಮತ್ತು ಇಯರ್ಫೋನ್, ಇಯರ್ಪಾಡ್ ಅಧಿಕ ಸಂಖ್ಯೆಯಲ್ಲಿ ಬೇಡಿಕೆ ಪಡೆದುಕೊಂಡಿದೆ. ಅದಕ್ಕೆ ಪೂರಕವಾಗಿ ವಿವಿಧ ಕಂಪನಿಗಳ, ಬ್ರ್ಯಾಂಡ್ಗಳ ಇಯರ್ಬಡ್ಸ್ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಒನ್ಪ್ಲಸ್, ನಾರ್ಡ್ ಬಡ್ಸ್ ಸರಣಿಯಲ್ಲಿ ಹೊಸ ಮಾದರಿಯನ್ನು ಜನತೆಗೆ ಪರಿಚಯಿಸಿದೆ. ಒನ್ಪ್ಲಸ್ ನಾರ್ಡ್ ಬಡ್ಸ್ 2 ವಿಶೇಷತೆಗಳ ವಿಡಿಯೊ ಇಲ್ಲಿದೆ. ಒನ್ಪ್ಲಸ್ ನಾರ್ಡ್ ಸರಣಿಯಲ್ಲಿ ಬಿಡುಗಡೆಯಾಗಿದೆ ನಾರ್ಡ್ ಬಡ್ಸ್ 2 ಟ್ರೂ ವೈರ್ಲೆಸ್ ಇಯರ್ಫೋನ್ ಅನುಭವ ನೀಡಲಿದೆ. ನಾರ್ಡ್ ಬಡ್ಸ್ 2 ಬಿಳಿ ಮತ್ತು ಬೂದು ಬಣ್ಣದಲ್ಲಿ ಲಭ್ಯವಿದೆ. ಒನ್ಪ್ಲಸ್ ನಾರ್ಡ್ ಬಡ್ಸ್ 2 ಏಪ್ರಿಲ್ 11ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ. ನಾರ್ಡ್ ಬಡ್ಸ್ 2 ಒನ್ಪ್ಲಸ್ ಸ್ಟೋರ್, ಆನ್ಲೈನ್ ಮತ್ತು ಪ್ರಮುಖ ಇ ಕಾಮರ್ಸ್ ತಾಣಗಳಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿದೆ. ಭಾರತದಲ್ಲಿ ₹2,999 ದರ ಹೊಂದಿರುವ ಒನ್ಪ್ಲಸ್ ಬಡ್ಸ್, ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಸೌಲಭ್ಯ ಹೊಂದಿದೆ. IP55 ಡಸ್ಟ್ ಮತ್ತು ವಾಟರ್ ರೆಸಿಸ್ಟ್ ರೇಟಿಂಗ್ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಮೂಲಕ ಚಾರ್ಜಿಂಗ್ ಇದರ ವಿಶೇಷತೆಯಾಗಿದೆ.
ಮೈದುಂಬಿದ ದೂದ್ಸಾಗರ ಜಲಪಾತ: ಫಾಲ್ಸ್ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
