AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

OnePlus Nord CE 3 Lite 5G: ಭಾರತದಲ್ಲಿ ಬಿಡುಗಡೆಯಾಯ್ತು ಬಜೆಟ್ ದರದ ಒನ್​ಪ್ಲಸ್ ಫೋನ್OnePlus Nord CE 3 Lite 5G: ಭಾರತದಲ್ಲಿ ಬಿಡುಗಡೆಯಾಯ್ತು ಬಜೆಟ್ ದರದ ಒನ್​ಪ್ಲಸ್ ಫೋನ್

OnePlus Nord CE 3 Lite 5G: ಭಾರತದಲ್ಲಿ ಬಿಡುಗಡೆಯಾಯ್ತು ಬಜೆಟ್ ದರದ ಒನ್​ಪ್ಲಸ್ ಫೋನ್

ಕಿರಣ್​ ಐಜಿ
ಕಿರಣ್​ ಐಜಿ|

Updated on: Apr 07, 2023 | 9:00 AM

Share

ಒನ್​ಪ್ಲಸ್ ನಾರ್ಡ್ ಸರಣಿಯಲ್ಲಿ ಆರಂಭಿಕ ಹಂತದ ಬಜೆಟ್ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದೆ. ಈ ಬಾರಿ ಅದೇ ಸರಣಿಯಲ್ಲಿ ಮುಂದುವರಿದು, ಮತ್ತೊಂದು ಹೊಸ ನಾರ್ಡ್ ಫೋನ್ ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಒನ್​ಪ್ಲಸ್ ನಾರ್ಡ್ ಸಿಇ 3 ಲೈಟ್ 5G ಫೋನ್ ವಿವರ ಇಲ್ಲಿದೆ.

ಒನ್​ಪ್ಲಸ್, ಪ್ರೀಮಿಯಂ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ಗೆ ಹೆಸರುವಾಸಿ. ಒನ್​ಪ್ಲಸ್ ಬ್ರ್ಯಾಂಡ್ ಮೂಲಕ ವಿವಿಧ ಮಾದರಿಗಳು ಮಾರುಕಟ್ಟೆ ಪ್ರವೇಶಿಸಿವೆ. ಅದರಲ್ಲೂ, ಉತ್ತಮ ಕ್ಯಾಮೆರಾ ಫೀಚರ್ಸ್, ಗರಿಷ್ಠ ಬ್ಯಾಟರಿ ಹಾಗೂ ಗ್ರೇಟ್ ಅನ್ನಿಸುವ ಪರ್ಫಾಮೆನ್ಸ್​ಗೆ ಒನ್​ಪ್ಲಸ್ ಫೋನ್ ಹೆಸರುವಾಸಿಯಾಗಿದೆ. ಒನ್​ಪ್ಲಸ್ ನಾರ್ಡ್ ಸರಣಿಯಲ್ಲಿ ಆರಂಭಿಕ ಹಂತದ ಬಜೆಟ್ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದೆ. ಈ ಬಾರಿ ಅದೇ ಸರಣಿಯಲ್ಲಿ ಮುಂದುವರಿದು, ಮತ್ತೊಂದು ಹೊಸ ನಾರ್ಡ್ ಫೋನ್ ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಒನ್​ಪ್ಲಸ್ ನಾರ್ಡ್ ಸಿಇ 3 ಲೈಟ್ 5G ಫೋನ್ ವಿವರ ಇಲ್ಲಿದೆ. ಒನ್​ಪ್ಲಸ್ ನಾರ್ಡ್ ಸಿಇ 3 ಲೈಟ್ 5G ನೂತನ ಸ್ಮಾರ್ಟ್​​ಫೋನ್ ಬಿಡುಗಡೆಯಾಗಿದ್ದು, ಸ್ನ್ಯಾಪ್​ಡ್ರ್ಯಾಗನ್ 695 ಪ್ರೊಸೆಸರ್ ಸಹಿತ ಬರುತ್ತಿದೆ. ಹೊಸ ಫೋನ್ Nord CE 3 Lite 5Gಯಲ್ಲಿ 6.72 ಇಂಚಿನ ಎಲ್​ಸಿಡಿ ಡಿಸ್​ಪ್ಲೇ ಇದೆ. ಒನ್​ಪ್ಲಸ್ Nord CE 3 Lite 5G ಫೋನ್ 5,000mAh ಬ್ಯಾಟರಿ ಮತ್ತು 67W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದ್ದು, 8GB RAM + 128GB ಆವೃತ್ತಿಗೆ ₹19,999 ದರವಿದೆ. ಅಲ್ಲದೆ, 8GB RAM + 256GB ಮಾದರಿಗೆ ₹21,999 ದರವಿದೆ. Android 13 ಆಧಾರಿತ OxygenOS 13.1 ಓಎಸ್ ಮೂಲಕ ಕಾರ್ಯನಿರ್ವಹಿಸುವ ಫೋನ್​ನಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 2+2 MP ಕ್ಯಾಮೆರಾ ಇದ್ದು, 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

 

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.