Moto G Power 5G: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೋಟೋ G ಪವರ್ 5G ಫೋನ್: ಬೆಲೆ ಎಷ್ಟು?, ಏನು ಫೀಚರ್ಸ್?

ಇಂದು ಮೋಟೋರೊಲಾ ಹೊಸ ಮೋಟೋ ಜಿ ಪವರ್ 5ಜಿ (Moto G Power 5G) ಅನ್ನು ಬಿಡುಗಡೆ ಮಾಡಿದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್, 5,000mAh ಸಾಮರ್ಥ್ಯದ ಬ್ಯಾಟರಿ, ಅತ್ಯುತ್ತಮ ಪ್ರೊಸೆಸರ್​ನಿಂದ ಈ ಫೋನ್ ಆವೃತ್ತವಾಗಿದೆ.

Moto G Power 5G: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮೋಟೋ G ಪವರ್ 5G ಫೋನ್: ಬೆಲೆ ಎಷ್ಟು?, ಏನು ಫೀಚರ್ಸ್?
moto g power 5g
Follow us
|

Updated on:Apr 07, 2023 | 2:24 PM

ಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಮೋಟೋರೊಲಾ (Motorola) ಕಂಪನಿ ಈಗೀಗ ಬಜೆಟ್ ಬೆಲೆಗೆ ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿ ಭದ್ರವಾಗಿ ನೆಲೆಯೂರಲು ಪ್ರಯತ್ನ ಪಡುತ್ತಿದೆ. ಇದಕ್ಕಾಗಿಯೆ ಈ ಹಿಂದೆ ಬಿಡುಗಡೆ ಮಾಡಿದ್ದ ಮೋಟೋ ಜಿ ಪವರ್​ನ (Moto G Power) ಉತ್ತರಾಧಿಕಾರಿಯಾಗಿ ಹೊಸ 5ಜಿ ಸ್ಮಾರ್ಟ್​ಫೋನ್ ಒಂದನ್ನು ಪರಿಚಯಿಸಿದೆ. ಯುಎಸ್ ಮಾರುಕಟ್ಟೆಯಲ್ಲಿ ಇಂದು ಮೋಟೋರೊಲಾ ಹೊಸ ಮೋಟೋ ಜಿ ಪವರ್ 5ಜಿ (Moto G Power 5G) ಅನ್ನು ಬಿಡುಗಡೆ ಮಾಡಿದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್, 5,000mAh ಸಾಮರ್ಥ್ಯದ ಬ್ಯಾಟರಿ, ಅತ್ಯುತ್ತಮ ಪ್ರೊಸೆಸರ್​ನಿಂದ ಈ ಫೋನ್ ಆವೃತ್ತವಾಗಿದೆ. ಇದರ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ಮೋಟೋ G ಪವರ್‌ 5ಜಿ ಸ್ಮಾರ್ಟ್‌ಫೋನ್‌ US ನಲ್ಲಿ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಅನಾವರಣಗೊಂಡಿದೆ. ಇದರ 6GB RAM ಮತ್ತು 256GB ರೂಪಾಂತರದ ಆಯ್ಕೆಗೆ $299.99, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 24,500 ರೂ. ಎನ್ನಬಹುದು. ಮೋಟೋರೊಲಾದ ಅಧಿಕೃತ ವೆಬ್​ಸೈಟ್ ಮತ್ತು ಯುಎಸ್​ನ ಅಮೆಜಾನ್ ತಾಣದಲ್ಲಿ ಈ ಫೋನ್ ಸೇಲ್ ಕಾಣಲಿದೆ. ಭಾರತ ಸೇರಿದಂತೆ ಇತರ ದೇಶಗಳಲ್ಲಿ ಈ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ
Image
OnePlus Nord Buds 2 : ಗದ್ದಲಕ್ಕೆ ಗುಡ್​ಬೈ ಹೇಳಿ ಬೆಸ್ಟ್ ಮ್ಯೂಸಿಕ್ ಕೇಳಿಸಿಕೊಳ್ಳಿ
Image
Motorola Edge 40 Pro: ಮೋಟೊರೊಲಾ ಹೊಸದಾಗಿ ಬಿಡುಗಡೆ ಮಾಡಿದೆ ಸ್ಟೈಲಿಶ್ ಫೋನ್
Image
OnePlus Nord CE 3 Lite 5G: ಭಾರತದಲ್ಲಿ ಬಿಡುಗಡೆಯಾಯ್ತು ಬಜೆಟ್ ದರದ ಒನ್​ಪ್ಲಸ್ ಫೋನ್
Image
Realme GT Neo 5 SE: ಪ್ರೀಮಿಯಂ ಫೀಚರ್ಸ್ ಹೊಂದಿದೆ ರಿಯಲ್​ಮಿ ಹೊಸ GT Neo 5 SE

Acer Aspire 3 15: ಜನಸಾಮಾನ್ಯರ ಬಳಕೆಗೆ ಸೂಕ್ತ ಏಸರ್ ಲ್ಯಾಪ್​ಟಾಪ್

ಫೀಚರ್ಸ್ ಏನಿದೆ?:

ಮೋಟೋ G ಪವರ್‌ 5G ಸ್ಮಾರ್ಟ್‌ಪೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ IPS LCD ಸ್ಕ್ರೀನ್​ನಿಂದ ಕೂಡಿದೆ. 120Hz ರಿಫ್ರೆಶ್​​ರೇಟ್ ನೀಡಲಾಗಿದೆ. ಮೀಡಿಯಾಟೆಕ್‌ ಡೈಮನ್ಸಿಟಿ 930 ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12MP ಮ್ಯಾಕ್ರೋ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಅನ್ನು ಪಡೆದಿದೆ. ಇದರಲ್ಲಿರುವ ಕ್ಯಾಮೆರಾ ಡ್ಯುಯೆಲ್ ಕ್ಯಾಪ್ಚರ್, ಸ್ಪಾಟ್ ಕಲರ್, ಟೈಮ್​ಲಾಪ್ಸ್, ಸ್ಲೋ ಮೋಶನ್ ಸೇರಿದಂತೆ ಅನೇಕ ಆಯ್ಕೆಗಳಿವೆ. 16MP ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಹೊಂದಿದೆ.

5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 802.11, ಬ್ಲೂಟೂತ್ v5.3, GPS/ A-GPS, ಮತ್ತು USB ಟೈಪ್-C ಪೋರ್ಟ್ ಸೇರಿದಂತೆ ಇತ್ತೀಚೆಗಿನ ಎಲ್ಲ ಹೊಸ ಆಯ್ಕೆ ಸೇರಿಸಲಾಗಿದೆ. ಸೈಡ್- ಮೌಂಟೆಡ್ ಸೆನ್ಸಾರ್ ಫಿಂಗರ್​ಪ್ರಿಂಟ್ ಸೆನ್ಸಾರ್ ಅಳವಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:22 pm, Fri, 7 April 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ