Realme GT Neo 5 SE: ಪ್ರೀಮಿಯಂ ಫೀಚರ್ಸ್ ಹೊಂದಿದೆ ರಿಯಲ್​ಮಿ ಹೊಸ GT Neo 5 SE

ರಿಯಲ್​ಮಿ ಜಿಟಿ ನಿಯೊ 5 ಎಸ್​ಇ ವೈಶಿಷ್ಟ್ಯಗಳ ವಿವರ ಇಲ್ಲಿದೆ. ರಿಯಲ್​ಮಿ ಹೊಸ ಜಿಟಿ ನಿಯೊ 5 ಎಸ್​ಇ ಸ್ಮಾರ್ಟ್​ಫೋನ್ ಬಿಡುಗಡೆಯಾಗಿದ್ದು, ಸ್ನ್ಯಾಪ್​ಡ್ರ್ಯಾಗನ್ 7+ Gen 2 ಪ್ರೊಸೆಸರ್ ಬೆಂಬಲ ಹೊಂದಿದೆ

Realme GT Neo 5 SE: ಪ್ರೀಮಿಯಂ ಫೀಚರ್ಸ್ ಹೊಂದಿದೆ ರಿಯಲ್​ಮಿ ಹೊಸ GT Neo 5 SE
|

Updated on: Apr 06, 2023 | 10:10 AM

ಚೀನಾ ಮೂಲದ ರಿಯಲ್​ಮಿ ಕಂಪನಿ, ಭಾರತ ಮಾತ್ರವಲ್ಲದೆ ಜಾಗತಿಕವಾಗಿ ಹಲವು ರಾಷ್ಟ್ರಗಳಲ್ಲಿ ಸ್ಮಾರ್ಟ್​ಫೋನ್ ಮತ್ತು ಗ್ಯಾಜೆಟ್​ಗಳನ್ನು ಮಾರಾಟ ಮಾಡುತ್ತಿದೆ. ಬಜೆಟ್ ದರದ ಸ್ಮಾರ್ಟ್​ಫೋನ್​ನಿಂದ ಆರಂಭಿಸಿ, ಪ್ರೀಮಿಯಂ ಫೋನ್​ವರೆಗೆ ಮಾರುಕಟ್ಟೆಯಲ್ಲಿ ವಿವಿಧ ಮಾದರಿಗಳನ್ನು ರಿಯಲ್​ಮಿ ಪರಿಚಯಿಸಿದೆ. ಜನರ ಬೇಡಿಕೆ ಮತ್ತು ಅವಶ್ಯಕತೆಗೆ ಪೂರಕವಾಗಿ ವಿವಿಧ ಮಾದರಿಗಳ ಸ್ಮಾರ್ಟ್​ಫೋನ್ ದೇಶದಲ್ಲಿ ಲಭ್ಯವಿದೆ. ರಿಯಲ್​ಮಿ ಪ್ರೀಮಿಯಂ ಸರಣಿಯ ಜಿಟಿ ಸರಣಿಯಲ್ಲಿ ಮತ್ತೊಂದು ಆಕರ್ಷಕ ಮಾದರಿ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ರಿಯಲ್​ಮಿ ಜಿಟಿ ನಿಯೊ 5 ಎಸ್​ಇ ವೈಶಿಷ್ಟ್ಯಗಳ ವಿವರ ಇಲ್ಲಿದೆ. ರಿಯಲ್​ಮಿ ಹೊಸ ಜಿಟಿ ನಿಯೊ 5 ಎಸ್​ಇ ಸ್ಮಾರ್ಟ್​ಫೋನ್ ಬಿಡುಗಡೆಯಾಗಿದ್ದು, ಸ್ನ್ಯಾಪ್​ಡ್ರ್ಯಾಗನ್ 7+ Gen 2 ಪ್ರೊಸೆಸರ್ ಬೆಂಬಲ ಹೊಂದಿದೆ. 6.74 ಇಂಚಿನ ಡಿಸ್​ಪ್ಲೇ ಹೊಂದಿರುವ ರಿಯಲ್​ಮಿ GT Neo 5 SE, Android 13 ಆಧಾರಿತ ರಿಯಲ್​ಮಿ UI 4.0 ಬಳಕೆ ಮಾಡುತ್ತದೆ. ಅಲ್ಲದೆ 5,500mAh ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಬೆಂಬಲ
64 MP+8 MP+ 2 MP ತ್ರಿವಳಿ ಕ್ಯಾಮೆರಾ ಹೊಂದಿರುವ ರಿಯಲ್​ಮಿ GT Neo 5 SEಯಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವಿದೆ. 8GB + 256GB, 12GB + 256GB, 12GB + 512GB ಮತ್ತು 16GB + 1TB ಎಂಬ ನಾಲ್ಕು ಆವೃತ್ತಿಗಳಲ್ಲಿ ಲಭ್ಯವಾಗಲಿದ್ದು, ಚೀನಾದಲ್ಲಿ ₹24,000 ಆರಂಭಿಕ ದರ ಹೊಂದಿದೆ. ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗಲಿದೆ.

Follow us