Acer Aspire 3 15: ಜನಸಾಮಾನ್ಯರ ಬಳಕೆಗೆ ಸೂಕ್ತ ಏಸರ್ ಲ್ಯಾಪ್​ಟಾಪ್

Acer Aspire 3 15: ಜನಸಾಮಾನ್ಯರ ಬಳಕೆಗೆ ಸೂಕ್ತ ಏಸರ್ ಲ್ಯಾಪ್​ಟಾಪ್

ಕಿರಣ್​ ಐಜಿ
|

Updated on: Apr 06, 2023 | 9:30 AM

ಬಜೆಟ್ ದರಕ್ಕೆ ಉತ್ತಮ ಫೀಚರ್ ಇರುವ, ಆಕರ್ಷಕ ಮಾದರಿಯ ಎರಡು ಲ್ಯಾಪ್​ಟಾಪ್​ಗಳನ್ನು ಏಸರ್ ಬಿಡುಗಡೆ ಮಾಡಿದೆ. ಏಸರ್ ಅಸ್ಪೈರ್ ಸರಣಿಯಲ್ಲಿ ಬಿಡುಗಡೆಯಾಗಿರುವ ನೂತನ ಸರಣಿಯ ವಿಶೇಷತೆಗಳ ವಿವರ ಇಲ್ಲಿದೆ.

ಶಾಲಾ-ಕಾಲೇಜುಗಳ ಪರೀಕ್ಷೆಗಳು ಮುಗಿಯುತ್ತಿವೆ. ಮುಂದಿನ ಹೊಸ ಶೈಕ್ಷಣಿಕ ವರ್ಷದ ತಯಾರಿಯಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳು ಇರುತ್ತಾರೆ. ಜತೆಗೆ, ಹೊಸ ಕಾಲೇಜು, ಬುಕ್ಸ್ ಜತೆಗೆ ಈಗ ಲ್ಯಾಪ್​ಟಾಪ್ ಅಗತ್ಯವಾಗಿ ಬೇಕಾಗುತ್ತದೆ. ಆನ್​ಲೈನ್ ಕ್ಲಾಸ್ ಮಾತ್ರವಲ್ಲದೆ, ವಿವಿಧ ರೀತಿಯ ಸ್ಕೂಲ್ ಪ್ರಾಜೆಕ್ಟ್, ಪರೀಕ್ಷಾ ತಯಾರಿ ಹಾಗೂ ಇಂಟರ್​ನೆಟ್ ಬ್ರೌಸಿಂಗ್ ಜತೆಗೆ ವೈವಿಧ್ಯಮಯ ಕೆಲಸಗಳಿಗೆ ಲ್ಯಾಪ್​ಟಾಪ್ ಅನಿವಾರ್ಯತೆ ಇರುತ್ತದೆ. ಅಂತಹವರಿಗಾಗಿ, ಬಜೆಟ್ ದರಕ್ಕೆ ಉತ್ತಮ ಫೀಚರ್ ಇರುವ, ಆಕರ್ಷಕ ಮಾದರಿಯ ಎರಡು ಲ್ಯಾಪ್​ಟಾಪ್​ಗಳನ್ನು ಏಸರ್ ಬಿಡುಗಡೆ ಮಾಡಿದೆ. ಏಸರ್ ಅಸ್ಪೈರ್ ಸರಣಿಯಲ್ಲಿ ಬಿಡುಗಡೆಯಾಗಿರುವ ನೂತನ ಸರಣಿಯ ವಿಶೇಷತೆಗಳ ವಿವರ ಇಲ್ಲಿದೆ. ಏಸರ್ ಅಸ್ಪೈರ್ ಸರಣಿಯಲ್ಲಿ ಬಿಡುಗಡೆಯಾಗಿರುವ Aspire 3 15 ಮತ್ತು Aspire 3 14 ಲ್ಯಾಪ್​ಟಾಪ್, ಇಂಟೆಲ್ ಕೋರ್ i3-N305 CPU ಪ್ರೊಸೆಸರ್ ಬೆಂಬಲ ಮತ್ತು ಇಂಟೆಲ್ ಗ್ರಾಫಿಕ್ಸ್ ಬೆಂಬಲ ಹೊಂದಿದೆ. Aspire 3 ಸರಣಿ ಲ್ಯಾಪ್​ಟಾಪ್ ಏಸರ್ Aspire 3 15 ಬೆಲೆ ₹39,999 ಇದ್ದು, ಆನ್​ಲೈನ್​ನಲ್ಲಿ ₹33,990ಕ್ಕೆ ಲಭ್ಯವಿದೆ. ಏಸರ್ Aspire 3 14 ಬೆಲೆ 512GB SSDಗೆ ₹37,990 ದರವಿದೆ. Aspire 3 15 8GB RAM ಮತ್ತು 256GB ಹಾಗೂ 512GB SSD ಆಯ್ಕೆ ಇದ್ದು, 40WHr ಲಿಥಿಯಂ ಆಯಾನ್ ಬ್ಯಾಟರಿ ಹಾಗೂ 45W AC ಅಡಾಪ್ಟರ್ ಹೊಂದಿದೆ. ಜತೆಗೆ Windows 11 ಕಾರ್ಯಾಚರಣೆ ವ್ಯವಸ್ಥೆ ಬಳಸುವ ಏಸರ್ ಅಸ್ಪೈರ್ ಲ್ಯಾಪ್​ಟಾಪ್​ನಲ್ಲಿ ಬ್ಲೂಲೈಟ್ ಶೀಲ್ಡ್ ಮೂಲಕ ಕಣ್ಣಿನ ರಕ್ಷಣೆಗೆ ಹೊಸ ವ್ಯವಸ್ಥೆ ಹೊಂದಿದೆ.