Redmi Note 12 Pro 4G: ಶಓಮಿ ರೆಡ್ಮಿ ಸ್ಮಾರ್ಟ್​ಫೋನ್ ಸರಣಿಯಲ್ಲಿ ಬಂತು ಹೊಸ ರೆಡ್ಮಿ ನೋಟ್

Redmi Note 12 Pro 4G: ಶಓಮಿ ರೆಡ್ಮಿ ಸ್ಮಾರ್ಟ್​ಫೋನ್ ಸರಣಿಯಲ್ಲಿ ಬಂತು ಹೊಸ ರೆಡ್ಮಿ ನೋಟ್

ಕಿರಣ್​ ಐಜಿ
|

Updated on: Apr 06, 2023 | 9:05 AM

ಆನ್​ಲೈನ್ ಫ್ಲ್ಯಾಶ್ ಸೇಲ್ ಮೂಲಕ ಶಓಮಿ ರೆಡ್ಮಿ ಮತ್ತು ಎಂಐ ಫೋನ್​ಗಳು ಭಾರತದಲ್ಲಿ ಗರಿಷ್ಠ ಸಂಖ್ಯೆಯ ಜನಪ್ರಿಯತೆ ಗಳಿಸಿದ್ದು, ಮಾರಾಟ ವೃದ್ಧಿಸಿಕೊಂಡಿದೆ. ಶಓಮಿ ಕಂಪನಿಯ ನೋಟ್ ಸರಣಿಯ ಬ್ರ್ಯಾಂಡ್​ನಲ್ಲಿ ಹೊಸ ಶಓಮಿ ರೆಡ್ಮಿ ನೋಟ್ 12 Pro 4G ಫೋನ್ ಬಿಡುಗಡೆಯಾಗಿದ್ದು, ಅದರ ವಿಶೇಷತೆ, ವಿವರ ಇಲ್ಲಿದೆ.

ಶಓಮಿ ರೆಡ್ಮಿ ಮತ್ತು ಎಂಐ ಫೋನ್​ಗಳಿಗೆ ಭಾರತದಲ್ಲಿ ಹೆಚ್ಚಿನ ಪ್ರಮಾಣದ ಮಾರುಕಟ್ಟೆಯಿದೆ. ಕಳೆದ ಎಂಟು ವರ್ಷಗಳಲ್ಲಿ ಶಓಮಿ ಕಂಪನಿ ಭಾರತದಲ್ಲಿ ವಿವಿಧ ಮಾದರಿಯ ಸ್ಮಾರ್ಟ್​ಫೋನ್​ಗಳನ್ನು ಮಾರಾಟ ಮಾಡಿದೆ. ಆನ್​ಲೈನ್ ಫ್ಲ್ಯಾಶ್ ಸೇಲ್ ಮೂಲಕ ಶಓಮಿ ರೆಡ್ಮಿ ಮತ್ತು ಎಂಐ ಫೋನ್​ಗಳು ಭಾರತದಲ್ಲಿ ಗರಿಷ್ಠ ಸಂಖ್ಯೆಯ ಜನಪ್ರಿಯತೆ ಗಳಿಸಿದ್ದು, ಮಾರಾಟ ವೃದ್ಧಿಸಿಕೊಂಡಿದೆ. ಶಓಮಿ ಕಂಪನಿಯ ನೋಟ್ ಸರಣಿಯ ಬ್ರ್ಯಾಂಡ್​ನಲ್ಲಿ ಹೊಸ ಶಓಮಿ ರೆಡ್ಮಿ ನೋಟ್ 12 Pro 4G ಫೋನ್ ಬಿಡುಗಡೆಯಾಗಿದ್ದು, ಅದರ ವಿಶೇಷತೆ, ವಿವರ ಇಲ್ಲಿದೆ. ಶಓಮಿ ಹೊಸ ರೆಡ್ಮಿ ನೋಟ್ 12 Pro 4G ಫೋನ್ ಬಿಡುಗಡೆಯಾಗಿದ್ದು, 6.67 ಇಂಚಿನ HD+ (1,080×2,400 ಪಿಕ್ಸೆಲ್ಸ್) AMOLED ಡಿಸ್​ಪ್ಲೇ ಹೊಂದಿದೆ. Android 12 ಆಧಾರಿತ MIUI 13 ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಸ್ನ್ಯಾಪ್​ಡ್ರ್ಯಾಗನ್ 732G ಪ್ರೊಸೆಸರ್ ಬಳಸಿರುವ ರೆಡ್ಮಿ ನೋಟ್ 12 Pro 4Gಯಲ್ಲಿ 108 MP+ 8 MP+ 2 MP ಹಿಂಬದಿ ಕ್ಯಾಮೆರಾ ಹಾಗೂ  16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಜತೆಗೆ, 5,000mAh ಬ್ಯಾಟರಿ ಜತೆಗೆ 67W ಟರ್ಬೋ ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.