Instagram Down: ಇನ್ಸ್ಟಾಗ್ರಾಮ್ ಡೌನ್​​, ನಿಮ್ಮ ಹೊಸ ನವೀಕರಣ ಇದಕ್ಕೆ ಕಾರಣ

ಇನ್ಸ್ಟಾಗ್ರಾಮ್ ಡೌನ್​​ ಆಗಿರುವ ಕಾರಣ ಅನೇಕ ಬಳಕೆದಾರರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಬಳಕೆ ಮಾಡಲಾಗುತ್ತಿಲ್ಲ ಎಂದು ಹೇಳಿದ್ದಾರೆ.

Instagram Down: ಇನ್ಸ್ಟಾಗ್ರಾಮ್ ಡೌನ್​​, ನಿಮ್ಮ ಹೊಸ ನವೀಕರಣ ಇದಕ್ಕೆ ಕಾರಣ
Instagram
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 05, 2023 | 10:47 AM

ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಕೋಟ್ಯಾಂತರ ಜನ ಬಳಸುತ್ತಿರುತ್ತಾರೆ. ಆದರೆ ಅದು ಕೈಕೊಟ್ಟಾಗ ಮಾತ್ರ ಆಗುವ ಸಮಸ್ಯೆ ಯಾರಿಗೂ ಹೇಳಲು ಸಾಧ್ಯವಿಲ್ಲ, ಹೌದು ಇದೀಗ ಸಾಮಾಜಿಕ ಜಾಲತಾಣಗಳ ಒಂದು ಭಾಗವಾಗಿರುವ ಇನ್ಸ್ಟಾಗ್ರಾಮ್ ಡೌನ್ ಆಗಿದೆ. ಇನ್ಸ್ಟಾಗ್ರಾಮ್ ಡೌನ್​​ ಆಗಿರುವ ಕಾರಣಕ್ಕೆ ಅನೇಕ ಬಳಕೆದಾರರೂ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಬಳಕೆ ಮಾಡಲಾಗುತ್ತಿಲ್ಲ ಎಂದು ಹೇಳಿದ್ದಾರೆ. ಇದೀಗ Instagramನಲ್ಲಿ ತಮ್ಮ ಫೋಟೋ, ರೀಲ್ಸ್​​ಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಇಂದು ಇನ್ಸ್ಟಾಗ್ರಾಮ್ ಜಾಗತಿಕ ಮಟ್ಟದಲ್ಲಿ ಡೌನ್ ಆಗಿದೆ ಎಂದು ಇನ್ಸ್ಟಾಗ್ರಾಮ್ ಕೂಡ ಹಂಚಿಕೊಂಡಿದೆ. ಇನ್ಸ್ಟಾಗ್ರಾಮ್ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಅಪ್ಲಿಕೇಶನ್ ಕ್ರ್ಯಾಶ್ ಆಗಿದೆ ಎಂದು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಈ ಡೌನ್ ನಿಮ್ಮ ಇತ್ತೀಚಿನ ನವೀಕರಣವು (New Updates) ಅಪ್ಲಿಕೇಶನ್ ಕ್ರ್ಯಾಶ್‌ಗೆ ಕಾರಣವಾಗುತ್ತಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ಡೌನ್​​ಗೆ​​ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ, ಆದರೆ ಅನೇಕ ಬಳಕೆದಾರರು ಅಪ್ಲಿಕೇಶನ್ ಲೋಡ್ ಆಗದೆ ಮತ್ತು ಅದನ್ನು ಬಳಸಲು ಪ್ರಯತ್ನಿಸಿದಾಗ ಕ್ರ್ಯಾಶ್ ಆಗದೆ ಇರುವ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಇದರಿಂದ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಎರಡರ ಮೇಲೂ ಪರಿಣಾಮ ಬೀರಿದೆ.

ಇದನ್ನೂ ಓದಿ:Instagram Blue Tick: ಇನ್​ಸ್ಟಾಗ್ರಾಮ್, ಫೇಸ್​ಬುಕ್​ನಲ್ಲಿ ಬಂದೇ ಬಿಡ್ತು ಹಣ ಕೊಟ್ಟು ಬ್ಲೂ ಟಿಕ್ ಪಡೆಯುವ ಆಯ್ಕೆ: ಬೆಲೆ ಎಷ್ಟು?

ಬಳಕೆದಾರರು ಇನ್ಸ್ಟಾಗ್ರಾಮ್​​ನ ಈ ಸಮಸ್ಯೆಯನ್ನು ವರದಿ ಮಾಡಲು ಮತ್ತು ತಮ್ಮ ಪ್ರತಿನಿತ್ಯ ಇನ್ಸ್ಟಾಗ್ರಾಮ್ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ ಎಂದು ಇನ್ಸ್ಟಾಗ್ರಾಮ್​​ಗೆ ವರದಿ ಮಾಡಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ ಮತ್ತು ತಮ್ಮ ಖಾತೆಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಕೆಲವು ಬಳಕೆದಾರರು ಹೊಸ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್ ಡೌನ್​​ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಕಂಪನಿಯ ಟ್ವಿಟರ್ ಖಾತೆಯು ಸಮಸ್ಯೆಯನ್ನು ಒಪ್ಪಿಕೊಂಡಿದೆ ಮತ್ತು ಅವರು ಸರಿಪಡಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Published On - 10:47 am, Wed, 5 April 23