Space Observatory: ಮಕ್ಕಳಿಗಾಗಿ ಬಾಹ್ಯಾಕಾಶ ವೀಕ್ಷಣಾಲಯ ನಿರ್ಮಿಸಿದ ಹೌಸಿಂಗ್ ಸೊಸೈಟಿ; ಮನೆಯಲ್ಲಿಯೇ ತಯಾರಿಸಿದ ಟೆಲಿಸ್ಕೋಪ್ನಿಂದ ಬಾಹ್ಯಾಕಾಶ ವೀಕ್ಷಣೆ
10-ಇಂಚಿನ ನ್ಯೂಟೋನಿಯನ್ ಪ್ರತಿಫಲಕ ದೂರದರ್ಶಕವನ್ನು (Newtonian Reflector Telescope) ಮಹೇಶ್ ರವಿವರ್ಮ ಅವರು ಮನೆಯಲ್ಲಿಯೇ ತಯಾರಿಸಿದ್ದಾರೆ. ಇದನ್ನು ತಯಾರಿಸಲು ರವಿವರ್ಮ ಅವರಿಗೆ ಸುಮಾರು ರೂ.5 ರಿಂದ 10 ಲಕ್ಷ ವೆಚ್ಚ ತಗುಲಿದೆ.
ಬೆಂಗಳೂರು: ಹೆಣ್ಣೂರು (Hennur) ಸಮೀಪದ ಹೌಸಿಂಗ್ ಸೊಸೈಟಿಯೊಂದು (Housing Society)ಯುವ ಮನಸ್ಸುಗಳಿಗೆ ಸ್ಪೂರ್ತಿ ನೀಡಲು ಹೊಸ ಮಾರ್ಗವನ್ನು ಕಂಡುಕೊಂಡಿದೆ. ಪೂರ್ವ ಪಾಮ್ ಬೀಚ್‌ನ (Purva Palm Beach) ನಿವಾಸಿಗಳ ಕಲ್ಯಾಣ ಸಂಘವು ಎಲ್ಲಾ ನಿವಾಸಿಗಳಿಗೆ, ವಿಶೇಷವಾಗಿ ಯುವಕರಿಗೆ ಹೆಚ್ಚಿನ ಜ್ಞಾನದ ವಿನಿಮಯ ಮತ್ತು ಸಾಮಾಜಿಕ ಬಾಂಧವ್ಯಕ್ಕೆ ಅನುಕೂಲವಾಗುವಂತೆ ಬಾಹ್ಯಾಕಾಶ ವೀಕ್ಷಣಾಲಯವನ್ನು (Space Observatory) ಅಪಾರ್ಟ್ಮೆಂಟ್ ಒಳಗೆ ನಿರ್ಮಿಸಿದೆ. 10-ಇಂಚಿನ ನ್ಯೂಟೋನಿಯನ್ ಪ್ರತಿಫಲಕ ದೂರದರ್ಶಕವನ್ನು (Newtonian Reflector Telescope) ಮಹೇಶ್ ರವಿವರ್ಮ ಅವರು ಮನೆಯಲ್ಲಿಯೇ ತಯಾರಿಸಿದ್ದಾರೆ. ಇದನ್ನು ತಯಾರಿಸಲು ರವಿವರ್ಮ ಅವರಿಗೆ ಸುಮಾರು ರೂ.5 ರಿಂದ 10 ಲಕ್ಷ ವೆಚ್ಚ ತಗುಲಿದೆ.
ಬಾಹ್ಯಾಕಾಶ ವೀಕ್ಷಣಾಲಯವನ್ನು ಸ್ಥಳೀಯ ನಿವಾಸಿ ಮಹೇಶ್ ರವಿವರ್ಮ ಅವರು ಖಗೋಳಶಾಸ್ತ್ರಜ್ಞರ ಸಹಾಯದಿಂದ ನಿರ್ಮಿಸಿದ್ದಾರೆ. “ನಾನು ಸಾಕಷ್ಟು ನಕ್ಷತ್ರ ವೀಕ್ಷಣೆ ಮಾಡುತ್ತೇನೆ ಮತ್ತು ನಾನು ಆಕಾಶವನ್ನು ವೀಕ್ಷಿಸಲು ಬಯಸಿದಾಗ ಪ್ರತಿ ಬಾರಿ 60 ಕೆಜಿ ತೂಕದ ಉಪಕರಣಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಈ ವೀಕ್ಷಣಾಲಯವನ್ನು ನಿರ್ಮಿಸುವ ಆಲೋಚನೆ ನನಗೆ ಬಂದಿತು. ಪ್ರತಿ ಬಾರಿ ಈ ಚಟುವಟಿಕೆಯಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಂಡಾಗ ಅವರು ಸಂತೋಷ ಪಡುವುದನ್ನು ನಾನು ಗಮನಿಸಿದೆ, ನಂತರ ಈ ವೀಕ್ಷಣಾಲಯ ಮಕ್ಕಳಿಗೆ ಮಾತ್ರ ಸೀಮತವಾಗದೆ ಎಲ್ಲರು ಈ ವೀಕ್ಷಣಾಲಯದಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಯೋಚಿಸಿದೆ” ಎಂದು ರವಿವರ್ಮ ಅವರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು.
ರವಿವರ್ಮ ಮತ್ತು ರೆಸಿಡೆನ್ಶಿಯಲ್ ಸೊಸೈಟಿಯ ಇತರ ಹಿರಿಯರ ಪ್ರಕಾರ, ರವಿವರ್ಮ ಅವರೊಂದಿಗಿನ ಒಂದು ಅಥವಾ ಎರಡು ವೀಕ್ಷಣೆ ಅವಧಿಗಳ ನಂತರ ಮಕ್ಕಳಲ್ಲಿ ಉತ್ತಮ ಬದಲಾವಣೆಗಳು ಕಂಡಿದೆ. ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿದ್ದಾರೆ, ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸ್ವತಃ ಮಕ್ಕಳೇ ಇಷ್ಟ ಆಸಕ್ತಿ ತೋರಿಸುತ್ತಿದ್ದಾರೆ ಎಂದು ರವಿವರ್ಮ ಅವರು ಹೇಳಿದರು.
ರವಿವರ್ಮ ಅವರು ತಮ್ಮ ನೆರೆಹೊರೆಯವರ ಬಳಿ ಬಹ್ಯಾಕಾಶ ವೀಕ್ಷಣಾಲಯದ ಸ್ಥಾಪಿಸುವುದರ ಕುರಿತು ಮಾತನಾಡಿದಾಗ, ಎಲ್ಲರೂ ಒಗ್ಗೂಡಿ ಯೋಜನೆಗೆ ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ಕೊಡುಗೆ ನೀಡಿದರು. ಹತ್ತಿರದಲ್ಲೇ ಇರುವ ಒಂದು ಅಂತರಾಷ್ಟ್ರೀಯ ಶಾಲೆ ಮತ್ತು ಹೌಸಿಂಗ್ ಸೊಸೈಟಿಯ ಬಿಲ್ಡರ್ ಕೂಡ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. “ಈ ರಚನೆಯನ್ನು ಪುನರಾವರ್ತಿಸಲು ಮತ್ತು ಅಂತಹುದೇ ಉಪಕರಣಗಳನ್ನು ಖರೀದಿಸಿದರೆ, ವೆಚ್ಚವು 5-10 ಲಕ್ಷ ರೂಪಾಯಿಗಳವರೆಗೆ ಬರುತ್ತದೆ” ಎಂದು ರವಿವರ್ಮ ಮಾಹಿತಿ ನೀಡಿದರು.
ಇದನ್ನೂ ಓದಿ: ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ಹೊಸಬರಿಗೆ ಮಣೆ, ಏ.8ಕ್ಕೆ ಅಂತಿಮ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ
ಬಾಹ್ಯಾಕಾಶ ವೀಕ್ಷಣಾಲಯವು ಒಂದು ಜೋಡಿ ಬೈನಾಕ್ಯುಲರ್‌ಗಳು ಮತ್ತು ಎರಡು ದೂರದರ್ಶಕಗಳನ್ನು ಹೊಂದಿದೆ. ದೂರದರ್ಶಕಗಳಲ್ಲಿ ಒಂದನ್ನು ರವಿವರ್ಮ ನಿರ್ಮಿಸಿ ವೀಕ್ಷಣಾಲಯಕ್ಕೆ ನೀಡಿದ್ದರು. “ಇದು 10-ಇಂಚಿನ ನ್ಯೂಟೋನಿಯನ್ ಪ್ರತಿಫಲಕವಾಗಿದೆ. ನಾವು ದೂರದರ್ಶಕದ ಶಕ್ತಿಯನ್ನು ನಮ್ಮ ಕಣ್ಣುಗಳಿಗೆ ಹೋಲಿಸುವುದಾದರೆ, ನಮ್ಮ ಕಣ್ಣುಗಳು 2.5 ಮಿಮೀ ವ್ಯಾಸವನ್ನು ಹೊಂದಿವೆ ಮತ್ತು ಈ ದೂರದರ್ಶಕವು 250 ಮಿಮೀ ವ್ಯಾಸವನ್ನು ಹೊಂದಿದೆ ಎಂದು ಅರ್ಥಮಾಡಿಕೊಳ್ಳೋಣ. ಅಂದರೆ ಅದು 100 ಪಟ್ಟು ದೊಡ್ಡದಾಗಿದೆ ಮತ್ತು ನಮ್ಮ ಕಣ್ಣುಗಳಿಗಿಂತ 10,000 ಪಟ್ಟು ಹೆಚ್ಚು ಬೆಳಕನ್ನು ಸಂಗ್ರಹಿಸಬಲ್ಲದು” ಎಂದು ಅವರು ವಿವರಿಸಿದರು. ಇದನ್ನು ನಿರ್ಮಿಸಲು ರವಿವರ್ಮ ನಾಲ್ಕು ತಿಂಗಳು ತೆಗೆದುಕೊಂಡರು.
ಬಾಹ್ಯಾಕಾಶ ವೀಕ್ಷಣಾಲಯವನ್ನು ಭಾನುವಾರ ಉದ್ಘಾಟಿಸಲಾಯಿತು. ಪ್ರವೇಶ ಶುಲ್ಕವನ್ನು ಪಾವತಿಸಿದ ನಂತರ ಬಾಹ್ಯಾಕಾಶ ವೀಕ್ಷಣೆಗೆ ಅನುಮತಿಸಲಾಗುತ್ತದೆ. ಈ ಹೌಸಿಂಗ್ ಸೊಸೈಟಿ ಮಕ್ಕಳಿಗಾಗಿ ಖಗೋಳಶಾಸ್ತ್ರ ಕ್ಲಬ್ ಅನ್ನು ನಡೆಸುತ್ತದೆ ಇಲ್ಲಿ ಮಕ್ಕಳು ವಿಷಯವನ್ನು ಸಕ್ರಿಯವಾಗಿ ಚರ್ಚಿಸಬಹುದು.