ಡಿನ್ನರ್ ಮೀಟಿಂಗ್ಗಳ ಬಗ್ಗೆ ಪ್ರಶ್ನೆ ತೆಗೆದಿಕೊಳ್ಳಲಿಚ್ಛಿಸದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಮಹಾತ್ಮಾ ಗಾಂಧಿಯವರು ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡ ಸಂದರ್ಭದ ಶತಮಾನೋತ್ಸವ ಸಮಾವೇಶ ನಡೆಯುತ್ತಿದ್ದ ಸಮಯದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನ ಹೊಂದಿದ್ದರಿಂದ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಗಿತ್ತು, ಅದನ್ನು ಪೂರ್ತಿಗೊಳಿಸುವ ನಿಟ್ಟಿನೆಡೆ ಡಿಕೆ ಶಿವಕುಮಾರ್ ಕಾರ್ಯಪ್ರವೃತ್ತರಾಗಿ ಸಭೆ ಮತ್ತು ಸುದ್ದಿಗೋಷ್ಠಿಗಳನ್ನು ನಡೆಸುತ್ತಿದ್ದಾರೆ.
ಬೆಂಗಳೂರು: ಗಾಂಧಿ ಭಾರತ ಸಮಾವೇಶವನ್ನು ಪುನರಾರಂಭಿಸಿ ಪೂರ್ತಿಗೊಳಿಸುವ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಡಿನ್ನರ್ ಮೀಟಿಂಗ್ಗಳ ಬಗ್ಗೆ ಕೇಳಿದಾಗ ಅವರು ಮಾತಾಡಲು ಇಷ್ಟಪಡಲಿಲ್ಲ. ತಾನಿಲ್ಲಿ ಕೇವಲ ಗಾಂಧಿ ಭಾರತ ಸಮಾವೇಶ, ಜೈ ಬಾಪು, ಜೈ ಭೀಮ್ ಜೈ ಸಂವಿಧಾನ ರ‍್ಯಾಲಿ ಬಗ್ಗೆ ಮಾತಾಡಲು ಪತ್ರಿಕಾ ಗೋಷ್ಠಿ ನಡೆಸುತ್ತಿದ್ದೇನೆ, ಬೇರೆ ಯಾವುದೇ ವಿಷಯದಲ್ಲಿ ಮಾತಾಡಲ್ಲ ಎನ್ನುತ್ತಾರೆ. ಪರಮೇಶ್ವರ್ ಕರೆದ ಸಭೆಯನ್ನು ರದ್ದಾಗಿರುವುದಕ್ಕೆ ನಿಮ್ಮನ್ನು ದಲಿತ ವಿರೋಧಿ ಎನ್ನುತ್ತಿದ್ದಾರೆ ಅಂತ ಪತ್ರಕರ್ತರೊಬ್ಬರು ಹೇಳಿದಾಗ, ಅದರ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ, ಮಾಹಿತಿ ಸಂಗ್ರಹಿಸಿ ಉತ್ತರ ಹೇಳುತ್ತೇನೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಎಐಸಿಸಿ ಶಿವಕುಮಾರ್ ಜೊತೆ ಕಮಿಟ್ಮೆಂಟ್ ಮಾಡಿಕೊಂಡಿದೆ, ಸಿದ್ದರಾಮಯ್ಯ ಸ್ಥಾನ ತೆರವು ಮಾಡಲೇಬೇಕು: ಹೆಚ್ ವಿಶ್ವನಾಥ್
Published on: Jan 08, 2025 08:31 PM
Latest Videos