ಕರ್ನಾಟಕದಲ್ಲಿ 8 ಅಧಿಕಾರಿಗಳ ಮನೆ ಮೇಲೆ ಲೋಕಾ ದಾಳಿ: ಕೋಟಿ ಕೋಟಿ ಸಂಪತ್ತು ಕಂಡು ಶಾಕ್
ಲೋಕಾಯುಕ್ತ ಪೊಲೀಸರು ಕರ್ನಾಟಕದಾದ್ಯಂತ ಎಂಟು ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿ ಭ್ರಷ್ಟಾಚಾರವನ್ನು ಬಯಲು ಮಾಡಿದ್ದಾರೆ. ಬೆಂಗಳೂರು, ಬೆಳಗಾವಿ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆದ ದಾಳಿಯಲ್ಲಿ ಅಕ್ರಮ ಆಸ್ತಿ, ಹಣ ಮತ್ತು ಒಡವೆಗಳು ಪತ್ತೆಯಾಗಿವೆ. ಯಾವೆಲ್ಲಾ ಅಧಿಕಾರಿಗಳು ಎಷ್ಟೆಷ್ಟು ಆಸ್ತಿ ಪಾಸ್ತಿಗಳನ್ನು ಹೊಂದಿದ್ದಾರೆ. ಇಲ್ಲಿದೆ ಮಾಹಿತಿ.
ಬೆಂಗಳೂರು, ಜನವರಿ 08: ಸರ್ಕಾರಿ ಉದ್ಯೋಗವಿದ್ದರೂ ಕೈ ತುಂಬ ಸಂಬಳವಿದ್ದರೂ ಅಧಿಕಾರಿಗಳ ದುಡ್ಡಿನಾಸೆಗೆ ಅಡ್ಡದಾರಿ ಹಿಡಿದಿದ್ದಾರೆ. ಇಂಥಾ ಭ್ರಷ್ಟರನ್ನ ಲೋಕಾಯುಕ್ತ (Lokayukta) ಪೊಲೀಸರು ಬೇಟೆಯಾಡಿದ್ದಾರೆ. ಬೆಂಗಳೂರು ಸೇರಿ ಕರ್ನಾಟಕದಾದ್ಯಂತ ಎಂಟು ಸರ್ಕಾರಿ ಅಧಿಕಾರಿಗಳ ಮನೆ ಸೇರಿದಂತೆ 38 ಕಡೆಗಳಲ್ಲಿ ಲೋಕಾಯುಕ್ತ ದಾಳಿ ಮಾಡಿ, ಭರ್ಜರಿ ಬೇಟೆಯಾಡಿದ್ದಾರೆ. ಸ್ಥಿರ ಆಸ್ತಿ, ಚರಾ ಆಸ್ತಿ, ಸೇರಿದಂತೆ ಒಡವೆ ವಾಹನಗಳ ದಾಖಲೆಗಳನ್ನು ಪರಿಶೀಲನೆ ಮಾಡಿದ್ದು, ಕೊಟ್ಯಂತರ ರೂ ಪತ್ತೆ ಆಗಿದೆ.
ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾಗೆ ಸೇರಿದ ಚಂದ್ರಲೇಔಟ್ ದೀಪಾಂಜಲಿನಗರದಲ್ಲಿರುವ ನಿವಾಸ, ಸಕಲೇಶಪುರದಲ್ಲಿರುವ ಮನೆ ಮೇಲೆ ದಾಳಿ ಮಾಡಿ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಡಿವೈಎಸ್ ಪಿ ಗಿರೀಶ್, ಇನ್ಸ್ ಪೆಕ್ಟರ್ ಬಸವರಾಜ ಪುಲಾರಿ ನೇತೃತ್ವದ 15 ಜನ ಅಧಿಕಾರಿ ಸಿಬ್ಬಂದಿ ತಂಡ ದಾಳಿ ಮಾಡಿತ್ತು.
ಇದನ್ನೂ ಓದಿ: ಬೆಂಗಳೂರು ಸೇರಿ ವಿವಿಧೆಡೆ ಲೋಕಾಯುಕ್ತ ದಾಳಿ: ಬೆಳ್ಳಂಬೆಳಗ್ಗೆಯೇ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ಲೋಕಾ
15 ಪೊಲೀಸರನ್ನ ಕಂಡು ಶೋಭಾ ಏಕಾಏಕಿ ಗಾಬರಿಗೊಂಡಿದ್ದರು. ತಮ್ಮ ವೈಯಕ್ತಿಕ ವಿಚಾರಗಳನ್ನ ಹೇಳ್ಕೊಂಡು ಕಣ್ಣೀರಿಟ್ಟಿದ್ದಾರೆ. 2 ತಿಂಗಳ ಹಿಂದೆ ಶೋಭಾರ 20 ವರ್ಷದ ಪುತ್ರಿ ಸಾವನ್ನಪ್ಪಿದ್ದರೆ, ಪತಿ ಕೂಡ ಮೃತಪಟ್ಟಿದ್ದಾರೆ. ಲೋಕಾಯುಕ್ತ ದಾಳಿಯಿಂದ ಶೋಭಾ ಮಾನಸಿಕವಾಗಿ ಆಘಾತಗೊಂಡಿದ್ದಾರೆ.
1) ಜಂಟಿ ಆಯುಕ್ತೆ ಎಂ ಶೋಭಾ ಮನೆ ಸೇರಿ 6 ಕಡೆಗಳಲ್ಲಿ ತಲಾಶ್
- ನಿವೇಶನ, ಮನೆ, 21 ಎಕರೆ ಜಮೀನು ಸೇರಿ ಸ್ಥಿರಾಸ್ತಿ ಮೌಲ್ಯ 45,35000
- 35,300 ನಗದು, 60 ಲಕ್ಷ ಮೌಲ್ಯದ ಚಿನ್ನಾಭರಣ
- 20 ಲಕ್ಷ ರೂ ಬೆಲೆಬಾಳುವ ವಾಹನ, 1 ಕೋಟಿ 60 ಲಕ್ಷ ಬ್ಯಾಂಕ್ ಠೇವಣಿ
- LIC, 23,50,000 ಬೆಲೆ ಬಾಳುವ ಗೃಹಪಯೋಗಿ ವಸ್ತು ಸೇರಿದಂತೆ
- ಒಟ್ಟು ಆಸ್ತಿ ಮೌಲ್ಯವೇ 3,09,21,300.
2) ಬೆಳಗಾವಿ ಜಿಲ್ಲೆ ಖಾನಾಪುರ ತಹಶೀಲ್ದಾರ್ ಪ್ರಕಾಶ್ ಶ್ರೀಧರ್ ಗಾಯಕವಾಡ್
- ಖಾನಾಪುರ ತಹಶೀಲ್ದಾರ್‌ಗೆ ಸೇರಿದ 8 ಕಡೆ ಲೋಕಾ ದಾಳಿ ನಡೆದಿತ್ತು
- ತಹಶೀಲ್ದಾರ್ ಪ್ರಕಾಶ್ ಬಳಿ 4,41,12,585 ರೂ. ಮೌಲ್ಯದ ಆಸ್ತಿ ಪತ್ತೆ
- 2 ನಿವೇಶನ, 3 ವಾಸದ ಮನೆ , 28 ಎಕರೆ ಕೃಷಿ ಭೂಮಿ ಸೇರಿದಂತೆ ಒಟ್ಟು 3 ಕೋಟಿ 58 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಪತ್ತೆ.
- ನಗದು, ಚಿನ್ನಾಭರಣ ಸೇರಿ 83,12,585 ರೂ. ಮೌಲ್ಯದ ಚರಾಸ್ತಿ ಪತ್ತೆ
3) ಚಿಕ್ಕಮಗಳೂರು ಜಿಲ್ಲೆಯ ಕಡೂರು ಟಿಹೆಚ್‌ಒ ಎಸ್.ಎನ್.ಉಮೇಶ್
- 1 ವಾಸದ ಮನೆ, 2 ನಿವೇಶನ, 8 ಎಕರೆ ಕೃಷಿ ಜಮೀನು ಸೇರಿದಂತೆ ಒಟ್ಟು ಉಮೇಶ್ ಸ್ಥಿರ ಆಸ್ತಿ ಅಂದಾಜು ಮೌಲ್ಯ- 56,78,000.
- ಚರ ಆಸ್ತಿ ರೂ 8,430 ನಗದು
- 12,50,000 ಬೆಲೆ ಬಾಳುವ ಚಿನ್ನಾಭರಣ
- ರೂ 45,83,000 ಬೆಲೆಬಾಳುವ ವಾಹನಗಳು
- ರೂ 10 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು
- ರೂ 68,41,430 ರೂ ಮೌಲ್ಯ
- ಒಟ್ಟು ಆಸ್ತಿ: 1,25,19,430
4) ಬೀದರ್ ಜಿಲ್ಲೆ ಬಸವಕಲ್ಯಾಣ ಉಪವಿಭಾಗದ ಎಇ-2 ರವೀಂದ್ರ
- ಒಟ್ಟು 5 ಕಡೆಗಳಲ್ಲಿ ಶೋಧ
- ರವೀಂದ್ರ ಸ್ಥಿರಾಸ್ತಿ ಒಟ್ಟು ಮೌಲ್ಯ
- 5 ನಿವೇಶನ, 2 ವಾಸದ ಮನೆ, 7 ಎಕರೆ ಕೃಷಿ ಜಮೀನು, ಸೇರಿದಂತೆ ರೂ. 1,72,04,000 ನಗದು
- ಚಿನ್ನಾಭರಣ, ವಾಹನ, ಇತರೆ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಒಟ್ಟು ರೂ 53,60,275 ಮೌಲ್ಯ, ಒಟ್ಟು ಆಸ್ತಿ ಅಂದಾಜು ಮೌಲ್ಯ ರೂ 2,25,64,275.
5) ರಾಯಚೂರಿನ ಜೆಸ್ಕಾಂ ಜೆಇ ಹುಲಿರಾಜ್
- ಈವರೆಗೆ ಹುಲಿರಾಜ ಮನೆಯಲ್ಲಿ 1.38 ಕೋಟಿ ರೂ. ಆಸ್ತಿ ಪತ್ತೆ
- 1.20 ಕೋಟಿ ರೂ. ಮೌಲ್ಯದ 2 ಮನೆ, ಮೂರು ನಿವೇಶನ ಹಾಗೂ 24 ಎಕರೆ ಕೃಷಿ ಜಮೀನಿರುವುದು ಲೋಕಾ ದಾಳಿ ವೇಳೆ ಪತ್ತೆ
- 17.88 ಲಕ್ಷ ಹಣ, 4.3 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತು
- 12.5 ಲಕ್ಷ ರೂಪಾಯಿ ಮೌಲ್ಯದ ವಾಹನಗಳು ಪತ್ತೆಯಾಗಿದೆ.
- ತಲೆಮರೆಸಿಕೊಂಡಿರುವ ಜೆಇ ಹುಲಿರಾಜ್ ಪತ್ತೆಗೆ ಹುಡುಕಾಟ
6) ಬಂಡಿವಡ್ಡರ್, ಗದಗ ಬೆಟಗೇರಿ ನಗರಸಭೆ ಇಂಜಿನಿಯರ್ ಹೆಚ್.ಎ.ಬಂಡಿವಡ್ಡರ್
- ಈವರೆಗೆ 1 ಕೋಟಿ 50 ಲಕ್ಷ ರೂ. ಮೌಲ್ಯದ ಆಸ್ತಿಪತ್ತೆ
- ಎರಡು ಮನೆ, ಒಂದು ನಿವೇಶನ, 1 JCB, ಒಂದು ಕಾರು, ದ್ವಿಚಕ್ರವಾಹನ ಸೇರಿ ಟ್ರ್ಯಾಕ್ಟರ್ ಹಾಗೂ ಕ್ಯಾಂಟರ್ ಪತ್ತೆ
- ಗಜೇಂದ್ರಗಡದಲ್ಲಿ 22 ಲಕ್ಷ ಮೌಲ್ಯದ ಶಾಂಪಿಂಕ್ ಕಾಂಪ್ಲೆಕ್ಸ್
- 17 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಪತ್ತೆ
- 22 ಲಕ್ಷ ನಗದು ಸೇರಿ 1.50 ಕೋಟಿ ಮೌಲ್ಯದ ಆಸ್ತಿ ಪತ್ತೆ
ಗದಗ-ಬೆಟಗೇರಿ ನಗರಸಭೆ ಇಂಜಿನಿಯರ್ ಹುಚ್ಚೇಶ್ ಬಂಡಿವಡ್ಡರ್ ಕಚೇರಿ, ಮನೆಗಳ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿದೆ. ಮನೆ, ಕಚೇರಿ, ತೋಟ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದು, 1 ಕೋಟಿ 50 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಪತ್ತೆ ಹೆಚ್ಚಿದ್ದಾರೆ.
ಬಳ್ಳಾರಿಯಲ್ಲೂ ತಾಲೂಕು ಬಿಸಿಎಂ ಅಧಿಕಾರಿ ಲೋಕೇಶ್ ಅಕ್ರಮದ ಕೋಟೆ ಬಯಲಾಗಿದೆ. ರಾಮಾಂಜನೇಯ ನಗರದಲ್ಲಿರೋ ಲೋಕೇಶ್ ಮನೆಯಲ್ಲಿ ಶೋಧ ನಡೀತು. ವಾರ್ಡನ್ ಆಗಿ ನೇಮಕವಾಗಿದ್ದ ಲೋಕೇಶ್ ಈಗ ಬಿಸಿಎಂ ಅಧಿಕಾರಿಯಾಗಿದ್ದಾನೆ. ಹುಟ್ಟುಹಬ್ಬಕ್ಕೆ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿನಿಯರಿಂದ ಹೂವಿನ ಮಳೆ ಸುರಿಸಿಕೊಂಡು ಶೋಕಿ ಮಾಡಿದ್ದಾನೆ. ಸದ್ಯ ಈ ವಿಡಿಯೋ ಈಗ ವೈರಲ್ ಆಗಿದೆ. ಇದೇ ರೀತಿಯಾಗಿ ಬೆಂಗಳೂರು, ಚಿಕ್ಕಮಗಳೂರು, ಬೀದರ್, ಬೆಳಗಾವಿ, ತುಮಕೂರು, ಗದಗ, ಬಳ್ಳಾರಿ, ರಾಯಚೂರಿನಲ್ಲಿ ದಾಳಿ ಮಾಡಲಾಗಿದೆ.
ಕರ್ನಾಟದಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:10 pm, Wed, 8 January 25