‘ನಾನು ಕಪ್ ಗೆಲ್ಲೋಕೆ ಆಡುತ್ತಿಲ್ಲ’: ಅಸಲಿ ಉದ್ದೇಶ ಬಹಿರಂಗ ಮಾಡಿದ ಹನುಮಂತ

ಬಿಗ್ ಬಾಸ್ ಟ್ರೋಫಿ ಬಗ್ಗೆ ತಮಗೆ ಹೆಚ್ಚೇನೂ ಆಸೆ ಇಲ್ಲ ಎಂಬ ರೀತಿ ಹನುಮಂತ ನಡೆದುಕೊಂಡಿದ್ದಾರೆ. ಟಾಸ್ಕ್​ ವೇಳೆ ಅವರು ಹೇಳಿದ ಈ ಮಾತು ಕೇಳಿ ಧನರಾಜ್​ಗೆ ಅಚ್ಚರಿ ಆಗಿದೆ. ಹಾಗಂತ ಹನುಮಂತ ಅವರು ಆಟವನ್ನು ಅರ್ಧಕ್ಕೆ ನಿಲ್ಲಿಸುವವರಲ್ಲ. ಪ್ರತಿ ಟಾಸ್ಕ್​ ಅನ್ನೂ ಅವರು ಚೆನ್ನಾಗಿಯೇ ಆಡುತ್ತಾ ಬಂದಿದ್ದಾರೆ.

‘ನಾನು ಕಪ್ ಗೆಲ್ಲೋಕೆ ಆಡುತ್ತಿಲ್ಲ’: ಅಸಲಿ ಉದ್ದೇಶ ಬಹಿರಂಗ ಮಾಡಿದ ಹನುಮಂತ
Bigg Boss Kannada
Follow us
ಮದನ್​ ಕುಮಾರ್​
|

Updated on: Jan 08, 2025 | 10:16 PM

ಸಿಂಗರ್​ ಹನುಮಂತ ಅವರು ಬಹಳ ಚಾಲಾಕಿತನದಿಂದ ಬಿಗ್ ಬಾಸ್​ ಆಟವನ್ನು ಆಡುತ್ತಿದ್ದಾರೆ. ಅವರ ಆಟ ಹಲವರಿಗೆ ಅರ್ಥ ಆಗುತ್ತಿಲ್ಲ. ಬೇರೆ ಸ್ಪರ್ಧಿಗಳೆಲ್ಲ ಸಖತ್ ಟೆನ್ಷನ್ ಮಾಡಿಕೊಂಡು ಆಡಿದರೆ ಹನುಮಂತ ಅವರು ಎಲ್ಲವನ್ನೂ ಕೂಲ್ ಆಗಿ ತೆಗೆದುಕೊಳ್ಳುತ್ತಿದ್ದಾರೆ. ಅದೇ ಕಾರಣಕ್ಕಾಗಿ ಅವರಿಗೆ ಹಲವು ಬಾರಿ ಮೆಚ್ಚುಗೆ ಸಿಕ್ಕಿದೆ. ಇಷ್ಟು ದಿನಗಳ ತನಕ ಅವರು ವೀಕ್ಷಕರಿಂದ ಅಗತ್ಯ ಪ್ರಮಾಣದ ವೋಟ್​ ಪಡೆದು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಈಗ 101ನೇ ದಿನ ‘ನಾನು ಕಪ್ ಗೆಲ್ಲೋಕೆ ಆಡುತ್ತಿಲ್ಲ’ ಎನ್ನುವ ಮೂಲಕ ಹನುಮಂತ ಅವರು ಎಲ್ಲರಿಗೂ ಅಚ್ಚರಿ ನೀಡಿದರು.

ಟಿಕೆಟ್​ ಟು ಫಿನಾಲೆ ಆಟದಲ್ಲಿ ಹನುಮಂತ ಅವರು ಸ್ಪರ್ಧಿಸುತ್ತಿದ್ದರು. ಅವರ ಜೊತೆ ಭವ್ಯಾ ಗೌಡ, ತ್ರಿವಿಕ್ರಮ್, ಮೋಕ್ಷಿತಾ ಪೈ ಕೂಡ ಪೈಪೋಟಿ ನೀಡುತ್ತಿದ್ದರು. ಆಗ ಹನುಮಂತ ಯಾವುದೇ ಟೆನ್ಷನ್ ಮಾಡಿಕೊಳ್ಳದೇ ಕೂಲ್ ಆಗಿ ಕಾಣುತ್ತಿದ್ದರು. ನಡುನಡುವೆ ಹಾಡು ಹೇಳುತ್ತಲೇ ಕಾಲ ಕಳೆದರು. ಯಾಕೆ ಹೀಗೆ ಎಂದು ಕೇಳಿದ್ದರೆ ಹನುಮಂತ ಅಚ್ಚರಿಯ ಉತ್ತರ ನೀಡಿದರು.

‘ನಾನು ಕಪ್ ಗೆಲ್ಲೋಕೆ ಆಡುತ್ತಿಲ್ಲ. ಟಾಸ್ಕ್​ ಗೆಲ್ಲೋಕೆ ಆಡುತ್ತಿದ್ದೇನೆ’ ಎಂದು ಹನುಮಂತ ಹೇಳಿದರು. ಈ ಮಾತು ಕೇಳಿ ಧನರಾಜ್ ಅವರಿಗೆ ಆಶ್ಚರ್ಯ ಆಯಿತು. ಅವರು ಸಖತ್ ಇಂಪ್ರೆಸ್​ ಆದರು. ‘ನಿನ್ನ ಇಂಥ ಮಾತುಗಳೇ ಸ್ಪೂರ್ತಿ ತುಂಬುವುದು’ ಎಂದು ಧನರಾಜ್ ಹೇಳಿದರು. ಅಷ್ಟಕ್ಕೂ ಹನುಮಂತನ ಮಾತಿನ ಅರ್ಥವೇನು? ಕಪ್​ ಮೇಲೆ ಗುರಿ ಇಟ್ಟುಕೊಂಡರೆ ಆಟ ಟೆನ್ಷನ್​ ಎನಿಸುತ್ತದೆ. ಕೇವಲ ಟಾಸ್ಕ್​ ಗೆಲ್ಲುವ ಕಡೆಗೆ ಗಮನ ಹರಿಸಿದರೆ ಸಹಜವಾಗಿಯೇ ಕಪ್​ ಗೆಲ್ಲುವ ಹಾದಿ ಸುಗಮ ಆಗುತ್ತದೆ. ಆ ಸೂತ್ರವನ್ನೇ ಹನುಮಂತ ಅನುಸರಿಸುತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?

ಹನುಮಂತ ಅವರು ಜನ ಅಂದುಕೊಂಡಷ್ಟು ಮುಗ್ಧನಲ್ಲ. ಈಗಾಗಲೇ ಅವರು ಬೇರೆ ಬೇರೆ ರಿಯಾಲಿಟಿ ಶೋಗಳನ್ನು ಮಾಡಿಕೊಂಡು ಬಿಗ್ ಬಾಸ್​ಗೆ ಬಂದಿದ್ದಾರೆ. ಹಾಗಾಗಿ ಅವರಿಗೆ ರಿಯಾಲಿಟಿ ಶೋಗಳ ನಾಡಿ ಮಿಡಿತ ಚೆನ್ನಾಗಿ ಅರ್ಥ ಆಗಿದೆ ಎಂಬುದು ಕೆಲವರ ಅಭಿಪ್ರಾಯ. ‘ನಿಜವಾದ ಬಿಗ್ ಬಾಸ್ ಆಟ ಏನು ಎಂಬುದು ಅರ್ಥ ಆಗಿರುವುದು ಹನುಮಂತನಿಗೆ ಮಾತ್ರ’ ಎಂದು ಕೂಡ ಹಲವರು ಹೇಳಿದ್ದುಂಟು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?