AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕಂಡ ಕನಸು ನುಚ್ಚುನೂರು; ನಿರಂತರ ಕಣ್ಣೀರು

ಬಿಗ್ ಬಾಸ್ ಮನೆಯಲ್ಲಿ ಚೈತ್ರಾಗೆ ಫಿನಾಲೆ ಟಿಕೆಟ್​ ಸಿಗಬಾರದು ಎಂದು ಇನ್ನುಳಿದ ಸದಸ್ಯರು ಹೇಳಿದ್ದಾರೆ. ಒಬ್ಬೊಬ್ಬರು ಒಂದೊಂದು ಕಾರಣ ನೀಡಿದ್ದಾರೆ. ಆಗ ಚೈತ್ರಾ ಕಣ್ಣಿರು ಹಾಕಿದ್ದಾರೆ. ‘ಆಡೋಕೆ ಕೊಡುತ್ತಿರಲಿಲ್ಲ. ಟಾರ್ಗೆಟ್ ಮಾಡಿ ಆಟದಿಂದ ಹೊರಗೆ ಇಡುತ್ತಿದ್ದರು’ ಎಂದು ಚೈತ್ರಾ ಹೇಳಿದ್ದಾರೆ. ಅವರ ಕನಸು ನುಚ್ಚು ನೂರಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕಂಡ ಕನಸು ನುಚ್ಚುನೂರು; ನಿರಂತರ ಕಣ್ಣೀರು
ಚೈತ್ರಾ
ರಾಜೇಶ್ ದುಗ್ಗುಮನೆ
|

Updated on: Jan 09, 2025 | 7:27 AM

Share

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಸುದೀಪ್ ಅವರಿಂದ ಎಷ್ಟು ಬಾರಿ ಭೇಷ್ ಎನಿಸಿಕೊಂಡಿದ್ದಾರೋ ಅದಕ್ಕಿಂತ ಹೆಚ್ಚುಬಾರಿ ಅವರು ಛೀಮಾರಿ ಹಾಕಿಸಿಕೊಂಡಿದ್ದರೆ. ತಾಳ್ಮೆಯ ಕಟ್ಟೆ ಒಡೆದು ಚೈತ್ರಾ ಕುಂದಾಪುರ ವಿರುದ್ಧ ಸುದೀಪ್ ಅವರು ಕೂಗಾಡಿದ ಉದಾಹರಣೆಯೂ ಸಾಕಷ್ಟಿದೆ. ಈಗ ಚೈತ್ರಾ ಕುಂದಾಪುರ ಅವರು ಕಂಡ ಕನಸು ನುಚ್ಚು ನೂರಾಗಿದೆ. ಇದರಿಂದ ಅವರು ಕಣ್ಣೀರು ಹಾಕಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಚೈತ್ರಾ ಕುಂದಾಪುರ ಅವರು ಆರಂಭದಲ್ಲಿ ಉತ್ತಮವಾಗಿ ಆಡಿದ್ದರು. ಆದರೆ, ದಿನ ಕಳೆದಂತೆ ಅವರಿಗೆ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ, ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಟಾಸ್ಕ್​ಗಳನ್ನು ಸರಿಯಾಗಿ ಆಡಲು ಸಾಧ್ಯವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಅವರನ್ನು ಎಲ್ಲರೂ ಟಾರ್ಗೆಟ್ ಮಾಡಲು ಪ್ರಾರಂಭಿಸಿದರು. ಈ ಕಾರಣದಿಂದಲೇ ಅವರು ಹಲವು ಬಾರಿ ಕಳಪೆ ಪಟ್ಟ ಪಡೆದರು.

ಬಿಗ್ ಬಾಸ್ ಫಿನಾಲೆ ಟಿಕೆಟ್ ಪಡೆಯಲು ಈ ವಾರ ಟಾಸ್ಕ್​ಗಳನ್ನು ಆಯೋಜನೆ ಮಾಡಲಾಗಿತ್ತು. ಮೊದಲ ಟಾಸ್ಕ್​​ನಲ್ಲೇ ತ್ರಿವಿಕ್ರಂ ಅವರು ಗೆದ್ದು ಫಿನಾಲೆ ಟಿಕೆಟ್ ಪಡೆದರು. ಇತ್ತ ಚೈತ್ರಾ ಅವರ ತಂಡ ಸೋತ ಕಾರಣ ಒಬ್ಬರನ್ನು ಹೊರಕ್ಕೆ ಇಡಬೇಕಾಗಿತ್ತು. ಈ ವೇಳೆ ಎಲ್ಲರೂ ಸೇರಿ ಚೈತ್ರಾ ಕುಂದಾಪುರ ಅವರ ಹೆಸರನ್ನು ತೆಗೆದುಕೊಂಡರು. ಇದರಿಂದ ಚೈತ್ರಾಗೆ ಸಾಕಷ್ಟು ಬೇಸರ ಆಯಿತು.

ಚೈತ್ರಾ ಕುಂದಾಪುರ ಅವರು ಆಟದಿಂದ ಹೊರಕ್ಕೆ ಉಳಿದ ಬಳಿಕ ಕಣ್ಣೀರು ಹಾಕಿದರು. ‘ನಾನು ಫಿನಾಲೆ ಟಿಕೆಟ್ ರೇಸ್​ಗೆ ಆಯ್ಕೆ ಆಗಿಲ್ಲ ಅನ್ನೋ ಬಗ್ಗೆ ಬೇಸರ ಇಲ್ಲ. ರೇಸ್​ಗೆ ಬಂದ ಬಳಿಕ ಯಾರೂ ಫಿನಾಲೆ ಟಿಕೆಟ್ ಗೆಲ್ಲಲ್ಲ. ಈ ವಾರವಿಡೀ ಆಡುವ ಅವಕಾಶವಿಲ್ಲವಲ್ಲ ಅನ್ನೋದು ಬೇಸರ ಮೂಡಿಸಿತು. ಈ ವಾರವೂ ಆಡೋಕೆ ಅವಕಾಶ ಸಿಗಲ್ಲವಲ್ಲ’ ಎಂದರು ಚೈತ್ರಾ.

ಇದನ್ನೂ ಓದಿ: ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್ 

ಚೈತ್ರಾ ಕುಂದಾಪುರ ಅವರು ಸಾಕಷ್ಟು ಬೇಸರಗೊಂಡಿದ್ದಾರೆ. ಅವರಿಗೂ ಫಿನಾಲೆಗೆ ಹೋಗಬೇಕು ಎನ್ನುವ ಕನಸಿದೆ. ಆದರೆ, ಈಗ ಅವರು ಮುಂದಿನ ಎರಡು ವಾರಗಳಲ್ಲಿ ಎಲಿಮಿನೇಷನ್ ಆಗದೇ ಉಳಿಯಬೇಕಿದೆ. ಹಾಗಾದರೆ ಮಾತ್ರ ಅವರು ಫಿನಾಲೆಗೆ ಏರಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.