ಬೆಂಗಳೂರಿನ ಯುವಕರು ಆರೋಗ್ಯ ಮಾಹಿತಿಗಾಗಿ ಆನ್‌ಲೈನ್‌ನಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ: ಅಧ್ಯಯನ
ಬೆಂಗಳೂರಿನ ಯುವಕರು ಆರೋಗ್ಯದ ಮಾಹಿತಿಗಾಗಿ ಆನ್‌ಲೈನ್‌ನಲ್ಲಿ ಹೆಚ್ಚಿನ ಹುಡುಕಾಟ ನಡೆಸುತ್ತಾರೆ ಎಂದು ನಿಮ್ಹಾನ್ಸ್ ಅಧ್ಯಯನದ ಮೂಲಕ ತಿಳಿದು ಬಂದಿದೆ.
ಬೆಂಗಳೂರಿನ ಸುಮಾರು 356 ವಿದ್ಯಾರ್ಥಿಗಳನ್ನೊಳಗೊಂಡ ಅಧ್ಯಯನ ಪ್ರಕಾರ ಶೇಕಡಾ 48.6 ವಿದ್ಯಾರ್ಥಿಗಳು ಸೈಬರ್‌ಕಾಂಡ್ರಿಯಾಸಿಸ್ ಒಳಗಾಗಿರುವುದು ತಿಳಿದು ಬಂದಿದೆ. ಬೆಂಗಳೂರಿನ ಯುವಕರು ಆರೋಗ್ಯದ ಮಾಹಿತಿಗಾಗಿ ಆನ್‌ಲೈನ್‌ನಲ್ಲಿ ಹೆಚ್ಚಿನ ಹುಡುಕಾಟ ನಡೆಸುತ್ತಾರೆ ಎಂದು ನಿಮ್ಹಾನ್ಸ್ ಅಧ್ಯಯನದ ಫಲಿತಾಂಶ ತಿಳಿಸಿದೆ. ಹಾಗಿದ್ದರೆ ಏನಿದು ಸೈಬರ್‌ಕಾಂಡ್ರಿಯಾಸಿಸ್ ಎಂಬುದನ್ನು ತಿಳಿದು ಕೊಳ್ಳೋಣ.
ಏನಿದು ಸೈಬರ್‌ಕಾಂಡ್ರಿಯಾ?
ಕೋವಿಡ್ 19 ಸಮಯದಲ್ಲಿ ಈ ಪದವನ್ನು ಸಾಕಷ್ಟು ಜನರು ಕೇಳಿರುತ್ತೀರಿ. ಸೈಬರ್‌ಕಾಂಡ್ರಿಯಾ ಎಂದರೆ ದೇಹದಲ್ಲಿ ಏನಾದರೂ ಅನಾರೋಗ್ಯ ಉಂಟಾದಾಗ ಅದರ ಬಗ್ಗೆ ಹೆಚ್ಚಾಗಿ ಅಂದರೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಬಗ್ಗೆ ಇಂಟರ್ನೆಟ್ನಲ್ಲಿ ಹುಡುಕಾಟ ನಡೆಸುವುದಾಗಿದೆ. ಆರೋಗ್ಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ಸಮಯವನ್ನು ಗೂಗಲ್ ಅಥವಾ ಇತರ ಯಾವುದೇ ಅಂತರ್ಜಾಲಗಳಲ್ಲಿ ಕಳೆಯುವುದಾಗಿದೆ.
ನಿಮ್ಹಾನ್ಸ್ ಅಧ್ಯಯನದ ಪ್ರಕಾರ ಯಾವುದೇ ಆರೋಗ್ಯ ಸಮಸ್ಯೆಯನ್ನು ಇಲ್ಲದ್ದಿದ್ದರೂ ಕೂಡ ಅತಿಯಾದ ಸೈಬರ್‌ಕಾಂಡ್ರಿಯಾಗೆ ಒಳಗಾದವರಲ್ಲಿ ಶೇಕಡಾ 4.8 ರಷ್ಟು ಜನರು ವೈದ್ಯರನ್ನು ಸಂಪರ್ಕಿಸಿದಾಗ ಆರೋಗ್ಯ ಸಮಸ್ಯೆ ಕಂಡುಬಂದಿದೆ ಎಂದು ಅಧ್ಯಯನವು ತೋರಿಸಿದೆ. ಈ ಮಾಪನವು ನಾಲ್ಕು ಅಂಶಗಳನ್ನು ಒಳಗೊಂಡಿವೆ. ಮಿತಿಮೀರಿದ ಅಥವಾ ಆನ್‌ಲೈನ್‌ನಲ್ಲಿ ಕಳೆದ ಸಮಯ, ಕಂಡುಬರುವ ಮಾಹಿತಿಯನ್ನು ಅಪನಂಬಿಕೆ ಮಾಡುವುದು, ಭರವಸೆಗಾಗಿ ಮತ್ತಷ್ಟು ಹುಡುಕಾಟವನ್ನು ನಡೆಸುವುದು.
ಇದನ್ನೂ ಓದಿ: ಆರ್ಸಿಬಿ ಮ್ಯಾಚ್ ಮುಗಿಯುತ್ತಿದ್ದಂತೆ ಬೆಂಗಳೂರಿನಲ್ಲಿ ಹೆಚ್ಚಿದ ಕೊರೊನಾ ಹರಡುವ ಆತಂಕ: ಕೇಸ್ ಹೆಚ್ಚಳ ಸಾಧ್ಯತೆ
ಅಧ್ಯಯನದಲ್ಲಿ ಭಾಗವಹಿಸಿದವರೆಲ್ಲರೂ 18 ರಿಂದ 25 ವರ್ಷ ವಯಸ್ಸಿನ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು. ಸೈಬರ್‌ಕಾಂಡ್ರಿಯಾಸಿಸ್ ಹರಡುವಿಕೆಯ ಕುರಿತು ಬೆಂಗಳೂರಿನಲ್ಲಿ ಇದು ಮೊದಲ ಅಧ್ಯಯನವಾಗಿದೆ ಎಂದು ಅಧ್ಯಯನಕ್ಕೆ ಮಾರ್ಗದರ್ಶನ ನೀಡಿದ ನಿಮ್ಹಾನ್ಸ್‌ನ ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಬಿ.ಪಿ ನಿರ್ಮಲಾ ಹೇಳಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:26 am, Tue, 4 April 23