ಆರ್​ಸಿಬಿ ಮ್ಯಾಚ್​ ಮುಗಿಯುತ್ತಿದ್ದಂತೆ ಬೆಂಗಳೂರಿನಲ್ಲಿ ಹೆಚ್ಚಿದ ಕೊರೊನಾ ಹರಡುವ ಆತಂಕ: ಕೇಸ್​ ಹೆಚ್ಚಳ ಸಾಧ್ಯತೆ

ಆರ್​ಸಿಬಿ ಪಂದ್ಯದ ನಂತರ ಕೊರೊನಾ ವೈರಸ್ ಕಂಟಕ ಎದುರಾಗಿದೆ. ಹೌದು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಪಂದ್ಯ ನಡೆದ ದಿನ ಕ್ರೀಡಾಂಗಣ ಮತ್ತು ಸುತ್ತಮುತ್ತ ಸಾವಿರಾರು ಅಭಿಮಾನಿಗಳು ಸೇರಿದ್ದು ಇದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.

ಆರ್​ಸಿಬಿ ಮ್ಯಾಚ್​ ಮುಗಿಯುತ್ತಿದ್ದಂತೆ ಬೆಂಗಳೂರಿನಲ್ಲಿ ಹೆಚ್ಚಿದ ಕೊರೊನಾ ಹರಡುವ ಆತಂಕ: ಕೇಸ್​ ಹೆಚ್ಚಳ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us
|

Updated on:Apr 04, 2023 | 8:45 AM

ಬೆಂಗಳೂರು: ರಾಜ್ಯಾದ್ಯಂತ ಐಪಿಎಲ್​ನ ಹವಾ ಜೋರಾಗಿದೆ. ಎಲ್ಲೆಡೆ ಆರ್​ಸಿಬಿ (RCB), ಆರ್​ಸಿಬಿ ಹರ್ಷೋದ್ಗಾರ. ಈ ಮಧ್ಯೆ ಬೇರೆ ಬೇರೆ ರಾಜ್ಯದ ಟೀಂಗಳಿಗೆ ಸಪೋರ್ಟ್​ ಮಾಡುವ ಅಭಿಮಾನಿಗಳು. ಸಿಕ್ಸ್​, ಫೋರ್​ಗಳದ್ದೇ ಸೌಂಡು. ಮೊನ್ನೆ ಮೊನ್ನೆ ತಾನೆ ಬೆಂಗಳೂರಲ್ಲಿ (Bengaluru) ಆರ್​ಸಿಬಿ ಮ್ಯಾಚ್​ ನಡೆಯಿತು. ಮುಂಬೈ ಇಂಡಿಯನ್ಸ್​​​​ ತಂಡದ ವಿರುದ್ಧ ಅಮೋಘ ಜಯಸಾಧಿಸಿತು. ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ (Virat Kohli) ಮತ್ತು ಹಾಲಿ ನಾಯಕ ಪಾಪ್​ ಡುಪ್ಲೆಸಿಸ್ (Faf Du Plessis) ಬ್ಯಾಟಿಂಗ್​​ಗೆ ಚಿನ್ನಸ್ವಾಮಿ ಸ್ಟೆಡಿಯಂ (Chinnaswamy Stadium) ಹುಚ್ಚೆದ್ದು ಕುಣಿದಿತ್ತು. ಈ ಮ್ಯಾಚ್​ ನೋಡಲು ಬೆಳಿಗ್ಗೆಯಿಂದ ಸಾಯಂಕಾಲದವರೆಗು ಕಾದು ಅಭಿಮಾನಿಗಳು ಟಿಕೆಟ್ ಪಡೆದಿದ್ದರು. ಸ್ಟೇಡಿಯಂ ಭರ್ತಿಯಾಗಿತ್ತು. ಆದರೆ ಪಂದ್ಯದ ನಂತರ ಕೊರೊನಾ ವೈರಸ್ (Coronavirus) ಕಂಟಕ ಎದುರಾಗಿದೆ. ಹೌದು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಪಂದ್ಯ ನಡೆದ ದಿನ ಕ್ರೀಡಾಂಗಣ ಮತ್ತು ಸುತ್ತಮುತ್ತ ಸಾವಿರಾರು ಅಭಿಮಾನಿಗಳು ಸೇರಿದ್ದರು. ಇದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.  ಹೀಗಾಗಿ ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಕೊರೊನಾ ವೈರಸ್ ಹೆಚ್ಚಳವಾಗುವ ಆತಂಕ ಎದುರಾಗಿದೆ.

ಕೊರೊನಾ ವೈರಸ್ ಕೇಸ್ ಏರಿಕೆ ನಡುವೆ ಸಾವಿರಾರು ಜನರು ಒಂದೆಡೆ ಸೇರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಐಪಿಎಲ್ ಮ್ಯಾಚ್ ನೋಡಲು 30-35 ಸಾವಿರ ಜನ ಒಂದಡೆ ಗುಂಪು ಸೇರುತ್ತಿರುವುದು ಕೊರೊನಾ ವೈರಸ್ ಏರಿಕೆಯ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಕೊರೊನಾ ವೈರಸ್ ಏರಿಕೆಯ ಆತಂಕ ಹೊರ ಹಾಕಿದೆ. ಅಲ್ಲದೆ ಗುಂಪು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು, ಕ್ರೀಡಾಂಗಣಗಳಲ್ಲಿ ಕೊರೊನಾ ವೈರಸ್ ರೂಲ್ಸ್ ಜಾರಿ ಮಾಡಲು ಚಿಂತನೆ ನಡೆಸಿದೆ.

ಈ ಹಿನ್ನೆಲೆ ಚಿನ್ನಸ್ವಾಮಿ ಸ್ಟೇಡಿಯಂಗೆ ಪ್ರತ್ಯೇಕ ರೂಲ್ಸ್ ತರಲು ಆರೋಗ್ಯ ಇಲಾಖೆ ಪ್ಲಾನ್ ಮಾಡಿಕೊಂಡಿದೆ. ಕೊವಿಡ್ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಪಡೆದು, ಯಾವೆಲ್ಲ ರೂಲ್ಸ್ ಜಾರಿ ಮಾಡಬಹುದು ಎಂದು ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ. ಒಂದು ವೇಳೆ ಕೊರೊನಾ ವೈರಸ್ ಏರಿಕೆಯಾದರೇ, ಮೈದಾನದ ಒಳಗೆ ಪ್ರವೇಶಿಸುವಾಗ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಥರ್ಮಲ್ ಸ್ಕ್ಯಾನಿಂಗ್​ ಅನ್ನು ಜಾರಿ ಮಾಡಲು ಇಲಾಖೆ ಚಿಂತನೆ ನಡೆಸಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಾ ರಂದೀಪ್ ಹೇಳಿದ್ದಾರೆ.

ಕಳೆದ 1 ವಾರದ ಬೆಂಗಳೂರಿನಲ್ಲಿ ವರದಿಯಾದ ಕೊರೊನಾ ಕೇಸ್

29 ಮಾರ್ಚ್ – 75 ಕೊರೊನಾ ಕೇಸ್

30 ಮಾರ್ಚ್ – 143 ಕೊರೊನಾ ಕೇಸ್

31 ಮಾರ್ಚ್ – 170 ಕೊರೊನಾ ಕೇಸ್

1 ಏಪ್ರಿಲ್ – 146 ಕೊರೊನಾ‌ ಕೇಸ್

2 ಏಪ್ರಿಲ್ – 170 ಕೊರೊನಾ ಕೇಸ್

3 ಏಪ್ರಿಲ್ – 109 ಕೊರೊನಾ ಕೇಸ್

ಅಲ್ಲದೇ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಾವಳಿ ಮತ್ತೆ ಹೆಚ್ಚಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,400 ದಾಟಿದೆ. ಈ ಪೈಕಿ ಬೆಂಗಳೂರು ನಗರ ವ್ಯಾಪ್ತಿಯಲ್ಲೇ ಶೇ 59ರಷ್ಟು ಹೊಸ ಪ್ರಕರಣಗಳು ದೃಢಪಟ್ಟಿವೆ. ಏಪ್ರಿಲ್ 1ರಂದು ರಾಜ್ಯದಲ್ಲಿ 284 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:26 am, Tue, 4 April 23