ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬೆಂಕಿ ಅವಘಡ ಪ್ರಕರಣ: ಗಾಯಾಳುಗಳ ಚಿಕಿತ್ಸೆಗೆ ಚರ್ಮದ ಕೊರತೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬೆಂಕಿ ಅವಘಡಗಳಿಂದ ಸುಟ್ಟಗಾಯಗಳ ಪ್ರಕರಣಗಳು ಹೆಚ್ಚಾಗಿವೆ. ವಿಕ್ಟೋರಿಯಾ ಆಸ್ಪತ್ರೆಯ ಚರ್ಮ ಬ್ಯಾಂಕ್‌ನಲ್ಲಿ ಚರ್ಮದ ತೀವ್ರ ಕೊರತೆ ಉಂಟಾಗಿದೆ. ಚರ್ಮದಾನದ ಅರಿವು ಹೆಚ್ಚಿಸುವುದು ಮತ್ತು ದಾನಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಅಗತ್ಯವಾಗಿದೆ. ಬೇಸಿಗೆಯ ಆರಂಭದಲ್ಲೇ ಈ ಕೊರತೆ ಆತಂಕಕಾರಿಯಾಗಿದೆ. ಚರ್ಮದಾನದ ಮಹತ್ವವನ್ನು ಜನರಿಗೆ ತಿಳಿಸುವುದು ಮುಖ್ಯ.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬೆಂಕಿ ಅವಘಡ ಪ್ರಕರಣ: ಗಾಯಾಳುಗಳ ಚಿಕಿತ್ಸೆಗೆ ಚರ್ಮದ ಕೊರತೆ
ವಿಕ್ಟೋರಿಯಾ ಆಸ್ಪತ್ರೆ
Follow us
Vinay Kashappanavar
| Updated By: ವಿವೇಕ ಬಿರಾದಾರ

Updated on: Jan 19, 2025 | 8:03 AM

ಬೆಂಗಳೂರು, ಜನವರಿ 19: ಬೆಂಗಳೂರಿನಲ್ಲಿ (Bengaluru) ಇತ್ತಿಚಿಗೆ ಬೆಂಕಿ (Fire) ಅವಘಡಗಳು ಪ್ರಕರಣಗಳು ಹೆಚ್ಚುತ್ತಿದ್ದು ಚರ್ಮ ಸುಟ್ಟ ಗಾಯಾಳುಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ, ಸ್ಕಿನ್ ಬ್ಯಾಂಕ್​ನಲ್ಲಿ (Skin Bank) ಚರ್ಮಕ್ಕೆ ಬೇಡಿಕೆ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಅತಿ ಹೆಚ್ಚು ಬೆಂಕಿ ಅವಘಡಗಳ ಸಂಭವಿಸುತ್ತಿದ್ದು, ಗಾಯಾಳುಗಳ ಚಿಕಿತ್ಸೆಗೆ ಚರ್ಮ ಸಿಗುತ್ತಿಲ್ಲ. ಇದರಿಂದ, ಚರ್ಚಮಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ.

ವಿಕ್ಟೋರಿಯಾ ಆಸ್ಪತ್ರೆಯ ಸ್ಕಿನ್ ಬ್ಯಾಂಕ್​ನಲ್ಲಿಯೂ ಚರ್ಮದ ಅಭಾವ ಎದುರಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲು ಚರ್ಮ ಸಿಗದೆ ವೈದ್ಯರು ಪರದಾಡುತ್ತಿದ್ದಾರೆ. ವಿಕ್ಟೋರಿಯಾದ ಸ್ಕಿನ್ ಬ್ಯಾಂಕ್​ನಲ್ಲಿ ಶೆ. 40 ರಷ್ಟು ಚರ್ಮದ ಕೊರತೆ ಇದೆ. ಚರ್ಮ ಸುಟ್ಟರೆ, ಸಾವಿರದ ಎಂಎಂ ನಷ್ಟು ಚರ್ಮದ ಅಗತ್ಯವಿರುತ್ತದೆ. ಹೊಸ ಚರ್ಮ ಬರುವವರೆಗೂ ಚಿಕಿತ್ಸೆಯ ಅಗತ್ಯವಿರುತ್ತೆ. ಈ ವೇಳೆ ಸ್ಕಿನ್ ಬ್ಯಾಂಕ್​ನಲ್ಲಿ ಬೇಕಾದಷ್ಟು ಚರ್ಮ ಸಿಗುತ್ತಿಲ್ಲ. ಪ್ರತಿಯೊಂದು ಪ್ರಕರಣದ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಇದರಿಂದ, ಸ್ಕಿನ್ ಕೊರತೆ ಎದುರಾಗಿದ್ದು, ಜನರಿಗೆ ಸರಿಯಾದ ವೇಳೆಗೆ ಚರ್ಮ ಸಿಗುತ್ತಿಲ್ಲ.

ರಾಜಧಾನಿ ಸೇರಿದ್ದಂತೆ ರಾಜ್ಯದಲ್ಲಿ ಅತಿಯಾದ ಸಿಲಿಂಡರ್ ಸ್ಟೋಟ, ಬೆಂಕಿ ಅವಘಡ ಪ್ರಕರಣದಿಂದ ರೋಗಿಗಳ ಚಿಕಿತ್ಸೆಗೆ ಸಮರ್ಪಕವಾಗಿ ಚರ್ಮ ಸಿಗದೆ ವೈದ್ಯರಿಗೆ ಆತಂಕ ತಂದಿದೆ. ಬೇಸಿಗೆ ಆರಂಭದಲ್ಲೇ ಚರ್ಮದ ಕೊರತೆ ಎದುರಾಗಿರುವುದು ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ. ಬೆಂಕಿ ಅವಘಡಗಳು, ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ನೀಡಲು ಚರ್ಮದ ಕೊರತೆ ಇದೆ ಅಂತ ಸ್ಕಿನ್ ಬ್ಯಾಂಕ್ ವೈದ್ಯರ ತಂಡ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬೆಂಗಳೂರು ಜನರಿಗೆ ಸಿಹಿ ಸುದ್ದಿ: 2 ಹೊಸ ರೈಲು ನಿಲ್ದಾಣ ನಿರ್ಮಾಣ!

2016ರಲ್ಲಿ ಆರಂಭವಾದ ರಾಜ್ಯದ ಪ್ರಪ್ರಥಮ ಚರ್ಮನಿಧಿ ಬ್ಯಾಂಕ್ ವಿಕ್ಟೋರಿಯಾದಲ್ಲಿ ಸ್ಥಾಪನೆ ಮಾಡಲಾಗಿದ್ದು, ಇದೀಗ ರೋಗಿಗಳಿಗೆ ಸಾಕಾಗುವಷ್ಟು ಚರ್ಮ ಸಂಗ್ರಹ ಇಲ್ಲದೆ ಇರುವುದು ವೈದ್ಯರಿಗೆ ಆತಂಕ ತಂದಿದೆ. ಇತ್ತ ಚರ್ಮದಾನಿಗಳ ಸಂಖ್ಯೆ ಕೂಡ ಇಳಿಕೆಯಾಗುತ್ತಿದ್ದು, ಸಂಗ್ರಹಿಸಿದ ಚರ್ಮವನ್ನ ಬಳಕೆಗೆ ಯೋಗ್ಯ ಮಾಡುವ ಪ್ರಕ್ರಿಯೆಗೆ ಸಮಯ ಹಿಡಿಯುತ್ತಿರುವುದು ಚರ್ಮದ ಕೊರತೆಗೆ ಕಾರಣವಾಗುತ್ತಿದೆ. ಇನ್ನು, ವ್ಯಕ್ತಿ ಸತ್ತ ಬಳಿಕ 6 ಗಂಟೆಯ ಒಳಗೆ ಚರ್ಮ ಸಂಗ್ರಹ ಮಾಡಬೇಕಿದ್ದು, ಈ ವೇಳೆ ಹಲವರಿಗೆ ಚರ್ಮದಾನದ ಬಗ್ಗೆ ಅರಿವು ಇಲ್ಲದೇ ಇರುವುದು ಕೂಡ ಚರ್ಮದ ಅಭಾವಕ್ಕೆ ಕಾರಣವಾಗಿದೆ.

ಯಾರೆಲ್ಲಾ ಚರ್ಮದಾನ ಮಾಡಬಹುದು?

  • 18 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಸತ್ತ ಬಳಿಕ ಚರ್ಮ ದಾನ ಮಾಡಬಹುದು
  • HIV, HBSAG, ಚರ್ಮದ ಕ್ಯಾನ್ಸರ್ ಇಲ್ಲದವರು ನೀಡಬಹುದು
  • ಯಾವುದೇ ರೀತಿ ಚರ್ಮ ಕಾಯಿಲೆ ಇಲ್ಲದವರು ದಾನಿಯಾಗಬಹುದು

ಒಟ್ಟಿನಲ್ಲಿ ಜನರು ಜಾಗೃತರಾಗಬೇಕಿದೆ. ಸತ್ತು ಮಣ್ಣು ಸೇರುವ ದೇಹ, ಬದುಕಿರುವವರ ಬಾಳಿಗೆ ಬೆಳಕು ನೀಡಲಿ ಚರ್ಮ ದಾನ ಮಾಡುವ ಕಡೆ ಜನರು ಮನಸ್ಸು ಮಾಡಬೇಕಿದೆ ಎಂಬುವುದೇ ವೈದ್ಯರ ಆಶಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್