AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maneka Gandhi: ಕತ್ತೆ ಹಾಲಿನಿಂದ ತಯಾರಿಸಿದ ಸಾಬೂನು ಬಳಸಿದರೆ ಮಹಿಳೆಯ ದೇಹ ಸೌಂದರ್ಯ ದೀರ್ಘವಾಗಿರುತ್ತದೆ – ಬಿಜೆಪಿ ಮಾಜಿ ಸಚಿವೆ ಮೇನಕಾ ಗಾಂಧಿ

Maneka Gandhi: ಕ್ಲಿಯೋಪಾತ್ರಾ ಅದರಲ್ಲೇ ಸ್ನಾನ ಮಾಡ್ತಾ ಇದ್ದಿದ್ದು! ಅದಕ್ಕೇ ಕತ್ತೆ ಹಾಲಿನಿಂದ ತಯಾರಿಸಿದ ಸಾಬೂನು ಮಹಿಳೆಯ ದೇಹ ಸೌಂದರ್ಯವನ್ನು ಸುದೀರ್ಘ ಕಾಲ ಸುಂದರವಾಗಿಡುತ್ತದೆ -ಬಿಜೆಪಿ ಮಾಜಿ ಸಚಿವೆ ಮೇನಕಾ ಗಾಂಧಿ

Maneka Gandhi: ಕತ್ತೆ ಹಾಲಿನಿಂದ ತಯಾರಿಸಿದ ಸಾಬೂನು ಬಳಸಿದರೆ ಮಹಿಳೆಯ ದೇಹ ಸೌಂದರ್ಯ ದೀರ್ಘವಾಗಿರುತ್ತದೆ - ಬಿಜೆಪಿ ಮಾಜಿ ಸಚಿವೆ ಮೇನಕಾ ಗಾಂಧಿ
ಕತ್ತೆ ಹಾಲಿನಿಂದ ತಯಾರಿಸಿದ ಸಾಬೂನು ಮತ್ತು ಬಿಜೆಪಿ ಮಾಜಿ ಸಚಿವೆ ಮೇನಕಾ ಗಾಂಧಿ
TV9 Web
| Edited By: |

Updated on: Apr 03, 2023 | 6:16 PM

Share

ಈಜಿಪ್ಟಿನ ರಾಣಿ ಕ್ಲಿಯೋಪಾತ್ರಾ (Cleopatra) ಕತ್ತೆಯ ಹಾಲನ್ನು (donkey’s milk) ಮೈಮೇಲೆ ಸುರಿದುಕೊಂಡು ಸ್ನಾನ ಮಾಡುತ್ತಿದ್ದಳು. ಅದಕ್ಕೆ ಅವಳು ಸೌಂದರ್ಯದ ಖನಿಯಾಗಿದ್ದಳು. ಅದಕ್ಕೇ ಈಗಿನ ಕಾಲದ ಮಹಿಳೆಯರಿಗೂ ಅದು ಅನ್ವಯವಾಗುತ್ತದೆಂದು ಕತ್ತೆ ಹಾಲಿನಿಂದ ತಯಾರಿಸಿದ ಸಾಬೂನನ್ನು ಬಳಸಿದರೆ ಮಹಿಳೆ ತನ್ನ ದೇಹ ಸಿರಿಯನ್ನು ಸುಂದರವಾಗಿಟ್ಟುಕೊಳ್ಳಬಹುದು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಮಾಜಿ ಸಚಿವೆ ಮೇನಕಾ ಗಾಂಧಿ (Maneka Gandhi) ಅಭಿಪ್ರಾಯಪಟ್ಟಿದ್ದಾರೆ. ಬಿಜೆಪಿ (BJP) ಜೊತೆ ಗುರುತಿಸಿಕೊಂಡಿರುವ ಮನೇಕಾ ಗಾಂಧಿ, ಪ್ರಾಣಿ ಹಕ್ಕು ಹೋರಾಟಗಾರರಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ.

ಲಡಾಖ್ ಸಮುದಾಯವು ಸಾಬೂನು ತಯಾರಿಸಲು ಕತ್ತೆ ಹಾಲನ್ನು ಬಳಸುತ್ತದೆ. ಇದು ಮಹಿಳೆಯರ ಚರ್ಮವನ್ನು ಸುಂದರವಾಗಿಡುತ್ತದೆ ಎಂದು ಮೇನಕಾ ಗಾಂಧಿ ಹೇಳಿದ್ದಾರೆ. ಬಿಜೆಪಿ ಸಂಸದೆ ಮತ್ತು ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಮಾಡಿದ ಭಾಷಣವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ, ಅಲ್ಲಿ ಅವರು ಕತ್ತೆ ಹಾಲಿನಿಂದ ತಯಾರಿಸಿದ ಸಾಬೂನು ಮಹಿಳೆಯ ದೇಹವನ್ನು ಸುಂದರವಾಗಿಡಲು ಸಹಾಯ ಮಾಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

Also Read:

ಕೋಟೆನಾಡಿನ ಮದ್ದೇರು ಗ್ರಾಮದ ಜಾತ್ರೆಯಲ್ಲಿ ಸಾವಿಗೀಡಾದ ಕತ್ತೆ: ದೇವರಂತೆ ಪೂಜಿಸಿ, ಭಾವಪೂರ್ಣ ಶ್ರದ್ದಾಂಜಲಿ!

ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಚೌಪಾಲ್‌ ಯೋಜನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಈಜಿಪ್ಟ್‌ನ ರಾಣಿ ಕ್ಲಿಯೋಪಾತ್ರಾ ಕತ್ತೆಯ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದರು. ದೆಹಲಿಯಲ್ಲಿ ಕತ್ತೆ ಹಾಲಿನಿಂದ ತಯಾರಿಸಿದ ಸೋಪ್‌ಗಳು 500 ರೂ ದರದಲ್ಲಿದೆ ಎಂದು ತಿಳಿಸಿದರು. ಲಡಾಖ್‌ನಲ್ಲಿ ಸಾಬೂನು ತಯಾರಿಸಲು ಕತ್ತೆಯ ಹಾಲನ್ನು ಬಳಸುವ ಸಮುದಾಯದ ಕುರಿತು ಅವರು ಮಾತನಾಡಿದರು.

“ನೀವು ಕೊನೆಯ ಬಾರಿಗೆ ಕತ್ತೆಯನ್ನು ಯಾವಾಗ ನೋಡಿದ್ದೀರಿ? ಅವುಗಳ ಸಂಖ್ಯೆಯೇ ಕುಸಿಯುತ್ತಿದೆ. ಬಟ್ಟೆ ಒಗೆಯುವವರು ಕತ್ತೆಗಳ ಬಳಕೆಯನ್ನು ನಿಲ್ಲಿಸಿದ್ದಾರೆ. ಲಡಾಖ್‌ನಲ್ಲಿ ಈ ಸಮುದಾಯವು ಕತ್ತೆಗಳ ಸಂಖ್ಯೆಯಲ್ಲಿ ಕುಸಿತವನ್ನು ಕಾಣತೊಡಗಿದರು. ಆದ್ದರಿಂದ ಅವರು ಕತ್ತೆಯ ಹಾಲನ್ನು ಸಾಬೂನು ತಯಾರಿಸಲು ಪ್ರಾರಂಭಿಸಿದರು. ಕತ್ತೆಯ ಹಾಲಿನಿಂದ ತಯಾರಿಸಿದ ಸಾಬೂನುಗಳು ಮಹಿಳೆಯ ದೇಹವನ್ನು ಶಾಶ್ವತವಾಗಿ ಸುಂದರವಾಗಿ ಇಡುತ್ತದೆ ಎಂದು ಸಚಿವೆ ಮೇನಕಾ ಹೇಳಿದ್ರು. ಆದರೆ “ಪ್ರಾಣಿಗಳಿಂದ ಹಣ ಸಂಪಾದಿಸುವ” ಜನರ ವಿರುದ್ಧ ತಾನು ಬಲವಾಗಿ ನಿಲ್ಲುವುದಾಗಿ ಗಾಂಧಿ ಹೇಳಿದರು. ಮಾಜಿ ಕೇಂದ್ರ ಸಚಿವರು ಅನೇಕ ಪ್ರದೇಶಗಳಲ್ಲಿ ಶೀಘ್ರಗತಿಯಲ್ಲಿ ಅರಣ್ಯನಾಶ ಆಗುತ್ತಿರುವ ಬಗ್ಗೆಯೂ ಮಾತನಾಡಿದರು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ