ಸೈಫ್ ಅಲಿ ಖಾನ್ ಪ್ರಕರಣ: ಬೆಳ್ಳಂಬೆಳಿಗ್ಗೆ ಆರೋಪಿಯೊಬ್ಬನ ಬಂಧನ
Saif Ali Khan case: ಬಾಲಿವುಡ್ ನಟ ಸೈಫ್ ಅಲಿ ಖಾನ್ಗೆ ಚಾಕು ಇರಿತ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಛತ್ತೀಸ್ಘಡ ರೈಲ್ವೆ ನಿಲ್ದಾಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಮುಂಬೈನಲ್ಲಿಯೇ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೈಫ್ ಅಲಿ ಖಾನ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಬೆಳ್ಳಂಬೆಳಿಗ್ಗೆ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಹೋಟೆಲ್ ಒಂದರಲ್ಲಿ ವೇಯಿಟರ್ ಆಗಿ ಕೆಲಸ ಮಾಡುತ್ತಿದ್ದ ವಿಜಯ್ ದಾಸ್ ಹೆಸರಿನ ವ್ಯಕ್ತಿಯನ್ನು ಭಾನುವಾರ (ಜನವರಿ 19) ಬೆಳ್ಳಂಬೆಳಿಗ್ಗೆ ಪೊಲೀಸರು ಬಂಧಿಸಿರುವುದಾಗಿ ಎಎನ್ಐ ವರದಿ ಮಾಡಿದೆ. ಆರೋಪಿಯ ಚಿತ್ರವೂ ಬಹಿರಂಗಗೊಂಡಿದೆ. ಆದರೆ ಈತ ಸೈಫ್ ಅಲಿ ಖಾನ್ ಮೇಲೆ ದಾಳಿ ಮಾಡಿದ ವ್ಯಕ್ತಿ ಅಲ್ಲ ಎನ್ನಲಾಗುತ್ತಿದೆ. ಆದರೆ ದಾಳಿ ಕೋರನಿಗೆ ಸಹಾಯ ಮಾಡಿದ ಹಾಗೂ ದಾಳಿಕೋರನ ಜೊತೆಗೆ ಸಂಪರ್ಕದಲ್ಲಿ ಇದ್ದ ವ್ಯಕ್ತಿ ಈತ ಎನ್ನಲಾಗಿದೆ.
ಸೈಫ್ ಅಲಿ ಖಾನ್ ಮನೆಯಿಂದ 35 ಕಿ.ಮೀ ದೂರದಲ್ಲಿರುವ ಕಾಸರ್ವಾದಲಿಯ ಹೀರಾನಂದಾನಿ ಎಸ್ಟೇಟ್ ಬಳಿಯಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಆರೋಪಿ ವಿಜಯ್ ದಾಸ್ ಅನ್ನು ಬಂಧಿಸಲಾಗಿದೆ. ಸಿಕ್ಕಿ ಬೀಳುವ ಭಯದಲ್ಲಿ ಈತ ಹೆಸರು ಬದಲಾವಣೆ ಮಾಡಿಕೊಂಡಿದ್ದ ಹಾಗೂ ಮುಂಬೈನಿಂದ ಪರಾರಿಯಾಗುವ ಯತ್ನದಲ್ಲಿದ್ದ ಎನ್ನಲಾಗುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್ಘಡದ ರೈಲ್ವೆ ನಿಲ್ದಾಣದಲ್ಲಿ ಆಕಾಶ ಕೈಲಾಶ್ ಕನ್ನೋಜಿಯಾ ಹೆಸರಿನ ಆರೋಪಿಯನ್ನು ಸಹ ಬಂಧಿಸಲಾಗಿದೆ. ಈಗ ಮುಂಬೈನಲ್ಲಿ ಒಬ್ಬಾತನ ಬಂಧನ ಆಗಿದೆ.
ಇದನ್ನೂ ಓದಿ:ಟ್ರೋಲ್ ಆದ ಬಳಿಕ ಸೈಫ್ ಅಲಿ ಖಾನ್ ಕ್ಷಮೆ ಕೇಳಿದ ಊರ್ವಶಿ ರೌಟೆಲಾ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶದಲ್ಲಿಯೂ ಆರೋಪಿಯೊಬ್ಬನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿತ್ತು. ಆದರೆ ಮಧ್ಯ ಪ್ರದೇಶದಲ್ಲಿ ವಶಕ್ಕೆ ಪಡೆದ ವ್ಯಕ್ತಿಯನ್ನು ಬಂಧಿಸಲಾಗಿಲ್ಲ ಬದಲಿಗೆ ವಶಕ್ಕೆ ಪಡೆದು ವಿಚಾರಣೆಯನ್ನಷ್ಟೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಬುಧವಾರ ತಡರಾತ್ರಿ ಮುಂಬೈ ಬಾಂದ್ರಾದಲ್ಲಿನ ಸೈಫ್ ಅಲಿ ಖಾನ್ರ ನಿವಾಸಕ್ಕೆ ನುಗ್ಗಿದ್ದ ಅಗಂತುಕನೊಬ್ಬ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದ. ಸೈಫ್ ಮೇಲೆ ಆರು ಬಾರಿ ಚಾಕುವಿನಿಂದ ದಾಳಿ ಮಾಡಿ ಗಾಯಗೊಳಿಸಿದ್ದ. ಕೂಡಲೇ ಸೈಫ್ ಅಲಿ ಖಾನ್ ಅನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಸೈಫ್ ಅಲಿ ಖಾನ್ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ