Fresh Goddess Perfume: ಇದು ಅಂತಿಂಥದ್ದಲ್ಲಾ ಬೆವರು ಸುರಿಸಿ ಅಲ್ಲಲ್ಲಾ ಬೆವರಿನಿಂದಲೇ ತಯಾರಿಸಿದ ಪರ್ಫ್ಯೂಮ್​ಗೆ ಡಿಮ್ಯಾಂಡೋ ಡಿಮ್ಯಾಂಡು

ಪರ್ಫ್ಯೂಮ್(Perfume) ಎಂದಾಕ್ಷಣ ಎಲ್ಲರೂ ತಾವು ಬಳಕೆ ಮಾಡುವ ಸುಗಂಧದ್ರವ್ಯದ ಹೆಸರು ಅಥವಾ ಅದರ ಘಮವನ್ನು ಒಮ್ಮೆ ನೆನಪು ಮಾಡಿಕೊಳ್ಳುತ್ತೀರಿ ಅಲ್ಲವೇ?.

Fresh Goddess Perfume: ಇದು ಅಂತಿಂಥದ್ದಲ್ಲಾ ಬೆವರು ಸುರಿಸಿ ಅಲ್ಲಲ್ಲಾ ಬೆವರಿನಿಂದಲೇ ತಯಾರಿಸಿದ ಪರ್ಫ್ಯೂಮ್​ಗೆ ಡಿಮ್ಯಾಂಡೋ ಡಿಮ್ಯಾಂಡು
ಪರ್ಫ್ಯೂಮ್Image Credit source: News 18
Follow us
|

Updated on: Apr 12, 2023 | 12:16 PM

ಪರ್ಫ್ಯೂಮ್(Perfume) ಎಂದಾಕ್ಷಣ ಎಲ್ಲರೂ ತಾವು ಬಳಕೆ ಮಾಡುವ ಸುಗಂಧದ್ರವ್ಯದ ಹೆಸರು ಅಥವಾ ಅದರ ಘಮವನ್ನು ಒಮ್ಮೆ ನೆನಪು ಮಾಡಿಕೊಳ್ಳುತ್ತೀರಿ ಅಲ್ಲವೇ?. ಹಾಗೆಯೇ ಬೆವರು ಅಂದಾಕ್ಷಣ ಅಯ್ಯೋ ಚೀ ಎಂದು ಮೂಗು ಮುಚ್ಚಿಕೊಳ್ಳುತ್ತೀರಿ ಎಂಬುದೂ ಸತ್ಯ. ಆದರೆ ಈ ಫರ್ಫ್ಯೂಮ್​ನನ್ನು ಬೆವರಿನಿಂದಲೇ ತಯಾರಿಸಲಾಗಿದೆ ಎಂದರೆ ನೀವು ನಂಬ್ತೀರಾ. ಅಯ್ಯೋ ಇದೆಂಥಾ ಕಾಲ ಬಂತಪ್ಪಾ, ಇನ್ನೂ ಪರ್ಫ್ಯೂಮ್​ನೂ ಹೊಡೆದುಕೊಳ್ಳುವಂತಿಲ್ಲ ಎಂದು ಮೂಗುಮುರಿಯಬೇಡಿ. ಈ ಸುದ್ದಿ ಸಂಪೂರ್ಣವಾಗಿ ಓದಿ.

ಅನೇಕ ಡಿಯೋಡರೆಂಟ್​ಗಳ ಜಾಹೀರಾತುಗಳನ್ನು ನೀವು ಆಗಾಗ ನೋಡಿರಬಹುದು, ಹುಡುಗರು ಪರ್ಫ್ಯೂಮ್​ನ್ನು ಹಾಕಿಕೊಂಡರೆ ಸಾಕು ಆ ಘಮ ಹೆಣ್ಣುಮಕ್ಕಳನ್ನು ಆ ಪುರುಷನತ್ತ ಆಕರ್ಷಿಸುವಂತೆ ಮಾಡುತ್ತದೆ. ಹೀಗೆ ಸುಗಂಧ ದ್ರವ್ಯಗಳ ಮಾರಾಟ ಕಂಪನಿಗಳು ಜನರನ್ನು ಆಕರ್ಷಿಸಲು ಇಂತಹ ಹಲವು ಜಾಹೀರಾತುಗಳನ್ನು ಪ್ರಸಾರ ಮಾಡುತ್ತಾರೆ.

ಆದರೆ ಬ್ರೆಜಿಲಿಯನ್ ಮಾಡೆಲ್ ವೆನ್ನಸೆಸ್ಸಾ ಮೌರಾ ಎಂಬುವವರು ಸ್ವೆಟ್​ ಪರ್ಫ್ಯೂಮ್ ಬ್ರ್ಯಾಂಡ್​ ಒಂದನ್ನು ತೆರೆದಿದ್ದಾರೆ. ಇದಕ್ಕೆ ಬೇಡಿಕೆಗಳು ವೇಗವಾಗಿ ಹೆಚ್ಚುತ್ತಿದೆ. ಈ ಸುಗಂಧ ದ್ರವ್ಯದಲ್ಲಿ ಬೆವರು ಕೂಡ ಸೇರಿದೆ. ಸಾವೊ ಪಾಲೋದಲ್ಲಿ ವಾಸಿಸುತ್ತಿರುವ ಮಾಡೆಲ್ ವನೆಸ್ಸಾ ಮೌರಾ ಅವರು ಈ ಪರ್ಫ್ಯೂಮ್ ಬ್ರ್ಯಾಂಡ್ ಆರಂಭಿಸಿದ್ದಾರೆ. ಇದರಲ್ಲಿ ಅವರ ಬೆವರೂ ಕೂಡ ಬೆರೆತಿದೆ. ಬ್ರೆಜಿಲಿಯನ್ ಬೆಡಗಿಯೊಬ್ಬರು ತನ್ನ ಬೆವರಿನಿಂದ ತಯಾರಿಸಿದ ಸುಗಂಧ ದ್ರವ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಮತ್ತಷ್ಟು ಓದಿ: ಅಂದು ಎಲ್ಲರೂ ಅಬ್ಬಾ ಇದೇನ್ ವಿಚಿತ್ರ ಬುದ್ಧಿ ಇಲ್ವಾ ಅಂದಿದ್ರು: ದೆವ್ವದ ಜತೆ ಮದುವೆಯಾಗಿದ್ದ ಮಹಿಳೆಗೆ ಈಗ ವಿಚ್ಛೇಧನ ಬೇಕಂತೆ!

ಈ ಆಲೋಚನೆ ಹೇಗೆ ಬಂತು? ಆಕೆಯ ಪ್ರಿಯಕರ ಹಾಗೂ ಮಾಜಿ ಪ್ರಿಯಕರ ಯಾವಾಗಲೂ ನಿನ್ನ ದೇಹದ ವಾಸನೆಯು ನೈಸರ್ಗಿಕವಾಗಿ ಸುಗಂಧಭರಿತವಾಗಿದೆ ಅದು ನಮ್ಮನ್ನು ಆಕರ್ಷಿಸುತ್ತದೆ ಎನ್ನುತ್ತಿದ್ದರಂತೆ, ಈ ವಿಚಾರವನ್ನು ಆಕೆ ಗಂಭೀರವಾಗಿ ತೆಗೆದುಕೊಂಡು ಬೆವರಿನಿಂದಲೇ ಪರ್ಫ್ಯೂಮ್ ತಯಾರಿಸಿದ್ದಾಳೆ. ಇದಕ್ಕೆ ‘ಫ್ರೆಶ್ ಗಾಡೆಸ್ ಪರ್ಫ್ಯೂಮ್’ ಎಂದು ಹೆಸರಿಟ್ಟಿದ್ದಾಳೆ. ಇದರಲ್ಲಿ ಆಕೆಯ ಬೆವರಿನ ಹೊರತಾಗಿ ಇತರೆ ಪದಾರ್ಥಗಳು ಕೂಡ ಇದೆ. ಬಾಟಲಿಯಲ್ಲಿ 8 ಮಿಲಿ ಬೆವರನ್ನು ಬೆರೆಸಲಾಗುತ್ತದೆ.

ಈ ಪರ್ಫ್ಯೂಮ್ ಬೆಲೆ ಎಷ್ಟು? ವರದಿ ಪ್ರಕಾರ ಈ ಪರ್ಫ್ಯೂಮ್ ಬೆಲೆ 50 ಎಂಎಲ್​ಗೆ 138 ಡಾಲರ್​ಗಳು ಅಂದರೆ 11 ಸಾವಿರ ರೂಪಾಯಿಯಂತೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?