Perfume Side Effect:ನಿಮ್ಮ ನೆಚ್ಚಿನ ಪರ್ಫ್ಯೂಮ್ ನಿಮ್ಮ ದೇಹಕ್ಕೆಷ್ಟು ಮಾರಕ

ನಿಮ್ಮ ನೆಚ್ಚಿನ ಪರ್ಫ್ಯೂಮ್ ದಿನ ಬಳಕೆಯಿಂದ ಎಂದಾದರೂ ಗುಳ್ಳೆಗಳು, ಅಲರ್ಜಿಗಳು ಮುಂತಾದ ಸಮಸ್ಯೆಗೆ ಒಳಗಾಗಿದ್ದರೆ, ನೀವು ಮುಂದೆ ಸುಗಂಧ ದ್ರವ್ಯಗಳನ್ನು ಬಳಸುವ ಮೊದಲು ಹತ್ತಿರದ ಆಯುರ್ವೇದ ತಜ್ಞರನ್ನು ಭೇಟಿ ನೀಡಿ.

Perfume Side Effect:ನಿಮ್ಮ ನೆಚ್ಚಿನ ಪರ್ಫ್ಯೂಮ್ ನಿಮ್ಮ ದೇಹಕ್ಕೆಷ್ಟು ಮಾರಕ
Perfume
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Oct 23, 2022 | 6:07 PM

ಪರ್ಫ್ಯೂಮ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ..? ಪ್ರತಿಯೊಬ್ಬರೂ ಇಷ್ಟಪಡುವ ಹಾಗೂ ದೈನಂದಿನ ಜೀವನದಲ್ಲಿ ಬಳಸುವ ಒಂದು ಮುಖ್ಯ ವಸ್ತುವಾಗಿದೆ. ಆದರೆ ದಿನಂಪ್ರತಿ ಬಳಸುವುದರಿಂದ ದೇಹದ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎಂಬುದರ ಬಗೆಗಿನ ತಜ್ಞರ ಸಲಹೆ ಸೂಚನೆಗಳು ಇಲ್ಲಿವೆ.

ನಿಮ್ಮ ನೆಚ್ಚಿನ ಪರ್ಫ್ಯೂಮ್ ದಿನ ಬಳಕೆಯಿಂದ ಎಂದಾದರೂ ಗುಳ್ಳೆಗಳು, ಅಲರ್ಜಿಗಳು ಮುಂತಾದ ಸಮಸ್ಯೆಗೆ ಒಳಗಾಗಿದ್ದರೆ, ನೀವು ಮುಂದೆ ಸುಗಂಧ ದ್ರವ್ಯಗಳನ್ನು ಬಳಸುವ ಮೊದಲು ಹತ್ತಿರದ ಆಯುರ್ವೇದ ತಜ್ಞರನ್ನು ಭೇಟಿ ನೀಡಿ.

ಚರ್ಮವು ದೇಹದ ಅತಿ ಸೂಕ್ಷ್ಮವಾದ ಭಾಗವಾಗಿದ್ದು, ನಮ್ಮ ದೇಹಕ್ಕೆ ರಕ್ಷಣೆಯ ಪದರವಾಗಿ ಕಾರ್ಯನಿರ್ವಹಿಸುತ್ತದೆ. ಕೆಲವು ಅಪಾಯಕಾರಿ, ಹಾನಿಕಾರಕ ಸೌಂದರ್ಯವರ್ಧಕಗಳು ದಿನಂಪ್ರತಿ ಬಳಸುತ್ತಿದ್ದಂತೆಯೇ ಚರ್ಮವು ಹದಗೆಡುವ, ಚರ್ಮದ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ಮುಲುಂಡ್‌ನ ಫೋರ್ಟಿಸ್ ಆಸ್ಪತ್ರೆಯ ಸಲಹೆಗಾರ ಚರ್ಮಶಾಸ್ತ್ರಜ್ಞರಾದ ಡಾ ಸ್ಮೃತಿ ನಸ್ವಾ ಸಿಂಗ್ ಇಂಡಿಯನ್ ಎಕ್ಸ್ ಪ್ರೆಸ್ಸ್ ನೊಂದಿಗಿನ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನೀವು ದಿನ ಬಳಸುವ ಪರ್ಫ್ಯೂಮ್ ಗಳು 100 ಕ್ಕೂ ಹೆಚ್ಚು ವಿಷಕಾರಿ ರಾಸಾಯನಿಕಗಳನ್ನು ಹೊಂದಿದ್ದು, ಇದು ವಿವಿಧ ಅಲರ್ಜಿಗಳು ಮತ್ತು ಇತರ ಚರ್ಮದ ಕಾಯಿಲೆಗೆ ಕಾರಣವಾಗಬಹುದು ಎಂದು ಆಯುರ್ವೇದ ತಜ್ಞರಾದ ಡಾ.ಅಪರ್ಣಾ ಪದ್ಮನಾಭನ್ ಹೇಳಿದ್ದಾರೆ.

ಕೆಲವು ಸುಗಂಧ ದ್ರವ್ಯಗಳು ಎಲ್ಲಾ ಚರ್ಮದ ಪ್ರಕಾರಗಳಿಗೆ ಹೊಂದಿಕೆಯಾಗುವುದಿಲ್ಲ. ಕೆಲವು ಸುಗಂಧ ದ್ರವ್ಯಗಳು ನಿರ್ದಿಷ್ಟವಾಗಿ ಸೂಕ್ಷ್ಮ ಚರ್ಮದ ರೀತಿಯ ಜನರಿಗೆ ಸೂಕ್ತವಲ್ಲ. ಸುಗಂಧ ದ್ರವ್ಯದ ಬಳಕೆಯಿಂದ ಉಂಟಾಗುವ ಅಲರ್ಜಿಗಳು ಅದರಲ್ಲಿ ಸೇರಿಸಲಾದ ರಾಸಾಯನಿಕಗಳಿಂದಲೂ ಉಂಟಾಗಬಹುದು. ಮನೆಯಲ್ಲಿ ತಯಾರಿಸಿದ ಅತ್ಯುತ್ತಮ ಸುಗಂಧ ದ್ರವ್ಯಗಳು ಅಂತಹ ಜನರಿಗೆ ಸಹಾಯ ಮಾಡಬಹುದು.

ದಿನಬಳಸುವ ದುಬಾರಿ ಮೌಲ್ಯದ ಸುಗಂಧ ದ್ರವ್ಯಗಳು ಜನರನ್ನು ಸೆಳೆಯುವಂತಹ ರಾಸಾಯನಿಕ ಪರಿಮಳಗಳನ್ನು ಹೊಂದಿದ್ದು, ಇದರಲ್ಲಿ 100 ಕ್ಕೂ ಹೆಚ್ಚು ವಿಷಕಾರಿ ರಾಸಾಯನಿಕಗಳನ್ನು ಹೊಂದಿದೆ. ಸುಗಂಧ ದ್ರವ್ಯಗಳು, ಕಲೋನ್‌ಗಳು, ರೂಮ್ ಫ್ರೆಶ್‌ನರ್‌ಗಳು, ಫ್ಯಾಬ್ರಿಕ್ ಫ್ರೆಶ್‌ನರ್‌ಗಳು, ಡಿಯೋಡರೆಂಟ್‌ಗಳು ನಿಮ್ಮ ಆರೋಗ್ಯದ ಮೇಲೆ ಅಪಾಯಕಾರಿಯಾಗಿದೆ ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಂತೆಯೇ, ಅಲರ್ಜಿ, ಉಬ್ಬಸ ಅಥವಾ ಅಸ್ತಮಾವನ್ನು ಹೆಚ್ಚಿಸುವ ಉಸಿರಾಟದ ಸ್ಯಾನಿಟೈಸರ್‌ಗಳ ಬಗ್ಗೆ ಎಚ್ಚರದಿಂದಿರಿ,ಇಂತಹ ಸ್ಯಾನಿಟೈಸರ್‌ಗಳು ಕ್ರಮೇಣವಾಗಿ ನಿಮ್ಮ ದೇಹದಲ್ಲಿ ನಿಧಾನವಾಗಿ ವಿಷಕಾರಿಯಾಗಿ ಪರಿಣಮಿಸಬಹುದು. ಜೊತೆಗೆ ಸಂತಾನೋತ್ಪತ್ತಿ ವ್ಯವಸ್ಥೆಗೆ ತೊಡಕಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.

ನಿಮ್ಮ ನೆಚ್ಚಿನ ಸುಗಂಧ ದ್ರವ್ಯವು 100 ಕ್ಕಿಂತ ಹೆಚ್ಚು ವಿಷಕಾರಿ ಪದಾರ್ಥಗಳನ್ನು ಹೊಂದಿರಬಹುದು, ಚರ್ಮವು ಹೇರಳವಾಗಿರುವುದರಿಂದ ಮತ್ತು ಶ್ರೀಮಂತ ನರ ಮತ್ತು ರಕ್ತ ವ್ಯವಸ್ಥೆಯನ್ನು ಹೊಂದಿರುವುದರಿಂದ, ಕೆಲವು ಸೌಂದರ್ಯವರ್ಧಕಗಳು ಮತ್ತು ಸೌಂದರ್ಯವರ್ಧಕಗಳನ್ನು ಹೀರಿಕೊಳ್ಳಬಹುದುಎಂದು ಡಾ ಸ್ಮೃತಿ ನಸ್ವಾ ಸಿಂಗ್ ಹೇಳಿದ್ದಾರೆ.

ಡಾ ಸ್ಮೃತಿ ಅವರು ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶವನ್ನು ವಿವರಿಸಿದ್ದಾರೆ. ಅದು ಈ ಕೆಳಗಿನಂತಿವೆ:

ನೀವು ಪ್ರತಿ ದಿನ ಬಳಸುವ ಪರ್ಫ್ಯೂಮ್ ನಿಮ್ಮ ದೇಹಕ್ಕೆ ಅಲರ್ಜಿಯಾಗಿದ್ದರೆ, ಅದರ ಪರಿಣಾಮ ಸೀನುವಿಕೆ, ಉಬ್ಬಸ ಮುಂತಾದ ಲಕ್ಷಣಗಳು ಕಂಡುಬರುತ್ತದೆ. ಇದರರ್ಥ ಈಗಾಗಲೇ ಅಸ್ತಮಾ, ಸೂಕ್ಷ್ಮ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದವರು ಸುಗಂಧ ದ್ರವ್ಯಗಳನ್ನು ಬಳಕೆಯಿಂದ ದೂರವಿರುವುದು ಉತ್ತಮ. ಅದಾಗಿಯೂ ಅವರು ಸುಗಂಧ ದ್ರವ್ಯಗಳು ಅಥವಾ ಸೌಂದರ್ಯವರ್ಧಕಗಳನ್ನು ಬಳಸಲು ಬಯಸಿದರೆ, ಅವರು ತಮ್ಮ ಕಿವಿಗಳ ಹಿಂದೆ ಸ್ಪ್ರೇ ಮಾಡಿ, 48 ಗಂಟೆಗಳಲ್ಲಿ ಯಾವುದೇ ಅಲರ್ಜಿಗಳು ಉಂಟಾಗದಿದ್ದಲ್ಲಿ ಪರ್ಫ್ಯೂಮ್ ಗಳನ್ನು ಬಳಸಬಹುದಾಗಿದೆ.

ನೋಯ್ಡಾ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸಹಾಯಕ ಪ್ರಾಧ್ಯಾಪಕ ಡಾ ಮೋನಿಕಾ ಸಿಂಗ್ ಅವರು ಇಂಡಿಯನ್ ಎಕ್ಸ್ ಪ್ರೆಸ್ಸ್ ನೊಂದಿಗಿನ ಸಂದರ್ಶನದಲ್ಲಿ ಹೇಳಿರುವಂತೆ ಸುಗಂಧ ದ್ರವ್ಯಗಳು ಕ್ಲೋರಿನೇಟೆಡ್ ಆರೊಮ್ಯಾಟಿಕ್ ಅನ್ನು ಒಳಗೊಂಡಿರುವುದರಿಂದ ದೇಹಕ್ಕೆ ಹಾನಿಕಾರಕ. ಹಾನಿಕಾರಕ ರಾಸಾಯನಿಕಗಳನ್ನು ಪರ್ಫ್ಯೂಮ್ಗಳಲ್ಲಿ ಮಾತ್ರವಲ್ಲದೇ ಸುಗಂಧಭರಿತ ಸೋಪ್‌ಗಳು, ಶಾಂಪೂ, ಟೂತ್‌ಪೇಸ್ಟ್ ಮತ್ತು ದ್ರವ ಸೋಂಕು ನಿವಾರಕಗಳಂತಹ ಗೃಹೋಪಯೋಗಿ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ:Deepavali 2022: ಹಬ್ಬಗಳ ಸಂದರ್ಭದಲ್ಲಿ ಮನೆ ಸ್ವಚ್ಚತೆಯ ಜೊತೆಗೆ ಆರೋಗ್ಯದ ಕಡೆ ಗಮನಹರಿಸಿ

ಆದರೆ, ಆಯುರ್ವೇದದ ಪ್ರಕಾರ ಎಲ್ಲಾ ಸುಗಂಧ ದ್ರವ್ಯಗಳು ಹಾನಿಕಾರಕವಲ್ಲ ಎಂದು ಆಯುಶಕ್ತಿ ಸಂಸ್ಥೆಯ ಸಹ ಸಂಸ್ಥಾಪಕಿ ಡಾ.ಸ್ಮಿತಾ ನರಮ್ ಹೇಳಿದ್ದಾರೆ. ಹಿಂದೆ, ಸುಗಂಧ ದ್ರವ್ಯಗಳನ್ನು ಗಿಡಮೂಲಿಕೆಗಳು, ತೈಲಗಳಿಂದ ತಯಾರಿಸಲಾಗುತ್ತಿತ್ತು, ಆದರೆ ಇಂದು ಅವುಗಳನ್ನು ಹೆಚ್ಚಾಗಿ ರಾಸಾಯನಿಕವಾಗಿ ತುಂಬಿಸಲಾಗುತ್ತದೆ ಮತ್ತು ಕಚ್ಚಾ ಅಥವಾ ಟರ್ಪಂಟೈನ್ ತೈಲಗಳಿಂದ ತಯಾರಿಸಲಾಗುತ್ತದೆ ಎಂದು ಹೇಳಿದ್ದಾರೆ.

Published On - 5:43 pm, Sun, 23 October 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ