AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನಲ್ಲಿ ಯಾರೋ ಇದ್ದಾರೆ’; ಆರ್ಯವರ್ಧನ್​​ಗೆ ನೆನಪಾಯ್ತು ಕಾರು ಅಪಘಾತದ ದೃಶ್ಯ

ವೈದ್ಯರ ಬಳಿ ಆರ್ಯವರ್ಧನ್​​ನ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವೇಳೆ ಆರ್ಯವರ್ಧನ್​ಗೆ ಕಾರು ಅಪಘಾತ ಆಗಿದ್ದಾಗಿನ ಘಟನೆಯ ನೆನಪು ಹಾದು ಹೋಗಿದೆ.

‘ನನ್ನಲ್ಲಿ ಯಾರೋ ಇದ್ದಾರೆ’; ಆರ್ಯವರ್ಧನ್​​ಗೆ ನೆನಪಾಯ್ತು ಕಾರು ಅಪಘಾತದ ದೃಶ್ಯ
ಆರ್ಯವರ್ಧನ್
TV9 Web
| Edited By: |

Updated on: Sep 29, 2022 | 7:30 AM

Share

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ (Jothe Jotheyali) ಆರ್ಯವರ್ಧನ್​ ಬದಲಾಗಿದ್ದಾನೆ. ಈ ಮೊದಲು ಅನಿರುದ್ಧ ಜತ್ಕರ್ ನಿರ್ವಹಿಸುತ್ತಿದ್ದ ಪಾತ್ರವನ್ನು ಈಗ ಹರೀಶ್ ರಾಜ್ ಅವರು ಮಾಡುತ್ತಿದ್ದಾರೆ. ಅಭಿಮಾನಿಗಳು ಹೊಸ ಆರ್ಯವರ್ಧನ್​ ಅವರನ್ನು ಒಪ್ಪಿಕೊಳ್ಳುತ್ತಿಲ್ಲ. ಸೋಶಿಯಲ್ ಮೀಡಿಯಾ ಕಮೆಂಟ್ ಬಾಕ್ಸ್​ನಲ್ಲಿ ಈ ಬಗ್ಗೆ ಕಮೆಂಟ್ ಮಾಡಲಾಗುತ್ತಿದೆ. ಅನೇಕ ಧಾರಾವಾಹಿಗಳಿಗೆ ಈ ಮೊದಲು ಇದೇ ಮಾದರಿಯ ಸಮಸ್ಯೆ ಎದುರಾಗಿತ್ತು. ಆದರೆ, ದಿನ ಕಳೆದಂತೆ ಬದಲಾದ ನಾಯಕನ್ನು ಒಪ್ಪಿಕೊಂಡ ಉದಾಹರಣೆ ಸಾಕಷ್ಟಿದೆ. ‘ಜೊತೆ ಜೊತೆಯಲಿ’ ಧಾರಾವಾಹಿ ತಂಡ ಕೂಡ ಇದೇ ನಂಬಿಕೆಯಲ್ಲಿದೆ. ನಿಧಾನವಾಗಿ ಹೊಸ ಆರ್ಯವರ್ಧನ್​ನನ್ನು ವೀಕ್ಷಕರು ಒಪ್ಪಿಕೊಳ್ಳಬಹುದು. ಅದೇ ರೀತಿ ಆರ್ಯವರ್ಧನ್ (Aryavardhan)​ ಪಾತ್ರ ಕೂಡ ನಿಧಾನವಾಗಿ ಧಾರಾವಾಹಿಯಲ್ಲಿ ಆವರಿಸಿಕೊಳ್ಳುತ್ತಿದೆ.

ಆರ್ಯವರ್ಧನ್​​ಗೆ ಅಪಘಾತವಾದ ರಭಸಕ್ಕೆ ಮುಖ ಜಜ್ಜಿ ಹೋಗಿತ್ತು. ತಲೆಗೆ ಏಟು ಬಿದ್ದು ನೆನಪು ಮಾಸಿದೆ. ಆತನ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಅಷ್ಟೇ ಅಲ್ಲ, ನೆನಪು ಮರಳಿ ತರಲು ಹಲವು ರೀತಿಯ ಕಸರತ್ತು ಮಾಡಲಾಗುತ್ತಿದೆ. ವೈದ್ಯರ ಬಳಿ ಆರ್ಯವರ್ಧನ್​​ನ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವೇಳೆ ಆರ್ಯವರ್ಧನ್​ಗೆ ಕಾರು ಅಪಘಾತ ಆಗಿದ್ದಾಗಿನ ಘಟನೆಯ ನೆನಪು ಹಾದು ಹೋಗಿದೆ.

ವೈದ್ಯರ ಎದುರು ಆರ್ಯವರ್ಧನ್ ಕುಳಿತಿದ್ದ. ಈ ವೇಳೆ ಆತನಿಗೆ ಬೆಂಜ್ ಕಾರಿನ ಫೋಟೋ ತೋರಿಸಲಾಗಿದೆ. ಇದೇ ಕಾರನ್ನು ಆತ ಅಪಘಾತದ ಸಂದರ್ಭದಲ್ಲಿ ಚಲಾಯಿಸುತ್ತಿದ್ದ. ಆ ಕಾರು ನೋಡುತ್ತಿದ್ದಂತೆ ಆರ್ಯವರ್ಧನ್​​ಗೆ ಅಪಘಾತದ ನೆನಪು ಕಾಡಿದೆ. ಈ ವೇಳೆ ಆತ ಜೋರಾಗಿ ಕಿರುಚಾಡಿದ್ದಾನೆ. ವೈದ್ಯರು ಆತನನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ
Image
Megha Shetty: ಮಹೇಶ್ ಬಾಬು ಭೇಟಿ ಹಿಂದಿನ ಉದ್ದೇಶ ತಿಳಿಸಿದ ನಟಿ ಮೇಘಾ ಶೆಟ್ಟಿ
Image
Megha Shetty: ಕಲರ್ಸ್​ ಕನ್ನಡದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಮೇಘಾ ಶೆಟ್ಟಿ
Image
ಡಾರ್ಲಿಂಗ್​ ಕೃಷ್ಣ ಜೊತೆ ಮೇಘಾ ಶೆಟ್ಟಿ ‘ದಿಲ್​ ಪಸಂದ್’​; ‘ಜೊತೆ ಜೊತೆಯಲಿ’ ನಟಿಗೆ ಸಿಕ್ಕ ಪಾತ್ರ ಹೇಗಿದೆ?
Image
ಮೇಘಾ ಶೆಟ್ಟಿ ಮನೆಗೆ ಬಂತು ಎರಡು ಐಷಾರಾಮಿ ಕಾರು; ಖುಷಿ ಹಂಚಿಕೊಂಡ ನಟಿ

ಇನ್ನು, ಪರ್ಫ್ಯೂಮ್ ಒಂದನ್ನು ಆರ್ಯವರ್ಧನ್​ ಮೂಗಿನ ಬಳಿ ಹಿಡಿಯಲಾಗಿದೆ. ಅದನ್ನು ಗ್ರಹಿಸಿದ ಆರ್ವರ್ಧನ್​, ‘ನನಗೆ ಆಪ್ತರಾದವರು ಈ ಪರ್ಫ್ಯೂಮ್ ಹಾಕಿಕೊಳ್ಳುತ್ತಿದ್ದರು’ ಎಂದಿದ್ದಾನೆ. ಇನ್ನು, ಸಂಪಿಗೆ ಹೂವಿನ ಪರಿಮಳ ತೋರಿಸುತ್ತಿದ್ದಂತೆ ಆರ್ಯವರ್ಧನ್​ ವಿಲವಿಲ ಒದ್ದಾಡಿದ್ದಾನೆ. ‘ನನಗೆ ಆ ಹೂವನ್ನು ಕಂಡರೆ ಆಗುವುದಿಲ್ಲ. ದೂರ ಇಡಿ’ ಎಂದು ಕೂಗಾಡಿದ್ದಾನೆ. ಆ ಹೂವಿನ ಪರಿಮಳ ತೆಗೆದುಕೊಳ್ಳುತ್ತಿದ್ದಂತೆ ಆರ್ಯವರ್ಧನ್​​ಗೆ ರಾಜ ನಂದಿನಿಯ ನೆನಪುಗಳು ಕಾಡಿವೆ. ಹೀಗಾಗಿ ಆತ ಆ ರೀತಿ ಮಾಡಿದ್ದಾನೆ ಎನ್ನಲಾಗಿದೆ. ‘ನನ್ನಲ್ಲಿ ಇನ್ಯಾರೋ ಇದ್ದಾರೆ ಎಂದು ನನಗೆ ಅನಿಸುತ್ತಿದೆ’ ಎಂಬ ಮಾತನ್ನು ಆರ್ಯವರ್ಧನ್​ ಹೇಳಿದ್ದಾನೆ.

ಹೊರಬಿತ್ತು 700 ಕೋಟಿ ಸಾಲದ ವಿಚಾರ:

ಹೊಸ ಆರ್ಯವರ್ಧನ್ ಆಸ್ಪತ್ರೆಗೆ ಹೋಗಿದ್ದ. ಈ ಸಂದರ್ಭದಲ್ಲಿ ರಾಜ ನಂದಿನಿ ವಿಲಾಸದಲ್ಲಿ ಹೊಸ ಆರ್ಯವರ್ಧನ್​ನ ಮೊಬೈಲ್​ ಅನ್ನು ಮಾನ್ಸಿ ಚೆಕ್ ಮಾಡಿದ್ದಾಳೆ. ಈ ವೇಳೆ 700 ಕೋಟಿ ರೂಪಾಯಿ ಸಾಲದ ವಿಚಾರ ಗೊತ್ತಾಗಿದೆ. ಮಾನ್ಸಿ ಚೆಕ್ ಮಾಡಿದ್ದು ಸತ್ತು ಹೋಗಿರುವ ವಿಶ್ವನ ಮೊಬೈಲ್​ನ. ಆದರೆ, ಇದನ್ನು ಹೊಸ ಆರ್ಯವರ್ಧನ್​ಗೆ ನೀಡಿದ್ದಾಳೆ ಪ್ರಿಯಾ. ಈ ಕಾರಣಕ್ಕೆ ಈತನೇ ಆರ್ಯವರ್ಧನ್ ಎಂಬ ವಿಚಾರ ಗೊತ್ತಾಗಿಲ್ಲ. ‘700 ಕೋಟಿ ರೂಪಾಯಿ ಸಾಲ ಇದ್ದ ಕಾರಣಕ್ಕೆ ಅವರು ಸಹಾಯ ಕೇಳಿಕೊಂಡು ಇಲ್ಲಿಗೆ ಬಂದಿದ್ದಾರೆ’ ಎಂಬ ಅನುಮಾನ ಮಾನ್ಸಿಗೆ ಮೂಡಿದೆ. ತನ್ನ ಎಚ್ಚರಿಕೆಯಲ್ಲಿ ತಾನು ಇರುವ ನಿರ್ಧಾರಕ್ಕೆ ಆಕೆ ಬಂದಿದ್ದಾಳೆ.

ಝೇಂಡೆಗೆ ಮೂಡಿದೆ ಅನುಮಾನ:

ಆಸ್ಪತ್ರೆಗೆ ಹೊಸ ಆರ್ಯವರ್ಧನ್​ನ (ಸಂಜು) ಕರೆದುಕೊಂಡು ಹೋಗಿರುವ ವಿಚಾರ ಝೇಂಡೆಗೆ ಗೊತ್ತಾಗಿದೆ. ಈ ಬಗ್ಗೆ ಆತನಿಗೆ ಅನುಮಾನ ಮೂಡಿದೆ. ಇದೇ ಸಂದರ್ಭಕ್ಕೆ ಆಸ್ಪತ್ರೆಗೆ ಪೊಲೀಸರು ಕೂಡ ಭೇಟಿ ನೀಡಿದ್ದರೆ. ಈ ಕಾರಣದಿಂದ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ, ಸಂಜುನ ತಾಯಿ ಪ್ರಿಯಾ ಬಳಿ ಈ ಬಗ್ಗೆ ಪ್ರಶ್ನೆ ಮಾಡಿದ್ದಾನೆ ಝೇಂಡೆ. ಎಲ್ಲವನ್ನೂ ತಿಳಿದುಕೊಳ್ಳಬೇಕು ಎಂದಾಗ ಪ್ರಿಯಾಗೆ ದೂರವಾಣಿ ಕರೆ ಬಂದಿದ್ದರಿಂದ ಸೈಲೆಂಟ್ ಆಗಿ ಅಲ್ಲಿಂದ ಕಾಲ್ಕಿತ್ತಿದ್ದಾನೆ ಝೇಂಡೆ.

ಶ್ರೀಲಕ್ಷ್ಮಿ ಎಚ್.

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!