‘ಆರ್ಯವರ್ಧನ್​ನ ಕೊಂದಿದ್ದು ಅನು’; ಸ್ಪಷ್ಟ ಕಾರಣಗಳೊಂದಿಗೆ ವಿವರಿಸಿದ ಝೇಂಡೆ

‘ಆರ್ಯವರ್ಧನ್ ಈ ಮನೆಗೋಸ್ಕರ ಎಲ್ಲವನ್ನೂ ಕೊಟ್ಟ. ಆತನಿಂದ ಎಲ್ಲರೂ ಕೆಲಸ ಮಾಡಿಸಿಕೊಂಡರು. ಆದರೆ, ಆತನಿಗೆ ಕೊನೆಗೆ ಸಿಕ್ಕಿದ್ದು ಸಾವು ಮಾತ್ರ. ನನಗೆ ಈ ಫೋಟೋ ನೋಡಿ ಅಳುವ ಕೆಲಸ’ ಎಂದು ದುಃಖ ತೋಡಿಕೊಂಡಿದ್ದಾನೆ ಝೇಂಡೆ.

‘ಆರ್ಯವರ್ಧನ್​ನ ಕೊಂದಿದ್ದು ಅನು’; ಸ್ಪಷ್ಟ ಕಾರಣಗಳೊಂದಿಗೆ ವಿವರಿಸಿದ ಝೇಂಡೆ
ಅನು-ಜೆಂಡೆ
TV9kannada Web Team

| Edited By: Rajesh Duggumane

Sep 28, 2022 | 9:08 AM

‘ಜೊತೆ ಜೊತೆಯಲಿ’ ಧಾರಾವಾಹಿ (Jothe Jotheyali Serial) ಅನೇಕ ಟ್ವಿಸ್ಟ್​ಗಳನ್ನು ಪಡೆದುಕೊಂಡು ಸಾಗುತ್ತಿದೆ. ಕಥಾನಾಯಕ ಬದಲಾದ ಕಾರಣ ಧಾರಾವಾಹಿಗೆ ಹಲವು ತಿರುವುಗಳನ್ನು ನೀಡುವುದು ಅನಿವಾರ್ಯ ಆಗಿದೆ. ಆರ್ಯವರ್ಧನ್​​ಗೆ (Aryavardhan) ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಆತನಿಗೆ ನೆನಪು ಪೂರ್ತಿ ಮಾಸಿದೆ. ಇವನೇ ಆರ್ಯವರ್ಧನ್ ಎನ್ನುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಹೀಗಾಗಿ, ಬಹುತೇಕರು ಆರ್ಯವರ್ಧನ್ ಸತ್ತಿದ್ದಾನೆ ಎಂದೇ ಅಂದುಕೊಂಡಿದ್ದಾರೆ. ಝೇಂಡೆ ಕೂಡ ಹಾಗೆಯೇ ಭಾವಿಸಿದ್ದಾನೆ. ಆಪ್ತ ಮಿತ್ರನ ಸಾವಿನ ಹಿಂದೆ ಅನು ಸಿರಿಮನೆ ಕೈವಾಡವಿದೆ ಎಂಬುದು ಝೇಂಡೆಯ ಬಲವಾದ ನಂಬಿಕೆ.

ಆರ್ಯವರ್ಧನ್ ಪಿ.ಎ. ಮೀರಾ ಹೆಗಡೆ ಹಾಗೂ ಝೇಂಡೆ ಕಚೇರಿಯಲ್ಲಿ ಮಾತನಾಡುತ್ತಾ ನಿಂತಿದ್ದರು. ಆರ್ಯವರ್ಧನ್ ಫೋಟೋ ನೋಡಿ ಝೇಂಡೆ ಅಳುತ್ತಿದ್ದ. ಆತನಿಗೆ ದುಃಖ ತಡೆದುಕೊಳ್ಳೋಕೆ ಸಾಧ್ಯವೇ ಆಗುತ್ತಿರಲಿಲ್ಲ. ‘ಆರ್ಯವರ್ಧನ್ ಈ ಮನೆಗೋಸ್ಕರ ಎಲ್ಲವನ್ನೂ ಕೊಟ್ಟ. ಆತನಿಂದ ಎಲ್ಲರೂ ಕೆಲಸ ಮಾಡಿಸಿಕೊಂಡರು. ಆದರೆ, ಆತನಿಗೆ ಕೊನೆಗೆ ಸಿಕ್ಕಿದ್ದು ಸಾವು ಮಾತ್ರ. ನನಗೆ ಈ ಫೋಟೋ ನೋಡಿ ಅಳುವ ಕೆಲಸ’ ಎಂದು ದುಃಖ ತೋಡಿಕೊಂಡಿದ್ದಾನೆ ಝೇಂಡೆ.

ಆರ್ಯವರ್ಧನ್ ಸತ್ತಿರುವ ಬಗ್ಗೆ ಝೇಂಡೆಗೆ ಅನುಮಾನ ಮೂಡಿದೆ. ಆದರೆ, ಮನೆಯ ಯಾರೊಬ್ಬರಿಗೂ ಈ ಬಗ್ಗೆ ಅನುಮಾನ ಮೂಡಿಲ್ಲ ಎಂಬುದು ಝೇಂಡೆ ಬೇಸರ. ‘ಆರ್ಯವರ್ಧನ್ ನಿಧನ ಹೊಂದಿರುವ ಬಗ್ಗೆ ಮನೆಯವರಿಗೆ ಯಾರಿಗೂ ಚಿಂತೆ ಕಾಡುತ್ತಿಲ್ಲ. ಆತ ಏಕೆ ಸತ್ತ ಎಂಬ ಬಗ್ಗೆ ಅನುಮಾನ ಕಾಡಬೇಕಿತ್ತು. ಆದರೆ, ಯಾರಿಗೂ ಆ ಅನುಮಾನ ಮೂಡಿಲ್ಲ. ಅದು ಏಕೆ ಅನ್ನೋದು ನನ್ನ ಪ್ರಶ್ನೆ. ಅನು ಸಿರಿಮನೆಯೇ ಈ ಕೊಲೆ ಮಾಡಿಸಿದ್ದಾಳೆ. ಹೀಗಾಗಿ, ಮನೆಯವರು ತನಿಖೆಯ ಗೋಜಿಗೆ ಹೋಗಿಲ್ಲ’ ಎಂದು ಝೇಂಡೆ ಹೇಳುತ್ತಿದ್ದಂತೆ ಮೀರಾಗೂ ಅನುಮಾನ ಮೂಡಿದೆ. ‘ನಾನು ಆರ್ಯ ಸರ್​​ನ ಅನುಗೆ ಬಿಟ್ಟು ಕೊಡದೆ ಇದ್ದಿದ್ದರೆ ಬಹುಶಃ ಅವರು ಬದುಕುತ್ತಿದ್ದರೇನೋ’ ಎಂಬ ಮಾತನ್ನು ಅವಳು ಮನಸ್ಸಿನಲ್ಲೇ ಹೇಳಿಕೊಂಡಿದ್ದಾಳೆ.

ಸಂಜುನಲ್ಲಿ ಆರ್ಯವರ್ಧನ್​​ನ ಕಾಣುತ್ತಿದ್ದಾಳೆ ಅನು

ಸಂಜು (ಹೊಸ ಆರ್ಯವರ್ಧನ್) ಕಂಡಾಗ ಅನುಗೆ ತನ್ನ ಪತಿಯದ್ದೇ ನೆನಪು ಕಾಡುತ್ತಿದೆ. ಆತ ನಡೆದುಕೊಳ್ಳುತ್ತಿರುವ ರೀತಿಯಿಂದ ಈ ಅನುಮಾನ ಮೂಡಿದೆ. ಅನು ಆಸ್ಪತ್ರೆಗೆ ತೆರಳುವವಳಿದ್ದಳು. ಈ ಸಂದರ್ಭದಲ್ಲಿ ಸಂಜು ಬಂದು ಕಾರಿನ ಬಾಗಿಲು ತೆಗೆದಿದ್ದಾನೆ. ಆರ್ಯವರ್ಧನ್ ಕೂಡ ಅದೇ ರೀತಿ ಮಾಡುತ್ತಿದ್ದ. ಈ ಕಾರಣಕ್ಕೆ ಅನುಗೆ ಸಿಟ್ಟು ಬಂದಿದೆ. ಹೀಗಾಗಿ, ಆಕೆ ಕಾರ್ ಡೋರ್ ಮುಚ್ಚಿ ತಾನೇ ಬಾಗಿಲು ತೆಗೆದುಕೊಂಡು ಕಾರು ಹತ್ತಿದ್ದಾಳೆ.

ಸಂಜುಗೆ ಮರಳುತ್ತಿದೆ ನೆನಪು

ಸಂಜು ಡಾಕ್ಟರ್ ಬಳಿ ಬಂದು ಚೆಕಪ್ ಮಾಡಿಸಿದ್ದಾನೆ. ತನಗೆ ಹಳೆಯ ನೆನಪು ಕಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಾನೆ. ‘ನಾನು ಎಲ್ಲರ ಬಳಿ ಮಾತನಾಡುವಾಗಲೂ ಏನೋ ಒಂದು ವಿಚಿತ್ರ ಭಾವನೆ ಕಾಡುತ್ತದೆ. ನನಗೆ ಅವರು ಗೊತ್ತು ಎಂಬ ರೀತಿಯಲ್ಲಿ ಅನಿಸುತ್ತದೆ. ಒಮ್ಮೊಮ್ಮೆ ನನಗೆ ನಾನು ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ಈ ಕಾರಣಕ್ಕೆ ಸುಮ್ಮನಾಗಿ ಬಿಡುತ್ತೇನೆ’ ಎಂದು ವೈದ್ಯರ ಬಳಿ ದುಃಖ ತೋಡಿಕೊಂಡಿದ್ದಾನೆ ಸಂಜು.

ಇದನ್ನೂ ಓದಿ: ಹುಟ್ಟುವ ಮಗುವಿಗೆ ಹೊಸ ಭರವಸೆ ನೀಡಿದ ಅನು ಸಿರಿಮನೆ; ಆರ್ಯವರ್ಧನ್​ಗೆ ಬರುತ್ತಿದೆ ಹಳೆಯ ನೆನಪು

ಮನೆ ಬಿಡುವ ಆಲೋಚನೆಯಲ್ಲಿ ಮಾನ್ಸಿ

ಇದನ್ನೂ ಓದಿ

ಮಾನ್ಸಿ ಮನೆಬಿಟ್ಟು ಹೋಗುವ ಆಲೋಚನೆಯಲ್ಲಿ ಇದ್ದಾಳೆ. ಈ ಬಗ್ಗೆ ತನ್ನ ಪತಿ ಹರ್ಷವರ್ಧನ್​ ಜತೆ ಹೇಳಿಕೊಂಡಿದ್ದಾಳೆ. ‘ಭಾವ ಇದ್ದಾಗಲೇ ನಾವು ಮನೆಯನ್ನು ಬಿಡಬೇಕು ಎಂದುಕೊಂಡಿದ್ದೆವು. ಆದರೆ, ಅದು ಸಾಧ್ಯವಾಗಿಲ್ಲ. ಈಗ ನಾವು ಮನೆ ಬಿಡೋಣ’ ಎಂದು ಮಾನ್ಸಿ ಪತಿ ಬಳಿ ಹೇಳಿದ್ದಾಳೆ. ಆದರೆ, ಇಡೀ ಮನೆ ನನ್ನ ಜವಾಬ್ದಾರಿ ಎಂಬ ಮಾತನ್ನು ಹರ್ಷ ಹೇಳಿದ್ದಾನೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada