- Kannada News Photo gallery Bigg Boss Kannada Season 9 contestants actively participating in first week tasks
BBK9: ಮೊದಲ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಮನೆಯಲ್ಲಿ ಹೇಗಿದೆ ವಾತಾವರಣ?
Bigg Boss Kannada: ‘ಬಿಗ್ ಬಾಸ್ ಕನ್ನಡ ಸೀಸನ್ 9’ ಶೋ ರಂಗೇರಿದೆ. ಮೊದಲ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೂತೂಹಲ ಹೆಚ್ಚಿದೆ.
Updated on:Sep 27, 2022 | 3:38 PM

Bigg Boss Kannada Season 9 contestants actively participating in first week tasks

Bigg Boss Kannada Season 9 contestants actively participating in first week tasks

ದಿನ ಕಳೆದಂತೆ ದೊಡ್ಮನೆಯ ಪರಿಸ್ಥಿತಿ ಬದಲಾಗುತ್ತದೆ. ಆಟದ ಕಾವು ಹೆಚ್ಚುತ್ತದೆ. ಸ್ಪರ್ಧೆ ಕಠಿಣ ಆಗುತ್ತಿದ್ದಂತೆಯೇ ಸ್ಪರ್ಧಿಗಳ ಮನಸ್ಥಿತಿ ಕೂಡ ಬದಲಾಗುತ್ತದೆ. ಜಗಳಗಳು ಬಿಗ್ ಬಾಸ್ ಮನೆಯಲ್ಲಿ ತುಂಬ ಕಾಮನ್.

ಸಿನಿಮಾ, ಕಿರುತೆರೆ, ಸೋಶಿಯಲ್ ಮೀಡಿಯಾದಿಂದ ಒಟ್ಟು 18 ಸ್ಪರ್ಧಿಗಳು ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಮೊದಲ ವಾರ 12 ಮಂದಿ ನಾಮಿನೇಟ್ ಆಗಿದ್ದಾರೆ. ಎಲಿಮಿನೇಷನ್ನಿಂದ ಬಚಾವ್ ಆಗಲು ಎಲ್ಲರೂ ಕಷ್ಟಪಟ್ಟು ಆಡುತ್ತಿದ್ದಾರೆ.

ವೀಕೆಂಡ್ನಲ್ಲಿ ವಾರದ ಪಂಚಾಯಿತಿ ನಡೆಯಲಿದೆ. ಪ್ರತಿ ದಿನ ಸ್ಪರ್ಧಿಗಳು ಮಾಡಿದ ಸರಿ-ತಪ್ಪುಗಳನ್ನು ಇಟ್ಟುಕೊಂಡು ಕಿಚ್ಚ ಸುದೀಪ್ ಅವರು ಎಲ್ಲರ ಜತೆ ಮಾತುಕಥೆ ನಡೆಸುತ್ತಾರೆ. ಮೊದಲ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೂತೂಹಲ ಹೆಚ್ಚಿದೆ.
Published On - 3:38 pm, Tue, 27 September 22



















