Lakshana Serial: ನಕ್ಷತ್ರ – ಭೂಪತಿ ಪ್ರೇಮ ಕಥೆ ಶುರು, ಭೂಪತಿಯ ಪ್ರೀತಿ ಸಂಪಾದನೆ ಮಾಡೋದೆ ನನ್ನ ಗುರಿ
ನಕ್ಷತ್ರ ಮಯೂರಿ ಬಳಿ ಅವನ ಮನಸ್ಸಿನಲ್ಲಿ ನನ್ನ ಬಗ್ಗೆ ಪ್ರೀತಿ ಇದೆ, ಆದರೆ ಅವನು ಅದನ್ನು ತೋರ್ಪಡಿಸುತ್ತಿಲ್ಲ. ಇನ್ನು ಮುಂದೆ ಭೂಪತಿಯ ಪ್ರೀತಿ ಸಂಪಾದನೆ ಮಾಡೋದೆ ನನ್ನ ಗುರಿ ಎಂದು ಹೇಳುತ್ತಾಳೆ.
ಕಲರ್ಸ್ ಕನ್ನಡದಲ್ಲಿ ಬದಲಾದ ಸಮಯದಲ್ಲಿ ಅಂದರೆ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರವಾಹಿ ದಿನಕ್ಕೊಂದು ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ನೆರಳು ಬೆಳಕಿನ ಬೊಂಬೆಯಾಟದ ಮೂಲಕ ನಕ್ಷತ್ರ ಮತ್ತು ಭೂಪತಿ ಮುಂದಾರರೂ ಒಂದಾಗಬಹುದು ಎಂದು ಹೇಳಿದ ಮಯೂರಿಯ ಮಾತಿಗೆ ಕೆಂಡಾಮಂಡಲವಾದ ಶಕುಂತಳಾ ದೇವಿಯು ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳುತ್ತಾಳೆ. ಮೌರ್ಯ ಹಾಳಾಗಿದ್ದು ನಕ್ಷತ್ರ ಮತ್ತು ಸಿ.ಎಸ್‌ನಿಂದ ಇದಕ್ಕೆಲ್ಲ ಇವಳೇ ಕಾರಣ ಅಂತಾ ಏನು ತಪ್ಪೇ ಮಾಡದ ನಕ್ಷತ್ರಳನ್ನು ಹೊಣೆ ಮಾಡುತ್ತಾಳೆ ಶಕುಂತಳಾ ದೇವಿ.
ತಾಯಿಯ ಈ ಮಾತನ್ನು ಒಪ್ಪದ ಭೂಪತಿ, ಮೌರ್ಯನ ತಪ್ಪಿಗೆ ನಕ್ಷತ್ರ ಹೇಗೆ ಕಾರಣವಾಗುತ್ತಾಳೆ ಎಂದು ತಾಯಿಯನ್ನೆ ಮರು ಪ್ರಶ್ನೆ ಮಾಡುತ್ತಾನೆ. ಮೌರ್ಯ ಹಾಳಾಗಿರುವುದು ಅವನ ಯೋಚನೆಯಿಂದ ಹೊರತು ನಕ್ಷತ್ರಳಿಂದ ಅಲ್ಲಾ ಸುಮ್ಮನೆ ಏನೇನು ಹೇಳಬೇಡಿ ಎಂದು ಹೇಳುತ್ತಾನೆ. ಭೂಪತಿಯು ನಕ್ಷತ್ರಳ ಪರ ಮಾತನಾಡಿದ್ದನ್ನು ಕಂಡು ಆರತಿ ಮತ್ತು ಚಂದ್ರಶೇಖರ್‌ಗೆ ಖುಷಿಯಾಗಿ ನೀನೊಬ್ಬ ನಕ್ಷತ್ರಳ ಜೊತೆ ಇದ್ದಿಯಲ್ಲಾ ನಮಗೆ ಅದುವೇ ನೆಮ್ಮದಿ ಎಂದು ಹೇಳಿದಾಗ, ನಕ್ಷತ್ರಳ ಜಾಗದಲ್ಲಿ ಯಾರೇ ಇದ್ದರೂ ನಾನು ಹೀಗೆಯೇ ಮಾಡುತ್ತಿದ್ದೆ, ನನಗೆ ಅವಳ ಮೇಲೆ ಯಾವುದೇ ರೀತಿಯ ಪ್ರೀತಿ ಇಲ್ಲ ಅದು ಮುಂದೆ ಬರಲು ಸಾಧ್ಯವಿಲ್ಲ ಎಂದು ಭೂಪತಿ ಹೇಳುತ್ತಾನೆ.
ಈ ಘಟನೆಯಿಂದ ಬೇಜಾರಾಗಿ ಕುಳಿತಿದ್ದ ನಕ್ಷತ್ರಳ ಬಳಿ ಮಯೂರಿ ಬಂದು ಅವಳಿಗೆ ಸಮಾಧಾನ ಮಾಡುತ್ತಾ ಭೂಪತಿಗೆ ನಿನ್ನ ಮೇಲೆ ಪ್ರೀತಿಯಿದೆ ಆದರೆ ಅವನು ಅದನ್ನು ವ್ಯಕ್ತಪಡಿಸುತ್ತಿಲ್ಲ, ಒಂದಲ್ಲಾ ಒಂದು ದಿನ ಪ್ರೀತಿಯನ್ನು ವ್ಯಕ್ತ ಪಡಿಸುತ್ತಾನೆ ಎಂದು ಹೇಳುತ್ತಾಳೆ. ಮಯೂರಿಯ ಈ ಮಾತನ್ನು ಕೇಳಿದ ನಕ್ಷತ್ರ ಭೂಪತಿಗೆ ನನ್ನ ಮೇಲೆ ಪ್ರೀತಿ ಇರುವುದು ನಿಜನಾ ಅಂತ ಪರೀಕ್ಷೆ ಮಾಡಲು ಹೋಗ್ತಾಳೆ.
ಇದನ್ನು ಓದಿ: ಹೊಂಗನಸು: ಮಹೇಂದರ್‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
ಮೆಲ್ಲನೆ ಭೂಪತಿಯ ಬಳಿ ಬಂದ ನಕ್ಷತ್ರ ನಿನ್ನ ಜೊತೆ ಏನೋ ಕೇಳಬೇಕು ಎಂದು ಹೇಳಿದಾಗ ಅದೇನು ಕೇಳು ಎಂದು ಭೂಪತಿ ಹೇಳುತ್ತಾನೆ. ಅದಕ್ಕೆ ಮೆಲ್ಲನೆ ಉತ್ತರಿಸಿದ ನಕ್ಷತ್ರ ನೀನು ನನ್ನನ್ನು ಪ್ರೀತಿ ಮಡ್ತಿದ್ಯಾ ಅಂತಾ ಕೇಳಿದಾಗ ಶಾಕ್ ಆದ ಭೂಪತಿ ಮಾತಿನಲ್ಲಿ ತಡವರಿಸುತ್ತಾ ಹಾಗೇನು ಇಲ್ಲ. ಇದಕ್ಕಿಂತ ಮುಂಚೆನೂ ನಿನಗೆ ಹೇಳಿದ್ದೇನೆ ನನಗೆ ನಿನ್ನ ಮೇಲೆ ಯಾವತ್ತು ಪ್ರೀತಿ ಹುಟ್ಟಲ್ಲ, ನಿನ್ನ ಮೇಲೆ ನನಗೆ ಇರುವಂತದ್ದು ಬರೀ ಕಾಳಜಿ ಅಷ್ಟೇ ಎಂದು ಹೇಳುತ್ತಾನೆ.
ಭೂಪತಿಯ ಈ ಮಾತನ್ನು ಕೇಳುತ್ತಾ ಹೊರ ಬಂದ ನಕ್ಷತ್ರ ಮಯೂರಿ ಬಳಿ ಅವನ ಮನಸ್ಸಿನಲ್ಲಿ ನನ್ನ ಬಗ್ಗೆ ಪ್ರೀತಿ ಇದೆ, ಆದರೆ ಅವನು ಅದನ್ನು ತೋರ್ಪಡಿಸುತ್ತಿಲ್ಲ. ಇನ್ನು ಮುಂದೆ ಭೂಪತಿಯ ಪ್ರೀತಿ ಸಂಪಾದನೆ ಮಾಡೋದೆ ನನ್ನ ಗುರಿ ಎಂದು ಹೇಳುತ್ತಾಳೆ. ನಕ್ಷತ್ರ ಭೂಪತಿಯ ಪ್ರೀತಿಯನ್ನು ಗಳಿಸುತ್ತಾಳಾ ಎಂದು ಇನ್ನು ಮುಂದೆ ನೋಡಬೇಕಾಗಿದೆ.
ಮಾಲಾಶ್ರೀ ಅಂಚನ್
Published On - 12:49 pm, Wed, 28 September 22