ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ

Honganasu Serial Update: ಹೃದಯಾಘಾತ ಆದಾಗ ‘ರಿಷಿ.. ರಿಷಿ..’ ಎಂದು ಮಹೇಂದರ್ ಕರೆಯುತ್ತಿದ್ದ. ಜಗತಿ ತಕ್ಷಣ ರಿಷಿಗೆ ಫೋನ್ ಮಾಡಿದಳು. ಆದರೆ ರಿಷಿ ಫೋನ್ ಪಿಕ್ ಮಾಡಿಲ್ಲ.

ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
‘ಹೊಂಗನಸು' ಧಾರಾವಾಹಿ
TV9kannada Web Team

| Edited By: Madan Kumar

Sep 28, 2022 | 9:45 AM

ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಹೊಂಗನಸು’ ಧಾರಾವಾಹಿ (Honganasu Serial) ಕುತೂಹಲದ ಘಟ್ಟ ತಲುಪಿದೆ. ಪತಿ ಮಹೇಂದರ್‌ನಿಂದ ದೂರ ಆಗಿದ್ದರೂ ಜಗತಿಗೆ ಪತಿಯ ಮೇಲೆ ಅಪಾರ ಪ್ರೀತಿ. ದೂರ ಇದ್ದರೂ ಕೂಡ ಇಬ್ಬರೂ ಖುಷಿಖುಷಿಯಾಗಿದ್ದರು. ಆದರೆ ಸಂತಸದಲ್ಲಿದ್ದ ಕುಟುಂಬಕ್ಕೆ ಮಹೇಂದರ್‌ ಹೃದಯಾಘಾತ ಬರಸಿಡಿಲು ಬಡಿದಂತೆ ಆಗಿದೆ. ಕಾಲೇಜಿನಲ್ಲಿ ರಿಷಿ ಮತ್ತು ವಸೂಧರ ಇಬ್ಬರು ಮಾತಾಡುತ್ತಾ ಕುಳಿತಿದ್ದರು. ವಸೂಧರ ಜೊತೆಗೆ ರಿಷಿ ಕುಳಿತಿದ್ದು ನೋಡಿ ಹೊಟ್ಟೆಕಿಚ್ಚು ಪಟ್ಕೊಂಡ ಗೌತಮ್ ಮತ್ತೆ ಲವ್ ಲೆಟರ್ ವಿಚಾರ ಎತ್ತಿದ. ತಕ್ಷಣ ಎಚ್ಚೆತ್ತುಕೊಂಡ ರಿಷಿ ವಸೂಧರಳನ್ನು ಅಲ್ಲಿಂದ ಹೋಗುವಂತೆ ಹೇಳಿದ.

ಬಳಿಕ ಗೌತಮ್ ಮತ್ತು ರಿಷಿ ಇಬ್ಬರು ಬಾಸ್ಕೆಟ್ ಬಾಲ್ ಆಡುತ್ತಾ ಪೈಪೋಟಿಗೆ ಬಿದ್ದಿದ್ದರು. ತಾನೇ ಗೆಲ್ಲೋದು ಎಂದು ಇಬ್ಬರು ಆಟ ವಾಡುತ್ತಿದ್ದರು. ಮನಸ್ಸಲ್ಲಿ ಕ್ಲಾರಿಟಿ ಇಲ್ಲ ಅಂದರೆ, ಮಾಡೋ ಕೆಲಸದಲ್ಲಿ ಪ್ಯೂರಿಟಿ ಇಲ್ಲ ಅಂದರೆ ಏನೇ ಆದರೂ ಮಿಸ್ ಆಗುತ್ತೆ. ಬಾಸ್ಕೆಟ್ ಬಾಲ್ ಗೋಲ್ ಆದರೂ ಸರಿ ಲೈಫ್ ಗೋಲ್ ಆದರೂ ಸರಿ ಮಿಸ್ ಆಗೇ ಆಗುತ್ತೆ ಎಂದು ರಿಷಿ ತನ್ನ ಸ್ನೇಹಿತ ಗೌತಮ್‌ಗೆ ಹೇಳುತ್ತಾ ಬಾಸ್ಕೆಟ್ ಬಾಲ್ ಕೈಗೆತ್ತಿಕೊಂಡ. ಆದರೆ ಗೌತಮ್ ತನ್ನನ್ನು ಗೆಲ್ಲೋಕೆ ಬಿಡು ಎಂದು ಕೇಳಿಕೊಂಡರೂ ರಿಷಿ ತಾನು ಬಿಡಲ್ಲ ಎಂದು ಪರೋಕ್ಷವಾಗಿ ವಸೂಧರ ಬಗ್ಗೆ ಹೇಳುತ್ತಾ ಇಬ್ಬರೂ ಆಟ ಆಡುತ್ತಿದ್ದರು.

ಇತ್ತ, ಜಗತಿ ಮನೆಯಲ್ಲಿ ಪತಿ ಮಹೇಂದರ್ ಜೊತೆ ಕುಳಿತು ಜೋರಾಗಿ ನಗುತ್ತಾ ಇಬ್ಬರೂ ಮಾತನಾಡುತ್ತಿದ್ದರು. ಮಹೇಂದರ್ ತನ್ನ ಅತ್ತಿಗೆಯ ಬಗ್ಗೆ ಪತ್ನಿ ಬಳಿ ಹೇಳುತ್ತಾ ಗಹಗಹಿಸಿ ನಗುತ್ತಿದ್ದ. ಜಾಸ್ತಿ ನಗಬೇಡ ಮಹೇಂದರ್ ಜಾಸ್ತಿ ನಕ್ಕಾಗ ಅಳೋ ಪರಿಸ್ಥಿತಿ ಬರುತ್ತೆ ಎಂದು ಜಗತಿ ಹೇಳಿದ್ರೂ ಸಹ ಜೋರಾಗಿ ನಗುತ್ತಿದ್ದ. ನಗುತ್ತಿದ್ದಂತೆ ಮಹೇಂದರ್‌ಗೆ ಎದೆ ನೋವು ಕಾಣಿಸಿಕೊಂಡಿತು. ಮಹೇಂದರ್ ದಿಢೀರ್ ಕುಸಿದು ಬಿದ್ದಿದ್ದು ನೋಡಿ ಜಗತಿ ಏನಾಗ್ತಿದೆ ಹೇಳು ಎಂದು ಗಾಬರಿಯಾಗಿ ಜೋರಾಗಿ ಅಳಲು ಪ್ರಾರಂಭಿಸಿದಳು. ಅಳುತ್ತಲೇ ವಸೂಧರಳಿಗೆ ಕಾಲ್ ಮಾಡಿ ಬರಲು ಹೇಳಿದಳು. ರಿಷಿ.. ರಿಷಿ.. ಎಂದು ಮಹೇಂದರ್ ಹೇಳುತ್ತಿದ್ದ. ಜಗತಿ ತಕ್ಷಣ ರಿಷಿಗೆ ಫೋನ್ ಮಾಡಿದಳು. ಆದರೆ ರಿಷಿ ಫೋನ್ ಪಿಕ್ ಮಾಡಿಲ್ಲ. ಫೋನ್ ರಿಂಗ್ ಆಗಿದ್ದು ಆತ ಗಮನಿಸಿಯೇ ಇಲ್ಲ. ಅಷ್ಟರಲ್ಲೇ ವಸೂಧರ ಮನೆಗೆ ಎಂಟ್ರಿ ಕೊಟ್ಟಳು. ಜಗತಿ ಮತ್ತು ವಸೂಧರ ಇಬ್ಬರೂ ಮಹೇಂದರ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಸಿದರು.

ರಿಷಿ ಫೋನ್ ಪಿಕ್ ಮಾಡದೇ ಇರೋದ್ರಿಂದ ವಸೂಧರ ಗೌತಮ್‌ಗೆ ಕರೆ ಮಾಡಿ ಎಲ್ಲಾ ವಿಚಾರ ತಿಳಿಸಿದಳು. ಗೌತಮ್ ರಿಷಿಗೆ ಏನಾಗಿದೆ ಎಂದು ಹೇಳದೆ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೊರಟ. ಗೌತಮ್ ತಾನೆ ಡ್ರೈವ್ ಮಾಡುತ್ತೇನೆ ಎಂದು ಕಾರು ಡ್ರೈವ್ ಮಾಡಿದ. ಕಾರಿನಲ್ಲಿ ಕುಳಿತ ರಿಷಿ ಯಾಕೆ ಆಸ್ಪತ್ರೆಗೆ ಹೋಗುತ್ತಿದ್ದೀವಿ, ವಸೂಧರ ಯಾಕೆ ಫೋನ್ ಮಾಡಿದಳು ಅಂತ ಕೇಳಿದ್ರು ಸಹ ಗೌತಮ್ ಏನು ಹೇಳದೆ ಕಾರು ಡ್ರೈವ್ ಮಾಡುತ್ತಿದ್ದ. ಇತ್ತ ಆಸ್ಪತ್ರೆಯಲ್ಲಿ ಜಗತಿ ಮತ್ತೂ ಜೋರಾಗಿ ಅಳುತ್ತಾ ಕುಳಿತ್ತಿದ್ದಳು. ವಸೂಧರ ಸಮಾಧಾನ ಮಾಡುತ್ತಿದ್ದಳು. ತಾನೆ ರಿಷಿಗೆ ಫೋನ್ ಮಾಡಿ ಎಲ್ಲಾ ವಿಚಾರ ಹೇಳುತ್ತೇನೆ ಎಂದು ಫೋನ್ ಕೈಗೆತ್ತಿಕೊಳ್ಳುವಷ್ಟರಲ್ಲಿ ರಿಷಿ ಆಸ್ಪತ್ರೆಗೆ ಎಂಟ್ರಿ ಕೊಡುತ್ತಾನೆ. ತನ್ನ ತಂದೆಗೆ ಹೃದಯಾಘಾತವಾಗಿದೆ ಎನ್ನುವ ವಿಚಾರ ತಿಳಿದು ರಿಷಿ ಶಾಕ್ ಆದ. ಮಹೇಂದರ್ ಸ್ಥಿತಿ ಹೇಗಿದೆ? ಈ ಮೂಲಕವಾದರೂ ರಿಷಿ ತಾಯಿಯನ್ನು ಒಪ್ಪಿಕೊಳ್ಳುತ್ತಾನಾ ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada