Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು

Honganasu Serial Update: ರಿಷಿ ಮತ್ತು ಗೌತಮ್ ಇಬ್ಬರೂ ವಸೂಧರಳನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಗೌತಮ್ ಮಾತ್ರ ಸಖತ್ ಸ್ಪೀಡ್ ಆಗಿದ್ದಾನೆ.

Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Follow us
TV9 Web
| Updated By: ಮದನ್​ ಕುಮಾರ್​

Updated on: Sep 27, 2022 | 9:59 AM

‘ಹೊಂಗನಸು’ ಧಾರಾವಾಹಿಯಲ್ಲಿ (Honganasu Serial) ಅನೇಕ ತಿರುವುಗಳು ಎದುರಾಗುತ್ತಿವೆ. ಲೆಕ್ಚರ್ ರಿಷಿ ಮತ್ತು ವಿದ್ಯಾರ್ಥಿನಿ ವಸೂಧರ ಪಾತ್ರ ನೋಡುಗರ ಮನಗೆದ್ದಿದೆ. ರಿಷಿ, ವಸೂಧರಳನ್ನು ಪ್ರೀತಿಸುತ್ತಿದ್ದರೂ ಮನಬಿಚ್ಚಿ ಹೇಳಿಕೊಳ್ಳುತ್ತಿಲ್ಲ. ಆದರೀಗ ತಾನೆ ಬರೆದ ಲವ್ ಲೆಟರ್​ನಿಂದ ಪೇಚಿಕೆ ಸಿಲುಕಿದ್ದಾನೆ. ಲವ್ ಲೆಟರ್ ಬರೆದವನು ಯಾರೆಂದು ಗೊತ್ತಾಗಲೇಬೇಕೆಂದು ಜಗತಿ ಮತ್ತು ವಸೂಧರ ತಿಳಿದುಕೊಳ್ಳವ ತವಕದಲ್ಲಿದ್ದಾರೆ. ಯಾವನೋ ಈಡಿಯಟ್ ಲವ್ ಲೆಟರ್ ಬರೆದರೆ ಯೋಚನೆ ಮಾಡಬೇಕಲ್ವಾ ಎಂದು ರಿಷಿ ಬಳಿಯೇ ಜಗತಿ ಹೇಳಿದಳು. ಜಗತಿಯ ಮಾತು ಕೇಳಿ ರಿಷಿ ಗಲಿಬಿಲಿಯಾದರೂ ತೋರಿಸಿಕೊಂಡಿಲ್ಲ.

‘ಕಾಲೇಜಿನಲ್ಲಿ ಬೇರೆ ಬೇರೆ ರೀತಿಯ ವಿದ್ಯಾರ್ಥಿಗಳು ಇರುತ್ತಾರೆ. ಅವರವರ ಯೋಚನೆ ಬೇರೆಯಾಗಿರುತ್ತೆ’ ಅಂತ ಲವ್ ಲೆಟರ್ ಮ್ಯಾಟರ್ ಅನ್ನು ಬೇರೆಡೆ ತಿರುಗಿಸಲು ರಿಷಿ ಪ್ರಯತ್ನಿಸಿದ್ದಾನೆ. ಆದರೂ ‘ಅವನು ನನಗೆ ಕಾಣಿಸಿದ್ರೆ ಅವನ ಕಾಲರ್ ಪಟ್ಟಿ ಹಿಡಿದು ಕೇಳ್ತೇನೆ. ಅವನನ್ನ ಮಾತ್ರ ಸುಮ್ಮನೆ ಬಿಡಲ್ಲ’ ಅಂತ ಜಗತಿ ಫುಲ್ ಗರಂ ಆದಳು. ಜಗತಿ ಮಾತಿಗೆ ಗಾಬರಿಯಾದ ರಿಷಿ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ. ಪಕ್ಕದಲ್ಲೇ ಇದ್ದ ವಸೂಧರ ‘ಈ ಟಾಪಿಕ್ ಇಲ್ಲಿಗೆ ಬಿಡೋಣ, ಮತ್ತೆ ಇದರ ಬಗ್ಗೆ ಮಾತಾಡೋದು ಬೇಡ, ಇದನ್ನ ನಾನು ಮತ್ತು ರಿಷಿ ಸರ್ ನೋಡಿಕೊಳ್ಳುತ್ತೇವೆ’ ಎಂದು ಲವ್ ಲೆಟರ್ ಟಾಪಿಕ್ ಕ್ಲೋಸ್ ಮಾಡಿದಳು.

ನಂತರ ರಿಷಿ, ಸ್ನೇಹಿತ ಗೌತಮ್​ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ. ಇದು ನನ್ನ ಕಾಲೇಜು, ಇಲ್ಲಿ ಇದೆಲ್ಲ ನಡೆಯಬಾರದು ಎಂದು ಎಚ್ಚರಿಕೆ ನೀಡಿದ. ಆದರೆ ಗೌತಮ್ ಮಾತ್ರ ಇದೇನು ಇಂಟರ್‌ನ್ಯಾಷನಲ್ ಸಮಸ್ಯೆನಾ ಎಂದು ಕೂಲ್ ಆಗಿಯೇ ಪ್ರತಿಕ್ರಿಯೆ ನೀಡಿ ವಸೂಧರಗೆ ಹೇಗಾದರೂ ಮಾಡಿ ಪ್ರೀತಿ ವಿಚಾರ ತಿಳಿಸಬೇಕೆಂದು ಯೋಚಿಸುತ್ತಿದ್ದ. ರಿಷಿ ಹೇಳಿದ್ದನ್ನು ಕೇಳಿಸಿಕೊಂಡು ಕಾಲೇಜಿನಿಂದ ಹೊರಟ ಗೌತಮ್, ವಸೂಧರ ಕೆಲಸ ಮಾಡುವ ರೆಸ್ಟೋರೆಂಟ್‌ಗೆ ಹೋದ. ರಿಷಿ ಕೂಡ ಅಲ್ಲಿಗೆ ಹೋಗುತ್ತಾನೆ.

ಇದನ್ನೂ ಓದಿ
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?
Image
Lakshana Serial: ಮಗನ ತಪ್ಪಿಗೆ ನಕ್ಷತ್ರಳನ್ನೇ ನೇರ ಹೊಣೆ ಮಾಡಿದ ಶಕುಂತಲಾ ದೇವಿ
Image
ಅನು ಮನೆ ಸೇರಿದ ಹೊಸ ಆರ್ಯವರ್ಧನ್; ಮನ ಸೇರುವುದೊಂದೇ ಬಾಕಿ
Image
Kannadathi Serial: ಕನ್ನಡಿಗರಿಗೆ ಟಾಸ್ಕ್ ಕೊಟ್ಟ ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್

ತನಗಿಂತ ಮೊದಲೇ ಬಂದು ಕುಳಿತಿದ್ದ ಗೌತಮ್ ನೋಡಿ ರಿಷಿ ಶಾಕ್ ಆದ. ಗೌತಮ್ ಕೂಡ ರಿಷಿ ಬಂದಿದ್ದು ನೋಡಿ ಇಲ್ಲಿಗೂ ಬಂದನಾ ಎಂದು ಉರ್ಕೊಂಡ. ನೀನ್ಯಾಕೆ ನನ್ನ ಹಿಂದೆಯೇ ಸುತ್ತಾಡುತ್ತಿದ್ದೀಯ ಎಂದು ರಿಷಿಗೆ ಪ್ರಶ್ನೆ ಮಾಡಿದ. ಒಳ್ಳೆ ಕೆಲಸ ಮಾಡಿದರೆ ಸಹಾಯ ಮಾಡ್ತೀನಿ ಅಂತ ರಿಷಿ ಹೇಳಿದರೂ ಗೌತಮ್ ಒಪ್ಪಿಕೊಳ್ಳಲು ತಯಾರಿಲ್ಲ. ಅಷ್ಟರಲ್ಲೇ ಮಸೂಧರ ಏನು ಬೇಕು ಎಂದು ಕೇಳಲು ಎಂಟ್ರಿ ಕೊಟ್ಟಳು. ನಗುತ್ತಲೇ ರಿಷಿಯನ್ನು ಮಾತಾಡಿಸಿದ್ದು ನೋಡಿ ಗೌತಮ್ ಕಸಿವಿಸಿಯಾದ. ನನಗಿಂತ ಚೆನ್ನಾಗಿ ರಿಷಿಯನ್ನೇ ಮಾತನಾಡಿಸುತ್ತಿದ್ದಾಳಲ್ಲಾ ಎಂದು ಉರ್ಕೊಂಡ ಗೌತಮ್ ಹಾರ್ಟ್ ಇರೋ ಕಾಫಿ ತರುವಂತೆ ಕೇಳಿದ.

ಗೌತಮ್ ಹಾರ್ಟ್ ಕಾಫಿ ಕೇಳುತ್ತಿದ್ದಂತೆ ರಿಷಿ ಹಾರ್ಟ್ ಬ್ರೇಕ್ ಆದಂತೆ ಆಯ್ತು. ವಸೂಧರ ನಿಜಕ್ಕೂ ಹಾರ್ಟ್ ಇರೋ ಕಾಫಿ ತಂದುಕೊಡ್ತಾಳಾ ಎಂದು ರಿಷಿ ಆತಂಕದಿಂದ ಕಾಯುತ್ತಿದ್ರೆ ಗೌತಮ್ ಮಾತ್ರ ವಸೂಧರ ಹಾರ್ಟ್ ಕಾಫಿ ತರ್ತಾಳೆ ಎಂದು ಸಂತೋಷದಿಂದ ಕುಳಿತಿದ್ದ. ಆದರೆ ವಸೂಧರ ಕಾಫಿ ತಂದು ಕೊಡುವ ಬದಲು ಮತ್ತೋರ್ವ ವೇಟರ್ ಬಳಿ ಕಾಫಿ ಕೊಡುವಂತೆ ಹೇಳುತ್ತಾಳೆ. ವಸೂಧರಳೇ ಕಾಫಿ ಕೊಡುತ್ತಾಳೆ ಎಂದು ಎದುರು ನೋಡುತ್ತಿದ್ದ ಗೌತಮ್​ಗೆ ರಿಷಿ ಮುಂದೆ ಅವಮಾನ ಆಗುವ ಜೊತೆಗೆ ಬೇಸರನೂ ಆಯಿತು. ರಿಷಿ ಮತ್ತಷ್ಟು ಕಾಲೆಳೆದು ಗೌತಮ್ ಕೋಪ ನೆತ್ತಿಗೇರುವಂತೆ ಮಾಡಿದ. ಗೌತಮ್ ಕಾಫಿನೆ ಕುಡಿಯದೆ ಅಲ್ಲಿಂದ ಹೊರಟು ಹೋದ. ರಿಷಿ ಮತ್ತು ಗೌತಮ್ ಇಬ್ಬರೂ ವಸೂಧರಳನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಗೌತಮ್ ಮಾತ್ರ ಸಖತ್ ಸ್ಪೀಡ್ ಆಗಿದ್ದಾನೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ