Kannadathi Serial: ಕನ್ನಡಿಗರಿಗೆ ಟಾಸ್ಕ್ ಕೊಟ್ಟ ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್
ಅ - ಅಃ ತನಕ ಬರೆದು ಎಷ್ಟು ವರ್ಷ ಆಯ್ತು? ಕನ್ನಡ ಅಕ್ಷರಮಾಲೆ ಬರೆದು ರೀಲ್ ಮಾಡೋಣ ಬನ್ನಿ! ಸೆಪ್ಟೆಂಬರ್ 5 ಶಿಕ್ಷಕರ ದಿನದ ಪ್ರಯುಕ್ತ ಅಕ್ಷರ ಕಲಿಸಿಕೊಟ್ಟ ಗುರುಗಳನ್ನು ನೆನೆದು ಅವರಿಗೆ ಗೌರವ ಸಲ್ಲಿಸೋಣ, ರೀಲ್ ಮಾಡಿ ನನ್ನ ಟ್ಯಾಗ್ ಮಾಡಿ.
ಕನ್ನಡತಿ ಧಾರಾವಾಹಿಯ ನಟಿ ರಂಜನಿ ರಾಘವನ್ ಒಂದು ಹೊಸ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಕನ್ನಡತಿ ಧಾರಾವಾಹಿ ತುಂಬಾ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಪ್ರತಿ ಸಂಚಿಕೆಯ ಕೊನೆಯಲ್ಲಿ ಒಂದು ಕನ್ನಡದ ಬಗ್ಗೆ ಪ್ರಶ್ನೆಯನ್ನು ಅಥವಾ ಕನ್ನಡ ವರ್ಣಮಾಲೆ, ಒಂದು ಶಬ್ದದ ಅರ್ಥವನ್ನು ತಿಳಿಸುತ್ತಾರೆ.
ಈ ಧಾರವಾಹಿಯಲ್ಲಿ ಪ್ರತಿಯೊಂದು ಡೈಲಾಗ್ಗಳನ್ನು ಕನ್ನಡದಲ್ಲಿಯೇ ಸ್ಪಷ್ಟವಾಗಿ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಭುವಿ (ರಂಜನಿ ರಾಘವನ್ ) ಹೇಳುತ್ತಾರೆ. ಅದೆಷ್ಟೋ ಕನ್ನಡದಲ್ಲಿ ಗೊತ್ತಿಲ್ಲ ಶಬ್ದಗಳ ಅರ್ಥವನ್ನು ಇವರು ತಿಳಿಸುತ್ತಾರೆ. ಜೊತೆಗೆ ತಮ್ಮ ಸಾಮಾಜಿಕ ಜಾಲತಾನದಲ್ಲಿ ತಮ್ಮ ಸಹ ಪಾತ್ರಧಾರಿಗಳಿಗೆ ಕನ್ನಡದ ರಸಪ್ರಶ್ನೆಗಳನ್ನು ಕೇಳುತ್ತಾರೆ.
ಕರ್ನಾಟಕ ಜನತೆಯ ಮನಗೆದ್ದ ಈ ಧಾರಾವಾಹಿ ಹೆಚ್ಚು ಟಿಆರ್ಪಿಯನ್ನು ಕೂಡ ಪಡೆದುಕೊಂಡಿದೆ. ಸಾಮಾಜಿಕ ತಾಲತಾಣದಲ್ಲಿ ಇದೀಗ ಹೆಚ್ಚು ಸದ್ದು ಮಾಡುತ್ತಿರುವುದು ಭುವಿ ನೀಡಿರುವ ಒಂದು ಟಾಸ್ಕ್, ಭುವಿ ಈ ಟಾಸ್ಕ್ನ್ನು ಈ ಬಾರಿ ಜನರಿಗೆ ನೀಡಿದ್ದಾರೆ.
View this post on Instagram
ರಂಜನಿ ರಾಘವನ್ (ಭುವಿ) ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಶೇಷವಾದ ವಿಚಾರವನ್ನು ಹಂಚಿಕೊಂಡಿದ್ದಾರೆ, ಕನ್ನಡ ಅಭಿಮಾನಕ್ಕೆ ಒಂದು ಮಾದರಿಯಾಗಿದೆ ಈ ಪ್ರಯತ್ನ. ಹೌದು ರಂಜನಿ ರಾಘವನ್ (ಭುವಿ) ಇನ್ಸ್ಟಾಗ್ರಾಮ್ನಲ್ಲಿ ಈ ಶಿಕ್ಷಕರ ದಿನಚಾರಣೆಯ ದಿನದಂದು ವಿಶೇಷವಾಗಿ ಆಚರಣೆ ಮಾಡಲು ಹೇಳಿದ್ದಾರೆ.
ಅ – ಅಃ ತನಕ ಬರೆದು ಎಷ್ಟು ವರ್ಷ ಆಯ್ತು? ಕನ್ನಡ ಅಕ್ಷರಮಾಲೆ ಬರೆದು ರೀಲ್ ಮಾಡೋಣ ಬನ್ನಿ! ಸೆಪ್ಟೆಂಬರ್ 5 ಶಿಕ್ಷಕರ ದಿನದ ಪ್ರಯುಕ್ತ ಅಕ್ಷರ ಕಲಿಸಿಕೊಟ್ಟ ಗುರುಗಳನ್ನು ನೆನೆದು ಅವರಿಗೆ ಗೌರವ ಸಲ್ಲಿಸೋಣ, ರೀಲ್ ಮಾಡಿ ನನ್ನ ಟ್ಯಾಗ್ ಮಾಡಿ. ನಾನು ಸ್ಟೋರಿಯಲ್ಲಿ ಶೇರ್ ಮಾಡ್ತೇನೆ ಎಂದು ಹೇಳಿದ್ದಾರೆ. ಇದೀಗ ನೀವು ರೀಲ್ ಮಾಡಿ ರಂಜನಿ ರಾಘವನ್ ಅವರಿಗೆ ಟ್ಯಾಗ್ ಮಾಡಬಹುದು. ನಿಮ್ಮ ಗುರುಗಳಿಗೆ ಈ ಮೂಲಕ ಗೌರವ ಸಲ್ಲಿಸಲು ಹೇಳಿದ್ದಾರೆ.