AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನು ಮನೆ ಸೇರಿದ ಹೊಸ ಆರ್ಯವರ್ಧನ್; ಮನ ಸೇರುವುದೊಂದೇ ಬಾಕಿ

ಆರ್ಯವರ್ಧನ್ ತಾಯಿ ಪ್ರಿಯಾಗೆ ಇಬ್ಬರು ಮಕ್ಕಳು. ಆ ಪೈಕಿ ಓರ್ವ ಮೃತಪಟ್ಟಿದ್ದಾನೆ. ಆತನ ಮುಖದ ಚರ್ಮವನ್ನು ಆರ್ಯವರ್ಧನ್​​ಗೆ ಹಾಕಲಾಗಿದೆ. ಹೀಗಾಗಿ, ಹೊಸ ಆರ್ಯವರ್ಧನ್​​ (ಹರೀಶ್ ರಾಜ್​) ಎಂಟ್ರಿ ಆಗಿದೆ.

ಅನು ಮನೆ ಸೇರಿದ ಹೊಸ ಆರ್ಯವರ್ಧನ್; ಮನ ಸೇರುವುದೊಂದೇ ಬಾಕಿ
ಆರ್ಯವರ್ಧನ್​-ಅನು
TV9 Web
| Edited By: |

Updated on:Sep 24, 2022 | 10:28 AM

Share

‘ಜೊತೆ ಜೊತೆಯಲಿ’ (Jothe Jotheyali Serial) ಧಾರಾವಾಹಿಯಲ್ಲಿ ಅನು ಸಿರಿಮನೆ ಕಣ್ಣೀರು ಹಾಕುತ್ತಿದ್ದಾಳೆ. ಪತಿ ಆರ್ಯವರ್ಧನ್​ನ​​  ಕಳೆದುಕೊಂಡಿದ್ದೇನೆ ಎಂಬ ದುಃಖದಲ್ಲಿ ಇದ್ದಾಳೆ. ಈ ಕಣ್ಣೀರು ಅಂತ್ಯವಾಗೋದು ಯಾವಾಗ ಎಂಬುದು ವೀಕ್ಷಕರ ಪ್ರಶ್ನೆಯಾಗಿತ್ತು. ಇದಕ್ಕೆ ಶೀಘ್ರದಲ್ಲೇ ಉತ್ತರ ಸಿಗುವ ಸೂಚನೆ ಸಿಕ್ಕಿದೆ. ಆರ್ಯವರ್ಧನ್ (Aryavardhan) ಅವರ ತಾಯಿ ಪ್ರಿಯಾ ಅವರು ರಾಜನಂದಿನಿ ವಿಲಾಸಕ್ಕೆ ಬಂದಿದ್ದಾಳೆ. ಅದೂ ಹೊಸ ಆರ್ಯವರ್ಧನ್ ಜತೆಗೆ. ಅಪಘಾತದಲ್ಲಿ ತಲೆಗೆ ಪೆಟ್ಟುಬಿದ್ದು ಆರ್ಯವರ್ಧನ್​ಗೆ ಎಲ್ಲಾ ನೆನಪುಗಳು ಮರೆತಿವೆ. ಆದರೆ, ಮನೆಗೆ ಬರುತ್ತಿದ್ದಂತೆ ಆತನಿಗೆ ನೆನಪುಗಳು ಒಮ್ಮೆ ಕಣ್ಮುಂದೆ ಹಾದು ಹೋಗಿದೆ. ಅನುನ ಮದುವೆ ಆದ ಕ್ಷಣ ಕೂಡ ಒಮ್ಮೆ ನೆನಪಾಗಿದೆ.

ಆರ್ಯವರ್ಧನ್ ತಾಯಿ ಪ್ರಿಯಾಗೆ ಇಬ್ಬರು ಮಕ್ಕಳು. ಆ ಪೈಕಿ ಓರ್ವ ಮೃತಪಟ್ಟಿದ್ದಾನೆ. ಆತನ ಮುಖದ ಚರ್ಮವನ್ನು ಆರ್ಯವರ್ಧನ್​​ಗೆ ಹಾಕಲಾಗಿದೆ. ಹೀಗಾಗಿ, ಹೊಸ ಆರ್ಯವರ್ಧನ್​​ (ಹರೀಶ್ ರಾಜ್​) ಎಂಟ್ರಿ ಆಗಿದೆ. ತಾಯಿ ಪ್ರಿಯಾ ಜತೆ ರಾಜ ನಂದಿನಿ ವಿಲಾಸಕ್ಕೆ ಆರ್ಯವರ್ಧನ್​ ಬಂದಿದ್ದಾನೆ. ಕಥೆಯಲ್ಲಿ ಮುಂದೇನಾಗುತ್ತದೆ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ
Image
‘ಅವರನ್ನು ಸುಮ್ಮನೆ ಬಿಡಲ್ಲ’; ಶಪಥ ಮಾಡಿ ಮನೆ ಒಳಗೆ ಬಂದ ಅನು ಸಿರಿಮನೆ
Image
Megha Shetty: ಮಹೇಶ್ ಬಾಬು ಭೇಟಿ ಹಿಂದಿನ ಉದ್ದೇಶ ತಿಳಿಸಿದ ನಟಿ ಮೇಘಾ ಶೆಟ್ಟಿ
Image
Megha Shetty: ಕಲರ್ಸ್​ ಕನ್ನಡದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಮೇಘಾ ಶೆಟ್ಟಿ
Image
ಮೇಘಾ ಶೆಟ್ಟಿ ಮನೆಗೆ ಬಂತು ಎರಡು ಐಷಾರಾಮಿ ಕಾರು; ಖುಷಿ ಹಂಚಿಕೊಂಡ ನಟಿ

ಹೊಸ ಆರ್ಯವರ್ಧನ್​​ಗೆ ಸಂಪೂರ್ಣವಾಗಿ ನೆನಪು ಮಾಸಿ ಹೋಗಿದೆ. ತಾಯಿ ಪ್ರಿಯಾಳ ನೆನಪು ಮಾತ್ರ ಆತನಲ್ಲಿ ಉಳಿದುಕೊಂಡಿದೆ. ಹೀಗಾಗಿ, ಪ್ರತಿ ವಿಚಾರಕ್ಕೂ ಆತ ತಾಯಿಯನ್ನೇ ಕೇಳುತ್ತಿದ್ದಾನೆ. ರಾಜನಂದಿನಿ ವಿಲಾಸಕ್ಕೆ ತಾನು ಹೋಗುತ್ತಿರುವ ಹಿಂದಿನ ಉದ್ದೇಶ ಏನು ಎಂಬುದು ಕೂಡ ಆತನಿಗೆ ತಿಳಿದಿಲ್ಲ. ತಾಯಿಯ ಸೂಚನೆಯಂತೆ ಆತ ಅಲ್ಲಿಗೆ ತೆರಳಿದ್ದಾನೆ. ಕಾರು ಇಳಿಯುತ್ತಿದ್ದಂತೆ ಆತನಿಗೆ ಹಳೆಯ ನೆನಪು ಕಾಡಿದೆ.

ಆರ್ಯವರ್ಧನ್ ಮೂಲ ಹೆಸರು ಸಂಜು. ಮನೆಯಲ್ಲಿ ಹೊಸ ಆರ್ಯವರ್ಧನ್​ನ ಪರಿಚಯಿಸುವಾಗ ತನ್ನ ಈತನ ಹೆಸರು ಸಂಜು ಎಂದೇ ಪರಿಚಯಿಸಿದ್ದಾಳೆ ಪ್ರಿಯಾ. ಇದನ್ನು ಕೇಳಿ ಅನು ಶಾಕ್ ಆಗಿದ್ದಾಳೆ. ಅವಳಿಗೆ ಆರ್ಯವರ್ಧನ್ ಹೆಸರು​ ನೆನಪಿಗೆ ಬಂದಿದೆ. ಸಂಜು ಹೆಸರು ಹೇಳುತ್ತಿದ್ದಂತೆ ಆಕೆ ಕಣ್ಣೀರು ಹಾಕೋಕು ಶುರುಮಾಡಿದ್ದಾಳೆ. ‘ಸಂಜು ಅನ್ನೋ ಹೆಸರು ನಂಗೆ ತುಂಬಾನೇ ಇಷ್ಟ. ಈ ಕಾರಣಕ್ಕೆ ಈತನಿಗೆ ಸಂಜು ಎಂದು ಕರೆಯುತ್ತೇನೆ’ ಎಂಬುದಾಗಿ ಸ್ಪಷ್ಟನೆ ನೀಡಿದ್ದಾಳೆ ಪ್ರಿಯಾ.

‘ಸಂಜುಗೆ ಅಪಘಾತವಾಗಿದೆ. ಈ ಕಾರಣಕ್ಕೆ ನೆನಪು ಬರುವವರೆಗೆ ಆತ ಇಲ್ಲಿಯೇ ಉಳಿದುಕೊಳ್ಳುತ್ತಾನೆ ಇಂಬುದಾಗಿ ಪ್ರಿಯಾ ಹೇಳಿದ್ದಾಳೆ. ಇದಕ್ಕೆ ಮನೆಯವರ ಒಪ್ಪಿಗೆ ಸಿಕ್ಕಿದೆ. ಆದರೆ, ಮಾನ್ಸಿಗೆ ಈ ಬಗ್ಗೆ ಸಂತೋಷವಿಲ್ಲ. ಅವಳು ಕೊಂಕು ತೆಗೆದಿದ್ದಾಳೆ.

View this post on Instagram

A post shared by Zee Kannada (@zeekannada)

ಇದನ್ನೂ ಓದಿ: ಮೌನಕ್ಕೆ ಶರಣಾದ ಅನು ಸಿರಿಮನೆ; ಮನದಲ್ಲಿ ಹುಟ್ಟಿದೆ ದ್ವೇಷದ ಬೆಂಕಿ?

ಮತ್ತೊಂದೆಡೆ ಅನಿರುದ್ಧ್​ ಅವರನ್ನು ಧಾರಾವಾಹಿಯಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ಮನೆಯಲ್ಲಿದ್ದ ಫೋಟೋವನ್ನು ತೆಗೆದು ಮೂಲೆಗೆ ಸೇರಿಸಲಾಗಿದೆ. ಧಾರಾವಾಹಿಯ ಟೈಟಲ್ ಕಾರ್ಡ್ ಕೂಡ ಬದಲಾಗಿದೆ. ಹೀಗಾಗಿ ಇನ್ನುಮುಂದೆ ಹರೀಶ್​ ರಾಜ್ ಅವರೇ ಧಾರಾವಾಹಿಯಲ್ಲಿ ಸಂಪೂರ್ಣವಾಗಿ ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಗೆ ಸಿಕ್ಕ ಟ್ವಿಸ್ಟ್​ ಅನ್ನು ವೀಕ್ಷಕರು ಹೇಗೆ ಸ್ವೀಕರಿಸುತ್ತಾರೆ ಅನ್ನೋದು ಸದ್ಯದ ಕುತೂಹಲ.

ಶ್ರೀಲಕ್ಷ್ಮಿ ಎಚ್.

Published On - 9:07 am, Sat, 24 September 22

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?