‘ಕನ್ನಡ ಹೋರಾಟದ ವಿಚಾರ ಬಂದ್ರೆ ಸಂಬರ್ಗಿ ಉರ್ಕೋತಾರೆ’; ಪ್ರಶಾಂತ್-ರೂಪೇಶ್ ರಾಜಣ್ಣ ಮಧ್ಯೆ ನಡೆಯಿತು ಘೋರ ಜಗಳ

‘ನಿಮ್ಮ ಮನಸ್ಥಿತಿ ಹೊಂದಿರುವ ಕೆಲವರು ಮಾತ್ರ ನಿಮ್ಮನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಸಮಾಜ ನಿಮ್ಮನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಪ್ರಶಾಂತ್ ಸಂಬರ್ಗಿಗೆ ರೂಪೇಶ್ ರಾಜಣ್ಣ ಹೇಳಿದರು. ಇದಕ್ಕೆ ಪ್ರಶಾಂತ್ ಸಂಬರ್ಗಿ ಸಿಟ್ಟಾದರು.

‘ಕನ್ನಡ ಹೋರಾಟದ ವಿಚಾರ ಬಂದ್ರೆ ಸಂಬರ್ಗಿ ಉರ್ಕೋತಾರೆ’; ಪ್ರಶಾಂತ್-ರೂಪೇಶ್ ರಾಜಣ್ಣ ಮಧ್ಯೆ ನಡೆಯಿತು ಘೋರ ಜಗಳ
ರೂಪೇಶ್-ಪ್ರಶಾಂತ್
TV9kannada Web Team

| Edited By: Rajesh Duggumane

Sep 27, 2022 | 6:30 AM

‘ಕನ್ನಡ ಬಿಗ್ ಬಾಸ್ ಸೀಸನ್ 9’ (Bigg Boss Kannada) ಆರಂಭ ಆಗಿದೆ. ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಿತ್ತಾಟ ಆರಂಭ ಆಗಿದೆ. ಕಳೆದ ಸೀಸನ್​ನಲ್ಲಿ ಏರು ಧ್ವನಿಯಲ್ಲಿ ಮಾತನಾಡುವ ಮೂಲಕ ಗುರುತಿಸಿಕೊಂಡಿದ್ದ ಪ್ರಶಾಂತ್ ಸಂಬರ್ಗಿ ಅವರು ಈ ಬಾರಿಯೂ ಅದನ್ನೇ ಮುಂದುವರಿಸಿದ್ದಾರೆ. ಮೊದಲ ದಿನ ಆರ್ಯವರ್ಧನ್ ಗುರೂಜಿ (Aryavardhan Guruji) ಜತೆ ಅವರು ಕಿತ್ತಾಟ ಮಾಡಿಕೊಂಡಿದ್ದರು. ನಂತರ ಇಬ್ಬರೂ ರಾಜಿ ಆದರು. ಈಗ ಪ್ರಶಾಂತ್ ಸಂಬರ್ಗಿ ಅವರಿಗೂ ರೂಪೇಶ್ ರಾಜಣ್ಣ ಮಧ್ಯೆ ಕಿತ್ತಾಟ ನಡೆದಿದೆ.

‘ನಿಮ್ಮ ಮನಸ್ಥಿತಿ ಹೊಂದಿರುವ ಕೆಲವರು ಮಾತ್ರ ನಿಮ್ಮನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಸಮಾಜ ನಿಮ್ಮನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಪ್ರಶಾಂತ್ ಸಂಬರ್ಗಿಗೆ ರೂಪೇಶ್ ರಾಜಣ್ಣ ಹೇಳಿದರು. ಇದಕ್ಕೆ ಪ್ರಶಾಂತ್ ಸಂಬರ್ಗಿ ಸಿಟ್ಟಾದರು. ಇಬ್ಬರ ಮಧ್ಯೆ ಕಿತ್ತಾಟ ಮುಂದುವರಿದೇ ಇತ್ತು. ಇದನ್ನು ನೋಡಿ ಮನೆಯವರಿಗೆ ಚಿಂತೆ ಶುರುವಾಯಿತು. ಅಷ್ಟೇ ಅಲ್ಲ ಇಬ್ಬರನ್ನು ಸಮಾಧಾನ ಮಾಡಲು ಮನೆ ಮಂದಿ ಎಲ್ಲರೂ ಬಂದರು. ಆದರೆ, ಯಾರೊಬ್ಬರೂ ಸಮಾಧಾನಗೊಂಡಿಲ್ಲ.

ಇವರ ಜಗಳ ನೋಡಿ ಅರುಣ್ ಸಾಗರ್ ನಗೆಚಟಾಕಿ ಹಾರಿಸಿದರು. ‘ಇಬ್ಬರೂ (ಪ್ರಶಾಂತ್-ರೂಪೇಶ್ ರಾಜಣ್ಣ) ಟೇಬಲ್ ಕುಟ್ಟಿ ಮಾತನಾಡುತ್ತಾರೆ. ಇದರಿಂದ ಚಿತ್ರಾನ್ನ ನಾನು ತಿನ್ನುವ ಮೊದಲೇ ಬಾಯಿ ಒಳಗೆ ಹೋಗುತ್ತಿದೆ. ದಯವಿಟ್ಟು ಟೇಬಲ್ ಕುಟ್ಟಿ ಮಾತನಾಡಬೇಡಿ’ ಎಂದು ಅರುಣ್ ಸಾಗರ್ ಕೋರಿದರು. ಇದನ್ನು ಕೇಳಿ ಮನೆ ಮಂದಿಯೆಲ್ಲ ನಕ್ಕರು. ಅಷ್ಟೇ ಅಲ್ಲ, ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಅವರು ಜಗಳ ಮಾಡುವುದಿಲ್ಲ ಎಂದು ಶಪಥ ಮಾಡಿದರು.

ಇದನ್ನೂ ಓದಿ: BBK9: ಮೊದಲ ದಿನವೇ ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಫೈಟ್​; ಕೂಗಾಡಿದ ಪ್ರಶಾಂತ್​ ಸಂಬರ್ಗಿ

ಇದನ್ನೂ ಓದಿ

ಇದಾದ ಕೆಲವೇ ಗಂಟೆಗಳಲ್ಲಿ ಅರುಣ್ ಸಾಗರ್ ಹಾಗೂ ರೂಪೇಶ್ ರಾಜಣ್ಣ ಮಧ್ಯೆ ಕನ್ನಡ ಹಾಗೂ ಕನ್ನಡ ಹೋರಾಟ ವಿಚಾರದಲ್ಲಿ ಮಾತುಕತೆ ಆರಂಭಿಸಿದರು. ಈ ಚರ್ಚೆ ಬಹಳ ಸೊಗಸಾಗಿ ಸಾಗುತ್ತಿತ್ತು. ಚರ್ಚೆ ನೋಡಿ ಪ್ರಶಾಂತ್ ಸಂಬರ್ಗಿ ಅವರು ಕೊಂಕಿನ ಮಾತನ್ನು ಆಡಿದರು. ‘ಕನ್ನಡದ ವಿಚಾರ ಹಾಗೂ ಕನ್ನಡದ ಹೋರಾಟ ಬಂದಾಗ ಪ್ರಶಾಂತ್ ಸಂಬರ್ಗಿ ಯಾಕೆ ಉರ್ಕೊತಾರೆ ಅನ್ನೋದು ಗೊತ್ತಾಗುತ್ತಿಲ್ಲ’ ಎಂಬ ಮಾತನ್ನು ರೂಪೇಶ್ ರಾಜಣ್ಣ ಹೇಳಿದರು. ಇದಕ್ಕೆ ಸಮರ್ಥನೆ ನೀಡುವ ಕೆಲಸವನ್ನು ಪ್ರಶಾಂತ್ ಸಂಬರ್ಗಿ ಮಾಡಿದರು. ಜತೆಗೆ ಏರು ಧ್ವನಿಯಲ್ಲಿ ಕೂಗಿದರು. ಇಬ್ಬರ ಮಧ್ಯೆ ಘನಘೋರ ಜಗಳವೇ ನಡೆದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada