ಹುಟ್ಟುವ ಮಗುವಿಗೆ ಹೊಸ ಭರವಸೆ ನೀಡಿದ ಅನು ಸಿರಿಮನೆ; ಆರ್ಯವರ್ಧನ್​ಗೆ ಬರುತ್ತಿದೆ ಹಳೆಯ ನೆನಪು

ಆರ್ಯವರ್ಧನ್ ನಿಧನ ಹೊಂದಿದ್ದಾನೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ, ಹಾಗಾಗಿಲ್ಲ. ಆತ ಬದುಕಿದ್ದಾನೆ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿರುವುದರಿಂದ ಮುಖ ಬದಲಾಗಿ ಹೊಸ ಆರ್ಯವರ್ಧನ್ (ಹರೀಶ್ ರಾಜ್​) ಆಗಮನ ಆಗಿದೆ. ಇದು ಮನೆಯಲ್ಲಿ ಯಾರಿಗೂ ತಿಳಿದಿಲ್ಲ.

ಹುಟ್ಟುವ ಮಗುವಿಗೆ ಹೊಸ ಭರವಸೆ ನೀಡಿದ ಅನು ಸಿರಿಮನೆ; ಆರ್ಯವರ್ಧನ್​ಗೆ ಬರುತ್ತಿದೆ ಹಳೆಯ ನೆನಪು
ಅನು
TV9kannada Web Team

| Edited By: Rajesh Duggumane

Sep 27, 2022 | 2:55 PM

ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿ ಬೇರೆಬೇರೆ ತಿರುವು ಪಡೆದುಕೊಂಡು ಸಾಗುತ್ತಿದೆ. ಅನು ಸಿರಿಮನೆ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾಳೆ. ಒಂದು ಕಡೆ ಮಗು ಬರುತ್ತಿದೆ ಎಂಬ ಖುಷಿ ಆದರೆ ಮತ್ತೊಂದು ಕಡೆ ಗಂಡನನ್ನು ಕಳೆದುಕೊಂಡಿದ್ದೇನೆ ಎಂಬ ದುಃಖ ಆಕೆಯನ್ನು ಎಡಬಿಡದೆ ಕಾಡುತ್ತಿದೆ. ಈ ಮಧ್ಯೆ ತನ್ನ ಎಲ್ಲಾ ಕಷ್ಟಗಳನ್ನು ಎದುರಿಸುವ ನಿರ್ಧಾರಕ್ಕೆ ಆಕೆ ಬಂದಿದ್ದಾಳೆ. ಜತೆಗೆ ಈ ಸ್ಥಿತಿಗೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಳ್ಳುವ ನಿರ್ಧಾರವನ್ನೂ ಕೈಗೊಂಡಿದ್ದಾಳೆ. ಈ ಮಧ್ಯೆ ಮಗುವಿಗೆ ಹೊಸ ಭರವಸೆಯನ್ನು ಅನು ನೀಡಿದ್ದಾಳೆ.

ಆರ್ಯವರ್ಧನ್ ನಿಧನ ಹೊಂದಿದ್ದಾನೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ, ಹಾಗಾಗಿಲ್ಲ. ಆತ ಬದುಕಿದ್ದಾನೆ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿರುವುದರಿಂದ ಮುಖ ಬದಲಾಗಿ ಹೊಸ ಆರ್ಯವರ್ಧನ್ (ಹರೀಶ್ ರಾಜ್​) ಆಗಮನ ಆಗಿದೆ. ಇದು ಮನೆಯಲ್ಲಿ ಯಾರಿಗೂ ತಿಳಿದಿಲ್ಲ. ಈ ವಿಚಾರ ತಿಳಿದರೆ ಅನು ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬ ಕುತೂಹಲವೂ ವೀಕ್ಷಕರಲ್ಲಿ ಮೂಡಿದೆ.

ಅನು ಕನ್ನಡಿ ಎದುರು ನಿಂತಿದ್ದಳು. ಜೀವನದಲ್ಲಿ ಎಷ್ಟೆಲ್ಲ ಕಷ್ಟ ಬರುತ್ತಿದೆ ಎಂಬುದನ್ನು ನೆನೆದು ಆಕೆ ಬೇಸರಗೊಂಡಿದ್ದಾಳೆ. ಅಷ್ಟೇ ಅಲ್ಲ, ಹುಟ್ಟುತ್ತಿರುವ ಮಗುವಿಗೆ ಹೊಸ ಭರವಸೆ ನೀಡಿದ್ದಾಳೆ. ಎಷ್ಟೇ ಕಷ್ಟ ಬಂದರೂ ಅದನ್ನು ನಿನಗೆ ವರ್ಗಾಯಿಸುವುದಿಲ್ಲ ಎಂಬ ಮಾತನ್ನು ಅನು ಹೇಳಿದ್ದಾಳೆ. ‘ನಿಮ್ಮಪ್ಪ ಇದ್ದಿದ್ದರೆ ಏನೆಲ್ಲ ಸಿಗುತ್ತಿತ್ತೋ ಅದನ್ನು ನಾನು ನಿನಗೆ ಕೊಡ್ತೀನಿ. ಅವರು ಬಿಟ್ಟು ಹೋಗಿರುವ ನೆನಪು, ನೀನ್ ಬರ್ತಿಯಾ ಎಂಬ ನಿರೀಕ್ಷೆ ನನಗೆ ಬದುಕೋಕೆ ಇರುವ ಶಕ್ತಿ. ಎಷ್ಟೇ ಕಷ್ಟ ಇದ್ದರೂ ನಿನ್ನ ಸಂತೋಷದಿಂದ ಬರಮಾಡಿಕೊಳ್ಳುತ್ತೇನೆ’ ಎಂಬ ಮಾತನ್ನು ಅನು ಹೇಳಿದ್ದಾಳೆ.

ಆರ್ಯವರ್ಧನ್​ಗೆ ಬರುತ್ತಿದೆ ನೆನಪು

ಆರ್ಯವರ್ಧನ್​ಗೆ ಅಪಘಾತ ಆಗಿದ್ದರಿಂದ ನೆನಪು ಸಂಪೂರ್ಣವಾಗಿ ಮಾಸಿದೆ. ಪ್ಲಾಸ್ಟಿಕ್ ಸರ್ಜರಿ ಕೂಡ ಮಾಡಿರುವುದರಿಂದ ಮುಖದ ಛಾಯೆ ಬದಲಾಗಿದೆ. ಈ ಕಾರಣಕ್ಕೆ ಆತನ ಗುರುತು ಯಾರಿಗೂ ಸಿಗುತ್ತಿಲ್ಲ. ದಿನಕಳೆದಂತೆ ನೆನಪು ಬರುತ್ತದೆ ಎಂಬ ಭರವಸೆಯನ್ನು ವೈದ್ಯರು ನೀಡಿದ್ದಾರೆ. ಈ ಕಾರಣದಿಂದ ಅವನನ್ನು ರಾಜ ನಂದಿನಿ ನಿವಾಸಕ್ಕೆ ತಂದು ಇಟ್ಟುಕೊಳ್ಳಲಾಗಿದೆ.

ಇದನ್ನೂ ಓದಿ: ಅನು ಮನೆ ಸೇರಿದ ಹೊಸ ಆರ್ಯವರ್ಧನ್; ಮನ ಸೇರುವುದೊಂದೇ ಬಾಕಿ

ಹೊಸ ಆರ್ಯವರ್ಧನ್ (ಸಂಜು) ಅನು ಮನೆಯಲ್ಲೇ ಇದ್ದಾನೆ. ಅವನಿಗೆ ಹಲವು ನೆನಪುಗಳು ಕಾಡುತ್ತಿವೆ. ಮನೆಯಲ್ಲಿ ಎಲ್ಲರೂ ಕುಳಿತಿದ್ದಾಗ ಯಾವ ಪಾನೀಯ ಕುಡಿಯುತ್ತೀಯಾ ಎಂದು ಕೇಳಿದಾಗ ಆತ ಗ್ರೀನ್ ಟೀ ಎಂದು ಹೇಳಿದ್ದಾನೆ. ಇದನ್ನು ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ. ಕಾರಣ, ಆರ್ಯವರ್ಧನ್ ಕೂಡ ಅದನ್ನೇ ಕುಡಿಯುತ್ತಿದ್ದ. ಮತ್ತೊಂದೆಡೆ ಆರ್ಯವರ್ಧನ್ ಬುಕ್ ಕಲೆಕ್ಷನ್ ನೋಡಿ ಸಂಜುಗೆ ಅಚ್ಚರಿ ಆಗಿದೆ. ಈ ಪುಸ್ತಕಗಳನ್ನು ನಾನು ಎಲ್ಲಿಯೋ ಓದಿದ್ದೇನೆ ಎಂಬ ಮಾತನ್ನು ಆತ ಹೇಳಿದ್ದಾನೆ. ಆರ್ಯವರ್ಧನ್​ನ ಫೇವರಿಟ್ ಪುಸ್ತಕ ತೋರಿಸಿ ಇದು ನನ್ನ ಇಷ್ಟದ ಪುಸ್ತಕ ಎಂಬ ಮಾತನ್ನು ಹೇಳಿದ್ದಾನೆ. ಈ ವಿಚಾರ ಕೇಳಿ ಅನು ಅತ್ತೆಗೆ ಅಚ್ಚರಿ ಆಗಿದೆ. ಹೊಸ ಆರ್ಯವರ್ಧನ್​ ನೋಡಿದಾಗೆಲ್ಲ ಅನು ಭಾವುಕಳಾಗುತ್ತಿದ್ದಾಳೆ. ಅವಳಿಗೆ ನಿಜ ವಿಚಾರದ ಸೂಚನೆ ಸಿಕ್ಕಿರಬಹುದು ಎಂಬುದು ವೀಕ್ಷಕರ ಊಹೆ.

ಇದನ್ನೂ ಓದಿ

ಶ್ರೀಲಕ್ಷ್ಮಿ ಎಚ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada