AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakshana Serial: ಭೂಪತಿ ಮನೆಯಲ್ಲಿ ನವರಾತ್ರಿ ಜೋರು; ಬೊಂಬೆಯಾಟದಲ್ಲಿ ನಕ್ಷತ್ರಳ ಜೀವನದ ಹಳೆಯ ನೆನಪುಗಳು

ಭೂಪತಿಯ ಮನೆಯಲ್ಲೂ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ತಯಾರಿ ಬಾರಿ ಜೋರಾಗೆ ನಡೆಯುತ್ತಿದೆ. ಹಬ್ಬದ ದಿನ ಕಥಾ ನಾಯಕಿ ನಕ್ಷತ್ರಳ ತಂದೆ ತಾಯಿ ಕೂಡಾ ಬಂದೇ ಬಿಟ್ಟಿದ್ದಾರೆ.

Lakshana Serial: ಭೂಪತಿ ಮನೆಯಲ್ಲಿ ನವರಾತ್ರಿ ಜೋರು; ಬೊಂಬೆಯಾಟದಲ್ಲಿ ನಕ್ಷತ್ರಳ ಜೀವನದ ಹಳೆಯ ನೆನಪುಗಳು
Nakshatra
TV9 Web
| Edited By: |

Updated on:Sep 27, 2022 | 12:14 PM

Share

ಕಲರ್ಸ್ ಕನ್ನಡದಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರವಾಹಿ ತನ್ನ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ನವರಾತ್ರಿಯಂತೂ ಬಂದೇ ಬಿಟ್ಟಿದೆ. ಎಲ್ಲರ ಮನೆಯಲ್ಲಿ ಆಚರಿಸುವ ಹಾಗೆ ಭೂಪತಿಯ ಮನೆಯಲ್ಲೂ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ತಯಾರಿ ಬಾರಿ ಜೋರಾಗೆ ನಡೆಯುತ್ತಿದೆ. ಹಬ್ಬದ ದಿನ ಕಥಾ ನಾಯಕಿ ನಕ್ಷತ್ರಳ ತಂದೆ ತಾಯಿ ಕೂಡಾ ಬಂದೇ ಬಿಟ್ಟಿದ್ದಾರೆ. ಅವರು ಮನೆಗೆ ಬಂದದ್ದನ್ನು ಕಂಡು ಶಕುಂತಳಾದೇವಿಗೆ ಕೋಪ ಬಂದರೂ ಕೂಡಾ ಅವರ ಬಳಿ ಬಂದು ನೀವೇನು ಇಲ್ಲಿ ಎಂದು ಮಾತನಾಡಿಸುತ್ತಾಳೆ. ಮಗಳ ಸಂತೋಷಕ್ಕಾಗಿ ಮಾತಿನ ಮಧ್ಯೆಯೆ ಹಿಂದೆ ಆದ ಕಹಿ ಘಟನೆಯನ್ನು ಮರೆತು ನಮ್ಮನ್ನು ಕ್ಷಮಿಸಿ, ನಾವು ಮೊದಲಿನಂತೆಯೇ ಸಂತೋಷದಿಂದ ಇರೋಣಾ ಎಂದು ಸಿ.ಎಸ್ ಶಕುಂತಳಾ ದೇವಿ ಬಳಿ ಅಂಗಲಾಚುತ್ತಾರೆ. ಅದಕ್ಕೆ ಉತ್ತರ ನೀಡಿದ ಶಕುಂತಳಾ ದೇವಿ ನಮ್ಮ ಮನೆಯ ನೆಮ್ಮದಿ ಹಾಳಾಗಲು ನೀವೆ ಕಾರಣ, ಅದು ಹೇಗೆ ಅನ್ಕೋಂಡ್ರಿ ನಾನು ನಿಮ್ಮನ್ನು ಕ್ಷಮಿಸುತ್ತೇನೆ ಎಂದು ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಹೇಳುತ್ತಾಳೆ.

ಶಕುಂತಳಾ ದೇವಿಯ ಮಾತಿನಿಂದ ಬೇಸರಗೊಂಡು ಚಂದ್ರಶೇಖರ್ ಮತ್ತು ಆರತಿ ಕುಳಿತುಕೊಂಡಿದ್ದ ಜಾಗಕ್ಕೆ ನಕ್ಷತ್ರ ಬಂದು ಅವರ ಆಶೀರ್ವಾದ ಪಡೆದು ಅವರನನ್ನು ಬೊಂಬೆಯಾಟ ತೋರಿಸಲು ಒಳಗೆ ಕರೆದುಕೊಂಡು ಹೋಗುತ್ತಾಳೆ. ಭೂಪತಿಯ ಅತ್ತಿಗೆ ಮಯೂರಿ ಬೊಂಬೆಯಾಟವನ್ನು ಶುರು ಮಾಡುತ್ತಾ ಭೂಪತಿ ಹಾಗೂ ನಕ್ಷತ್ರಳ ಜೀವನದ ಕಥೆಯನ್ನೇ ಹೇಳುತ್ತಾಳೆ. ನಕ್ಷತ್ರ ಹುಟ್ಟಿನಿಂದ ತಂದೆಯ ಪ್ರೀತಿ ಸಿಗದೆ ಹೀಯಾಳಿಕೆಯ ಮಾತಿನಿಂದ ಬೆಳೆದ ಆಕೆಗೆ ಭೂಪತಿಯ ಸ್ನೇಹ ಹೇಗಾಯಿತು, ಶ್ವೇತಾ ಮತ್ತು ಭೂಪತಿಯ ಮದುವೆ ನಡೆಯಬೇಕಿದ್ದ ಸಂದರ್ಭದಲ್ಲಿ ಮನೆಯವರಿಗೆಲ್ಲಾ ನಕ್ಷತ್ರಳೇ ಸಿ.ಎಸ್‌ನ ನಿಜವಾದ ಮಗಳು ಎಂದು ತಿಳಿದು ಅವರ ಮಗಳ ಪ್ರೀತಿಯನ್ನು ಉಳಿಸುವ ಸಲುವಾಗಿ ನಕ್ಷತ್ರ ಹಾಗೂ ಭೂಪತಿಗೆ ಹೇಗೆ ಮದುವೆ ಮಾಡಿದ್ರು ಮತ್ತು ಇತ್ತಿಚಿಗೆ ನಕ್ಷತ್ರಳ ಪ್ರಾಣಕ್ಕೆ ಭೂಪತಿಯ ಸ್ವಂತ ತಮ್ಮನಾದ ಮೌರ್ಯ ಹೇಗೆಲ್ಲಾ ತೊಂದರೆ ಮಾಡಿದ ಅಂತಾ ಬೊಂಬೆಯಾಟದ ಮೂಲಕ ಹೇಳುತ್ತಾಳೆ.

ಇದನ್ನು ಓದಿ: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು

ಮನೆಯವರೆಲ್ಲರೂ ಒಂದು ಕ್ಷಣ ಮೂಕ ವಿಸ್ಮಿತರಾಗಿ ಕಥೆಯನ್ನು ಕೇಳುತ್ತಾರೆ. ಕೊನೆಗೆ ನಕ್ಷತ್ರಳದ್ದು ಯಾವುದೇ ತಪ್ಪಿಲ್ಲ, ಅವಳನ್ನು ಒಪ್ಪಿ ಭೂಪತಿಯು ಅವಳೊಂದಿಗೆ ಸುಖವಾಗಿ ಸಂಸಾರ ಮಾಡುತ್ತಾನೆ ಎನ್ನುವ ನಂಬಿಕೆ ನನಗಿದೆ ಎಂದು ಮಯೂರಿ ಹೇಳುವಾಗ ಅದು ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದು ಶಕುಂತಳಾದೇವಿ ಏರು ಧ್ವನಿಯಲ್ಲಿ ಹೇಳುತ್ತಾರೆ. ಭೂಪತಿಯು ನಕ್ಷತ್ರಳನ್ನು ಒಪ್ಪಿಕೊಂಡು ಸುಖವಾಗಿ ಸಂಸಾರ ಮಾಡುತ್ತಾನಾ ಎಂಬುದನ್ನು ಮುಂದೆ ಕಾದು ನೋಡಬೇಕಾಗಿದೆ.

ಮಾಲಾಶ್ರೀ ಅಂಚನ್ 

Published On - 10:36 am, Tue, 27 September 22