Lakshana Serial: ಮಿಸ್ಟ್ರಿಯ ಪ್ರೀತಿ ಪಡೆಯೋಕೆ ಹೊಸ ಆಟ ಶುರು ಮಾಡಿದ್ದಾಳೆ ನಕ್ಷತ್ರ, ಇನ್ನೊಂದೆಡೆ ಮನೆಯನ್ನೇ ಗುಡಿಸಿ ಗುಂಡಾಂತರ ಮಾಡಲು ಸಜ್ಜಾಗಿದ್ದಾಳೆ ಶ್ವೇತಾ
ಶ್ವೇತಾಳ ತಲೆಯೊಳಗೆ ಕುತಂತ್ರದ ಆಲೋಚನೆಯನ್ನು ಬಿಟ್ಟ ಮಿಲ್ಲಿಯು ಅವರ ಮನೆಯವರನ್ನು ಬೀದಿಗೆ ತರುವಲ್ಲಿ ಯಶಸ್ವಿಯಾಗುತ್ತಾಳಾ ಹಾಗೂ ನಕ್ಷತ್ರ ತನ್ನ ಪ್ರೀತಿಯನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾಳಾ.
ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರವಾಹಿ ತನ್ನ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಭೂಪತಿಯ ಪ್ರೀತಿ ಗಳಿಸಲು ನಕ್ಷತ್ರಳ ಹೊಸ ಪ್ಲಾನ್ ಒಂದು ರೆಡಿಯಾಗಿದೆ. ಬೆಳ್ಳಂಬೆಳಗ್ಗೆ ಎದ್ದು ಭೂಪತಿಗೆ ಕಾಫಿ ಕೊಡುವ ನೆಪದಲ್ಲಿ ಬಂದು ನನಗೆ ನಿನ್ನಿಂದ ಒಂದು ಸಹಾಯ ಆಗ್ಬೇಕು ಎಂದು ಹೊಸ ರಾಗ ಶುರು ಮಾಡಿದ್ದಾಳೆ. ನಾನು ಲವ್ ಸ್ಟೋರಿಗೆ ಸಂಬಂಧಿಸಿದ ಕಥೆ ಬರಿಬೇಕು, ಅದಕ್ಕೆ ನೀನೆ ಏನಾದರೂ ಒಂದು ಐಡಿಯಾ ನೀಡು ಎಂದು ಭೂಪತಿಯಲ್ಲಿ ಕೇಳುತ್ತಾಳೆ. ಇದಕ್ಕೆ ಒಲ್ಲೇ ಎಂದ ಆತ ನನಗೆ ಯಾವುದೇ ಲವ್ ಸ್ಟೋರಿನೂ ಗೊತ್ತಿಲ್ಲ ಮೊದಲು ಇಲ್ಲಿಂದ ಜಾಗ ಖಾಲಿ ಮಾಡು ತಾಯಿ ಎಂದು ಆಕೆಯನ್ನು ಅಲ್ಲಿಂದ ಹೊರಗೆ ಕಳಿಸುತ್ತಾನೆ.
ನಕ್ಷತ್ರಳ ಹೊಸ ವರಸೆ ಭೂಪತಿಗೆ ಯಾಕೊ ವಿಚಿತ್ರ ಅಂತಾ ಅನಿಸುತ್ತೆ. ರೂಮ್‌ನಿಂದ ಹೊರ ಬಂದ ನಕ್ಷತ್ರ ಕೂಡಲೇ ಸ್ಟಡಿ ರೂಮ್‌ಗೆ ಹೋಗಿ ಅಲ್ಲಿಂದ ಕೆಲವು ದೇವರುಗಳ ಫೋಟೋಗಳನ್ನು ತಂದು ರೂಮ್‌ನ ಗೋಡೆಗೆ ಅಂಟಿಸುತ್ತಾಳೆ, ಭೂಪತಿ ರೂಮ್‌ಗೆ ಬಂದು ಇದನ್ನೆಲ್ಲಾ ನೋಡಿ ಏನಿದು ಅಂತಾ ನಕ್ಷತ್ರಳನ್ನೇ ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಉತ್ತರಿಸಿದ ಆಕೆ ನಿನಗೆ ನಿಜವಾದ ಪ್ರೀತಿ ಅಂದ್ರೆ ಏನು ಅಂತಾ ಗೊತ್ತಿಲ್ಲ ಅಲ್ವಾ, ರಾಮ ಸೀತೆ, ಶಿವ ಪಾರ್ವತಿ, ರಾಧಾಕೃಷ್ಣ ಇವರದ್ದೆಲ್ಲಾ ನಿಜವಾದ ಪ್ರೀತಿ ಎಂದು ಹೇಳುತ್ತಾ ಪ್ರೀತಿಯ ಹೊಸ ಪಾಠ ಮಾಡಲು ತಯಾರಿ ಶುರು ಮಾಡಿದ್ದಾಳೆ ನಕ್ಷತ್ರ.
ಆದ್ರೆ ಈ ಕಡೆ ಮಿಲ್ಲಿಯ ತಾಯಿಯ ಕುತಂತ್ರದಿಂದ ಶ್ವೇತಾ ಮತ್ತು ಅವರಳ ಮನೆಯವರನ್ನು ಬೀದಿಗೆ ತರುವ ತವಕದಲ್ಲಿದ್ದಾಳೆ. ಇದಕ್ಕೆ ಮಿಲ್ಲಿ ಹೊಸ ಪ್ಲಾನ್ ಒಂದನ್ನು ರೆಡಿ ಮಾಡಿ ಶ್ವೇತಾಳ ಸ್ನೇಹಿತರನ್ನು ಮನೆಗೆ ಕರೆತಂದು ಅವರ ಬಾಯಲ್ಲೇ ಬ್ಲಾಕ್ ಮನಿಯಿಂದ ಹೇಗೆ ಶ್ರೀಮಂತರಾಗಬಹುದು ಎಂದು ಒಂದು ಸಣ್ಣ ನಾಟಕವನ್ನು ಮಾಡುತ್ತಾಳೆ. ಎರಡು ಪಟ್ಟು ಬ್ಲಾಕ್ ಮನಿ ಬೇಕೆಂದ್ರೆ ಮಿನಿ ಮಮ್ 50 ಲಕ್ಷವಾದರೂ ಬೇಕೆಂದು ಅವರು ಹೇಳಿದಾಗ ತಕ್ಷಣ ಅದಕ್ಕೆ ಉತ್ತರಿಸಿದ ಮಿಲ್ಲಿ, ಮೇಡಮ್ ನಿಮ್ಮ ಅಪ್ಪನ ಬಳಿ ಮುರುಕಳು ಮನೆ ಬಿಟ್ಟರೆ ಬೇರೇನು ಇಲ್ಲಾ ಅಲ್ವಾ ಎಂದು ಹೀಯಾಳಿಸುತ್ತಾಳೆ.
ಶ್ವೇತಾಳ ತಲೆಯೊಳಗೆ ಕುತಂತ್ರದ ಆಲೋಚನೆಯನ್ನು ಬಿಟ್ಟ ಮಿಲ್ಲಿಯು ಅವರ ಮನೆಯವರನ್ನು ಬೀದಿಗೆ ತರುವಲ್ಲಿ ಯಶಸ್ವಿಯಾಗುತ್ತಾಳಾ ಹಾಗೂ ನಕ್ಷತ್ರ ತನ್ನ ಪ್ರೀತಿಯನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತಾಳಾ ಎಂಬ ಇಂಟ್ರಸ್ಟಿಂಗ್ ಕಥೆಯನ್ನು ಮುಂದೆ ನೋಡಬೇಕಾಗಿದೆ.
ಮಾಲಾಶ್ರೀ ಅಂಚನ್
Published On - 11:32 am, Thu, 29 September 22