Deepavali 2022: ಹಬ್ಬಗಳ ಸಂದರ್ಭದಲ್ಲಿ ಮನೆ ಸ್ವಚ್ಚತೆಯ ಜೊತೆಗೆ ಆರೋಗ್ಯದ ಕಡೆ ಗಮನಹರಿಸಿ
ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವ ಬದಲಾಗಿ ಮನೆ ಸ್ವಚ್ಚತೆಯಲ್ಲೇ ಮುಳುಗಿ ಹೋಗುತ್ತಾರೆ. ಇದು ಕೊಳಕು ಮತ್ತು ಧೂಳನ್ನು ಉಂಟುಮಾಡುವ ಸೋಂಕುಗಳ ಹರಡಲು ಕಾರಣವಾಗಬಹುದು.
ಹಬ್ಬಗಳೆಂದರೇನೇ ವಿಶೇಷ, ಮನೆ ಸ್ವಚ್ಚತೆ, ಅಲಂಕಾರ ಪೂಜೆ, ತಿಂಡಿ ತಿನಸು ಹೀಗೆ ಹತ್ತು ಹಲವು ಕೆಲಸ ಕಾರ್ಯಗಳಲ್ಲಿ ನಿಮ್ಮ ಆರೋಗ್ಯದ ಕಡೆ ಗಮನ ಹರಿಸುವುದನ್ನು ಮರೆತ್ತಿದ್ದೀರೇ..? ಹಾಗಿದ್ದರೆ ಇಲ್ಲಿದೆ ಹಬ್ಬಗಳ ಸಂದರ್ಭದಲ್ಲಿ ಮನೆ ಶುಚಿಗೊಳಿಸುವ ಜೊತೆಗೆ ಆರೋಗ್ಯ ಕಡೆ ಗಮನಹರಿಸಿ. ಕೊಳಕು ಮತ್ತು ಧೂಳನ್ನು ಉಂಟುಮಾಡುವ ಸೋಂಕುಗಳ ಬಗ್ಗೆ ಎಚ್ಚರವಹಿಸಿ.
ಸಾಮಾನ್ಯವಾಗಿ, ಮನೆ ಸ್ವಚ್ಚತೆ ಎಂದರೆ ಪ್ರತಿ ದಿನದ ಮನೆಯನ್ನು ಗುಡಿಸಿ, ಒರೆಸುವುದಾಗಿರುತ್ತದೆ. ಆದರೆ ಹಬ್ಬಗಳ ಸಂದರ್ಭದಲ್ಲಿ ಮನೆಯ ಪ್ರತಿ ಮೂಲೆ ಮೂಲೆಗಳನ್ನು ಹೊಳೆಯುವಂತೆ ಮಾಡುವುದು ಪ್ರತಿಯೊಂದು ಮನೆಯಲ್ಲಿಯೂ ಮೊದಲೇ ಚರ್ಚೆಯಾಗಿರುತ್ತದೆ. ಆದರೂ ಕೂಡ ಕೊನೆಯ ಕ್ಷಣದ ವರೆಗೂ ದೂಡಿ ಹಬ್ಬದ ಮುಂಚಿನ ದಿನ ಇಡೀ ಮನೆ ಸ್ವಚ್ಚಗೊಳಿಸುವುದನ್ನು ಕಾಣಬಹುದು. ಇದ್ದರಿಂದಾಗಿ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವ ಬದಲಾಗಿ ಮನೆ ಸ್ವಚ್ಚತೆಯಲ್ಲೇ ಮುಳುಗಿ ಹೋಗುತ್ತಾರೆ. ಇದು ಕೊಳಕು ಮತ್ತು ಧೂಳನ್ನು ಉಂಟುಮಾಡುವ ಸೋಂಕುಗಳ ಹರಡಲು ಕಾರಣವಾಗಬಹುದು.
ತಜ್ಞರ ಪ್ರಕಾರ ಮನೆ ಸ್ವಚ್ಚಗೊಳಿಸುವಿಕೆ ಕೇವಲ ಕೊಳಕು ಮತ್ತು ಧೂಳಗಳನ್ನು ಮಾತ್ರ ಸ್ವಚ್ಚಗೊಳಿಸುವ ಬದಲಾಗಿ ನಿಮ್ಮನ್ನು ಮಾನಸಿಕವಾಗಿಯೂ ಸ್ವಚ್ಚಗೊಳಿಸಬೇಕು. ಆದ್ದರಿಂದ ಇದ್ದಕ್ಕೆ ಬೇಕಾಗುವ ಕೆಲವೊಂದಿಷ್ಟು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಮನಸ್ಸು ಶಾಂತವಾಗಿಡಿ:
ಇನ್ನೇನೂ ಹಬ್ಬಗಳಿಗೆ ಒಂದೆರಡು ದಿನ ಬಾಕಿ ಇರುವಾಗಲೇ ತಮ್ಮ ಒತ್ತಡ ಜೀವನದ ಮಧ್ಯೆ ಮನೆ ಸ್ವಚ್ಚಗೊಳಿಸಲು ಪ್ರಾರಂಭಿಸುತ್ತಾರೆ. ಆದ್ದರಿಂದ ಆದಷ್ಟು ಮನಸ್ಸು ಶಾಂತಗೊಳಿಸಿ. ಇದ್ದರಿಂದ ಮನೆ ಸ್ವಚ್ಚಗೊಳಿಸುವಿಕೆಯ ಜೊತೆಗೆ ಮಾನಸಿಕವಾಗಿಯೂ ಸ್ವಚ್ಚ ಮನಸ್ಥಿನಿಂದ ಯಾವುದೇ ಒತ್ತಡಗಳನ್ನು ತೆಗೆದುಕೊಳ್ಳದೇ ಕೆಲಸ ನಿರ್ವಹಿಸಬಹದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಒತ್ತಡವು ಒಂದು ದೊಡ್ಡ ಸಮಸ್ಯೆಯಾಗಿದ್ದು, ಅತಿಯಾದ ಯೋಚನೆಯಿಂದ ಹೊಸ ಕಾಯಿಲೆಗೆ ಮೂಲ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಜೀವನದಿಂದ ಒತ್ತಡವನ್ನು ಹೊರಹಾಕಲು ಪರ್ಯಾಯ ಮಾರ್ಗ ಕಂಡುಕೊಳ್ಳಿ ಎನ್ನುತ್ತಾರೆ ತಜ್ಞರು.
ಸೋಂಕುಗಳ ಬಗ್ಗೆ ಎಚ್ಚರ ವಹಿಸಿ: ಪ್ರತಿದಿನ ಮನೆ ಶುಚಿಗೊಳಿಸುವಿಕೆಯು ಕೊಳಕು ಮತ್ತು ಧೂಳಿನಿಂದ ಸ್ವಚ್ಚಗೊಳಿಸಲು ಸಹಾಯ ಮಾಡುತ್ತದೆಯಾದರೂ, ವಿಶೇಷವಾಗಿ ದೀಪಾವಳಿಯ ಸಮಯದಲ್ಲಿ ಪ್ರತಿ ಮನೆಯ ಮೂಲೆ ಮೂಲೆಗಳನ್ನು ಹೊಳೆಯುವಂತೆ ಮಾಡುತ್ತದೆ. ಇದ್ದರಿಂದಾಗಿ ಅಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾ, ಕೊಳಕು ಮತ್ತು ಧೂಳನ್ನು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಮಳೆಗಾಲ ಮುಗಿಯುತ್ತಿದ್ದಂತೆಯೇ ದೀಪಾವಳಿ ಬರುವುದರಿಂದ ಅನೇಕ ಕೀಟಗಳು ಮನೆಗೆ ನುಗ್ಗಿ ಆಹಾರಗಳಿಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಕಲುಷಿತ ಆಹಾರವನ್ನು ಸೇವಿಸುವುದರಿಂದ ಆಹಾರ ವಿಷ, ಅಜೀರ್ಣ ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಅಲರ್ಜಿಗಳ ಬಗ್ಗೆ ಗಮನಹರಿಸಿ:
ಅಲರ್ಜಿಗಳು ಮತ್ತು ಆಸ್ತಮಾದಂತಹ ಇತರ ಉಸಿರಾಟದ ತೊಂದರೆಗಳಿಂದ ಬಳಲುತ್ತಿರುವವರು ಆದಷ್ಟು ಸ್ವಚ್ಚತೆ ಕೆಲಸಗಳಿಂದ ದೂರವಿರಿ ಮತ್ತು ಆಸ್ತಮಾದ ಹೊರತಾಗಿ, ಉಸಿರಾಟದ ತೊಂದರೆ, ಶೀತ, ಜ್ವರ ಮತ್ತು ದೀರ್ಘಕಾಲದ ಉಬ್ಬಸದಿಂದ ಬಳಲುತ್ತಿದ್ದಾರೆ ಆದಷ್ಟು ದೂರವಿರಿ. ಎಕೆಂದರೆ ಧೂಳು ತೀವ್ರ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಈ ಹಬ್ಬದ ಸಮಯದಲ್ಲಿ ನಿಮ್ಮ ಮನೆಯನ್ನು ಪೂರ್ತಿಯಾಗಿ ಶುಚಿಗೊಳಿಸುವಾಗ ಅನುಸರಿಸಬೇಕಾದ ಪ್ರಮುಖ ಸಲಹೆಗಳು ಇಲ್ಲಿವೆ:
- ಸ್ವಚ್ಛಗೊಳಿಸುವಾಗ ಯಾವಾಗಲೂ ಮಾಸ್ಕ್ ಮತ್ತು ಕೈಗವಸು ಧರಿಸಿ
- ಇತರರಿಗೆ ಹಾನಿಯಾಗದಂತೆ ಕೀಟ ನಿವಾರಕಗಳನ್ನು ಸಿಂಪಡಿಸುವುದನ್ನು ಖಚಿತಪಡಿಸಿಕೊಳ್ಳಿ .
- ಸೋಂಕುನಿವಾರಕಗಳನ್ನು ಬಳಸುವಾಗ, ಅಡುಗೆಮನೆಯಲ್ಲಿ ಆಹಾರವನ್ನು ಮುಚ್ಚಿ ಮತ್ತು ಸಾಕುಪ್ರಾಣಿಗಳು ಮತ್ತು ಮಕ್ಕಳ ಬಗ್ಗೆ ಜಾಗ್ರತಿ ವಹಿಸಿ
Published On - 2:50 pm, Sun, 23 October 22