AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ನನಗೆ ಹೋಮ್​ವರ್ಕ್​ ವಾಸನೆ ಅಲರ್ಜಿ ಎಂದರೆ ಅಮ್ಮ ಒಪ್ಪುತ್ತಿಲ್ಲ, ಏನು ಮಾಡಲಿ?

Homework Allergy : ‘ಐದು ವರ್ಷಗಳಿಂದ ನಿನಗೆ ಈ ಅಲರ್ಜಿ ಇರಲಿಲ್ಲ. ಈ ವರ್ಷ ಇದ್ದಕ್ಕಿದ್ದಂತೆ ಇದೆಂಥದು, ಇದರ ಗುಣಲಕ್ಷಣಗಳೇನು?’ ಎಂದು ಅವನ ತಾಯಿ ಕೇಳಿದ್ದಕ್ಕೆ, ‘ಏಕೆಂದರೆ ಆಗ ಅದು ಕಾವು ಕೊಡುವಿಕೆಯ ಅವಧಿ ಆಗಿತ್ತು’ ಎಂದಿದ್ದಾನೆ.

Trending : ನನಗೆ ಹೋಮ್​ವರ್ಕ್​ ವಾಸನೆ ಅಲರ್ಜಿ ಎಂದರೆ ಅಮ್ಮ ಒಪ್ಪುತ್ತಿಲ್ಲ, ಏನು ಮಾಡಲಿ?
ನನಗಾಗಲ್ಲಪ್ಪಾ ಈ ಹೋಮ್ ವರ್ಕ್​ ವಾಸನೆ ಎನ್ನುವ ಚೀನಾಹುಡುಗ
TV9 Web
| Updated By: ಶ್ರೀದೇವಿ ಕಳಸದ|

Updated on:Sep 15, 2022 | 5:03 PM

Share

Trending : ಈತನಕ ನೀವು ಏನೆಲ್ಲ ಅಲರ್ಜಿಗಳನ್ನು ಕೇಳಿದ್ದೀರಿ, ಅನುಭವಿಸಿದ್ದೀರಿ. ಕೊನೆಗೆ ಅದು ಅಲರ್ಜಿ ಎಂದು ಗೊತ್ತಾದ ಮೇಲೆ ಅದರಿಂದ ದೂರ ಉಳಿದಿದ್ದೀರಿ ಅಥವಾ ಉಳಿಯುವ ಪ್ರಯತ್ನ ಮಾಡುತ್ತಿರುತ್ತೀರಿ. ಆದರೆ ಚೀನಾದ ಹನ್ನೊಂದು ವರ್ಷದ ಈ ಹುಡುಗ ತನಗೆ ಹೋಮ್​ವರ್ಕ್​ ವಾಸನೆ ಅಲರ್ಜಿ ಎಂದು ಹೇಳುವ ಮೂಲಕ ನೆಟ್ಟಿಗರನ್ನು ಅಚ್ಚರಿಗೂ, ನಗೆಗಡಲಿಗೂ ಬೀಳಿಸಿದ್ದಾನೆ. ಜಿಯಾಂಗ್ಸು ಪ್ರಾಂತ್ಯದ ಈ ಹುಡುಗನ ಹೆಸರು ಗೊತ್ತಿಲ್ಲ. ಈತ ಓದುತ್ತಿರುವುದು ಐದನೇ ತರಗತಿ. ತನಗೆ ಹೋಮ್​ವರ್ಕ್  ಅಲರ್ಜಿ ಎಂದು ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈತನ ತಾಯಿಯೇ ಇದನ್ನು ಚಿತ್ರೀಕರಿಸಿದ್ದಾರೆ.

ಮನೆಗೆಲಸದಿಂದ ತಪ್ಪಿಸಿಕೊಳ್ಳಲು ಅಳುವುದು, ಮೈಹುಷಾರಿಲ್ಲವೆಂಬಂತೆ ನಟಿಸುವುದು ಮತ್ತೀಗ ಹೋಮ್​ವರ್ಕ್​ ಎಂದರೆ ಅಲರ್ಜಿ ಎಂದು ಅಳುವುದನ್ನು ವಿಡಿಯೋದಲ್ಲಿ ಚಿತ್ರೀಕರಿಸಲಾಗಿದೆ. ‘ನಿನಗೇನು ಅಲರ್ಜಿ?’ ಎಂದು ಅವನ ತಾಯಿ ಕೇಳಿದಾಗ, ‘ನನಗೆ ಪುಸ್ತಕಗಳ ವಾಸನೆ ಅಲರ್ಜಿ’ ಎಂದಿದ್ದಾನೆ. ‘ಅಂದರೆ ಹೋಮ್​ವರ್ಕ್ ಮಾಡಲು ಆಗುವುದಿಲ್ಲ ಎಂದು ಹೇಳಲು ಇಚ್ಛಿಸುತ್ತೀದ್ದೀಯಾ?’ ಎಂದು ಪ್ರಶ್ನಿಸಿದಾಗ, ಟಿಶ್ಯೂ ಪೇಪರ್ ಅನ್ನು ಮುದ್ದೆ ಮಾಡಿ ಮೂಗಿಗೆ ಹಿಡಿದುಕೊಂಡಿದ್ದಾನೆ. ನಂತರ ಕೆನ್ನೆಗುಂಟ ನೀರಿಳಿಯಲಾರಂಭಿಸಿದೆ. ಅದರ ಬೆನ್ನ ಹಿಂದೆಯೇ ಸೀನತೊಡಗಿದ್ದಾನೆ. ನಂತರ ಅವನ ತಾಯಿ ಆಸ್ಪತ್ರೆಗೆ ಹೋಗೋಣ ಎಂದಿದ್ದಾಳೆ. ಆಗ ಬೇಡ ಬೇಡ ಎಂದಿದ್ದಾನೆ. ‘ಐದು ವರ್ಷಗಳಿಂದ ನಿನಗೆ ಈ ಅಲರ್ಜಿ ಇರಲಿಲ್ಲ. ಈ ವರ್ಷ ಇದ್ದಕ್ಕಿದ್ದಂತೆ ಇದೆಂಥದು, ಇದರ ಗುಣಲಕ್ಷಣಗಳೇನು?’ ಎಂದಿದ್ದಕ್ಕೆ, ‘ಏಕೆಂದರೆ ಆಗ ಅದು ಕಾವು ಕೊಡುವಿಕೆಯ ಅವಧಿ ಆಗಿತ್ತು’ ಎಂದಿದ್ದಾನೆ.

ತನ್ನ ಮಗ ಈ ರೀತಿ ವರ್ತಿಸುತ್ತಿರುವುದು ಇದು ಮೊದಲ ಬಾರಿಯೇನಲ್ಲ ಎಂದು ಹೇಳುತ್ತ, ಚಿಕ್ಕಂದಿನಿಂದಲೂ ಹೀಗೆ ಕಾಲ್ಪನಿಕ ಕಥೆಗಳನ್ನು ಸೃಷ್ಟಿಸಿಕೊಂಡು ಹೇಳುವ ರೂಢಿ ಇದೆ ಎಂಬ ವಿಷಯವನ್ನು ಆಕೆ ತೆರೆದಿಟ್ಟಿದ್ದಾಳೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಬಿದ್ದುಬಿದ್ದು ನಗುವಂತೆ ಮಾಡಿದೆ.

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಒಬ್ಬರು, ‘ಕಾವು ಕೊಡುವ ಅವಧಿ  ಐದು ವರ್ಷಗಳಷ್ಟು ದೀರ್ಘವಾಗಿತ್ತಾ?’ ಎಂದು ಕೇಳಿದ್ದಾರೆ. ‘ದೊಡ್ಡವನಾದ ಮೇಲೆ ಈತ ನಟನಾಗಲು ಅಡ್ಡಿಯಿಲ್ಲ’ ಎಂದಿದ್ದಾರೆ ಮತ್ತೊಬ್ಬರು. ಇನ್ನೊಬ್ಬರು, ‘ಇದು ತಮಾಷೆಯಾಗಿ ಕಾಣುತ್ತಿದ್ದರೂ ವಿಷಯ ಗಂಭೀರವಾಗಿದೆ. ಇತ್ತೀಚಿನ ಕೆಲ ಪುಸ್ತಕಗಳ ವಾಸನೆಗೆ ಸಂಬಂಧಿಸಿದಂತೆ ಇದು ನಿಜ. ನಾನಂತೂ ಇದನ್ನು ನಿಜವೆಂದು ನಂಬುತ್ತೇನೆ’ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಈತನ ತಾಯಿ ಬಹುಶಃ ವಿಡಿಯೋ ಡಿಲೀಟ್ ಮಾಡಿರುವ ಸಾಧ್ಯತೆ ಇದೆ.

ಈ ಅಲರ್ಜಿ ನಿಮಗೂ ಇತ್ತಾ? ನಿಮ್ಮ ಮಕ್ಕಳಿಗೂ ಇದೆಯಾ? ನಿಮ್ಮ ಅಭಿಪ್ರಾಯವೇನು? ಎಂಥ ಸಂದಿಗ್ಧದಿಂದ ಕೂಡಿದೆಯಲ್ವಾ ಈ ವಿಷಯ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:36 pm, Thu, 15 September 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ