Viral Video: ಸಿಂಹ ಬಂತೆಂದು ಸಣ್ಣ ಮರಕ್ಕೆ ಹತ್ತಿದ ಭೂಪ; RIP ಎಂದ ನೆಟ್ಟಿಗರು
ಅಯ್ಯಯ್ಯೋ ಸಿಂಹ ಬಂತು ಸಿಂಹ ಬಂತು... ಮರಕ್ಕೆ ಹತ್ತಿದ ವ್ಯಕ್ತಿಯನ್ನು ನೋಡಿದ ಸಿಂಹ ಅದೇ ಮರಕ್ಕೆ ಜಿಗಿದಿದೆ. ಮುಂದೆ ಏನಾಯ್ತು ಎಂದು ವಿಡಿಯೋ ನೋಡಿ.
ಪಾರ್ಟಿಗಳು ಜನರಿಗೆ ತ್ರಿಲ್ ಅನ್ನು ನೀಡುತ್ತದೆ, ಆದರೆ ಅದೇ ಪಾರ್ಟಿಗೆ ಮೃಗಗಳು ಎಂಟ್ರಿ ಕೊಟ್ಟರೆ ಅತಿಥಿಗಳ ಕಥೆ ಏನಾಗಬೇಡ ಹೇಳಿ? ಎದ್ದು ಬಿದ್ದು ಓಡುವುದು ಖಚಿತ. ಸದ್ಯ ಇಂತಹ ಒಂದು ಘಟನೆ ನಡೆದಿದ್ದು, ಇದರ ವಿಡಿಯೋ ಭಾರೀ ವೈರಲ್ ಆಗುವುದರ ಜೊತೆಗೆ ನೆಟ್ಟಿಗರನ್ನು ನಿಬ್ಬೆರಗಾಗಿಸಿದೆ. ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಸಿಂಹವೊಂದು ನುಗ್ಗಿದೆ. ಇದನ್ನು ನೋಡಿದ ಜನರು ಎದ್ದುಬಿದ್ದು ಓಡಿರಬಹುದೇನೋ, ವಿಡಿಯೋದಲ್ಲಿ ಈ ಸೀನ್ ಇಲ್ಲದಿದ್ದರೂ ವ್ಯಕ್ತಿಯೊಬ್ಬ ಸಿಂಹಕ್ಕೆ ಸುಲಭವಾಗಿ ತಗಲಾಕೊಂಡಿರುವುದನ್ನು ಮಾತ್ರ ನೋಡಬಹುದು.
ವೈರಲ್ ವಿಡಿಯೋದಲ್ಲಿ, ಸಣ್ಣ ಮರಗಳನ್ನು ಮಿಂಚರ್ ಬಲ್ಬ್ಗಳನ್ನು ಹಾಕಿ ಅಲಂಕರಿಸಲಾಗಿದ್ದು, ಪಾರ್ಟಿಯ ಸ್ಥಳದಂತೆ ಕಾಣುತ್ತದೆ. ಈ ಸ್ಥಳಕ್ಕೆ ಬಂದ ಸಿಂಹವೊಂದು ವ್ಯಕ್ತಿಯೊಬ್ಬನ್ನನ್ನು ಟಾರ್ಗೆಟ್ ಮಾಡಿದೆ. ಹೇಗೆಂದರೆ, ಸಿಂಹವನ್ನು ಕಂಡ ವ್ಯಕ್ತಿ ಅಲಂಕರಿಸಿದ ಎಂಟರಿಂದ ಒಂಬತ್ತು ಅಡಿ ಎತ್ತರದ ಮರಕ್ಕೆ ಹತ್ತಿದ್ದಾನೆ. ಇದನ್ನು ನೋಡಿದ ಸಿಂಹ ಮರದ ಮೇಲೆ ಜಿಗಿದು ಇನ್ನೇನು ವ್ಯಕ್ತಿಯ ಕಾಲಿಗೆ ಬಾಯಿ ಹಾಕಲಷ್ಟೇ ಬಾಕಿ. ಅಷ್ಟರಲ್ಲೇ ಪ್ರಾಣಭಯದಲ್ಲೇ ಆ ವ್ಯಕ್ತಿ ಕಾಲಿನಿಂದಲೇ ಸಿಂಹಕ್ಕೆ ತುಳಿಯಲು ಪ್ರಾರಂಭಿಸುತ್ತಾನೆ. ಇಲ್ಲಿಗೆ ವಿಡಿಯೋ ಮುಕ್ತಾಯಗೊಳ್ಳುತ್ತದೆ.
ಆ ವ್ಯಕ್ತಿ ಏನಾದಾ ಎಂಬುದು ವಿಡಿಯೋದಲ್ಲಿ ಇಲ್ಲವಾದರೂ ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ರಿಪ್ ಎಂದು ಕಾಮೆಂಟ್ ಮಾಡಿದ್ದಾರೆ. Lions.habitat ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 17 ಮಿಲಿಯನ್ಗೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ.
View this post on Instagram
ಮತ್ತಷ್ಟು ವೈರಲ್ ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published On - 9:58 pm, Thu, 15 September 22