Viral Video : ಸಿಂಹ ಹುಲಿಯ ಮಧ್ಯೆ ನಡೆದ ಈ ಕಾಳಗದಲ್ಲಿ ಯಾರು ಗೆಲ್ಲುತ್ತಾರೆ?

Lion Vs Tiger : ಹುಲಿ ಮತ್ತು ಸಿಂಹ ‘ಮಾಡು ಇಲ್ಲವೆ ಮಡಿ’ ಎಂಬಂತೆ ರೌದ್ರಾವತಾರಕ್ಕೆ ಇಳಿದಿವೆ. 38 ಮಿಲಿಯನ್ ಜನರು ಈ ವಿಡಿಯೋ ವೀಕ್ಷಿಸಿದ್ದರಿಂದ ಇದು ವೈರಲ್ ಆಗಿದೆ. 

Viral Video : ಸಿಂಹ ಹುಲಿಯ ಮಧ್ಯೆ ನಡೆದ ಈ ಕಾಳಗದಲ್ಲಿ ಯಾರು ಗೆಲ್ಲುತ್ತಾರೆ?
ಯಾರು ಗೆಲ್ಲುತ್ತಾರೆ ಇಲ್ಲಿ?
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 16, 2022 | 10:52 AM

Viral Video : ಈ ವಿಡಿಯೋದಲ್ಲಿ ಸಿಂಹ ಮತ್ತು ಹುಲಿಯ ಮಧ್ಯೆ ಕಾಳಗ ಶುರುವಾಗಿದೆ. ಸಿಂಹದ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡುತ್ತದೆ ಹುಲಿ. ಸಿಂಹ ಕಾಡಿನ ರಾಜ ಹಾಗಾಗಿ ಗೆಲ್ಲಬೇಕು ಎನ್ನುವುದು ಸಾಮಾನ್ಯ ನಿರೀಕ್ಷೆ. ಆದರೆ ಅನೇಕ ಸಂಶೋಧನಾ ವರದಿಗಳ ಪ್ರಕಾರ, ಹುಲಿಯು ಸಿಂಹದ ವಿರುದ್ಧ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಬೆಂಗಾಲ್​ ಹುಲಿ ಮತ್ತು ಆಫ್ರಿಕನ್​ ಸಿಂಹದ ನಡುವಿನ ಕಾಳಗದಲ್ಲಿ ಶೇ.90 ರಷ್ಟು ಹುಲಿಯೇ ಗೆಲ್ಲುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಸಿಂಹಕ್ಕಿಂತಲೂ ಹುಲಿ ಚುರುಕು. ಇವುಗಳು ಕಾದಾಟಕ್ಕೆ ಬಿದ್ದಾಗ ಹುಲಿಯ ಪಟ್ಟುಗಳು ಎಷ್ಟು ಬಲಿಷ್ಠ ಎನ್ನುವುದು ಅರಿವಿಗೆ ಬರುತ್ತದೆ.

ಹುಲಿಯು ಸಿಂಹಕ್ಕಿಂತ ಶೇ. 5 ರಷ್ಟು ಎತ್ತರ ಮತ್ತು ಶೇ. 8 ರಷ್ಟು ತೂಕದಲ್ಲಿ ಹೆಚ್ಚಿರುತ್ತದೆ. ಈ ವಿಡಿಯೋದಲ್ಲಿ ಹುಲಿ ಮತ್ತು ಸಿಂಹ ‘ಮಾಡು ಇಲ್ಲವೆ ಮಡಿ’ ಎಂಬಂತೆ ಬಿರುಸಿನಿಂದ ಕಾದಾಟಕ್ಕೆ ಬಿದ್ದಿವೆ. ‘ನೇಪಾಳ H2O’ ಚಾನೆಲ್ ಈ ವಿಡಿಯೋ ಅನ್ನು ಯೂಟ್ಯೂಬ್​ನಲ್ಲಿ ಹಂಚಿಕೊಂಡಿದೆ. 38 ಮಿಲಿಯನ್ ಜನರು ಈ ವಿಡಿಯೋ ವೀಕ್ಷಿಸಿದ್ದರಿಂದ ಇದು ವೈರಲ್ ಆಗಿದೆ.

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಎಂಥ ಉಗ್ರಕಾಳಗ! ಹುಲಿಯು ತನ್ನ ಮೇಲೆ ದಾಳಿ ಮಾಡಿದ ನಂತರ ಸಿಂಹವು ತನ್ನ ಉಗುರಿನಿಂದ ಹುಲಿಯ ಮೇಲೆ ಪ್ರತಿದಾಳಿ ಮಾಡುತ್ತದೆ. ಒಂದು ಹಂತದಲ್ಲಿ ಎರಡೂ ಓಡಿಹೋಗಲು ಪ್ರಯತ್ನಿಸುತ್ತವೆ. ಗಿಡಗಳನ್ನು ಏರಲು ನೋಡುತ್ತವೆ. ಆದರೆ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇಲ್ಲಿ ಉಳಿದಿರುವುದು ಒಂದೇ ಆಯ್ಕೆ, ಹೋರಾಟ ಮತ್ತು ಸಾವು. ಒಂದನ್ನೊಂದು ಕೊಲ್ಲುವ ಪ್ರಯತ್ನ ಮತ್ತೆ ಮುಂದುವರೆಯುತ್ತದೆ.

ಹುಲಿಗಿಂತ ಸಿಂಹವೇ ಹೆಚ್ಚು ದಾಳಿಗೆ ಒಳಗಾಗಿದೆ. ಅದರ ಮೈ ಮತ್ತು ಕಣ್ಣುಗಳೆಡೆ ಗಾಯಗಳನ್ನು ಕಾಣಬಹುದು. ಆದರೂ ಸುಧಾರಿಸಿಕೊಂಡು ಸಿಂಹ ಮತ್ತೆ ಹುಲಿಯ ಮೇಲೆ ದಾಳಿ ಮಾಡಲು ಶುರುಮಾಡುತ್ತದೆ. ಆಗ ಹುಲಿ ಪ್ರಜ್ಞೆ ತಪ್ಪುತ್ತದೆ. ಸೋಲನ್ನು ಒಪ್ಪಿಕೊಳ್ಳದ ಹುಲಿ ಮತ್ತೆ ಎದ್ದುನಿಲ್ಲುತ್ತದೆ. ಆದರೆ ಸಿಂಹ ಗಾಯಗಳನ್ನು ತಡೆದುಕೊಳ್ಳದೆ ಸುಸ್ತಾಗಿಬಿಡುತ್ತದೆ. ಇನ್ನು ಕಾದಾಟ ಸಾಧ್ಯವಿಲ್ಲ ಎಂದು ನಿರ್ಧರಿಸಿ ಸಿಂಹ ಓಡಿಹೋಗಿಬಿಡುತ್ತದೆ. ಹಾಗಿದ್ದರೆ ಗೆದ್ದವರು ಯಾರು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:50 am, Fri, 16 September 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ