AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಹೆಲ್ಮೆಟ್​ದೇವೋಭವ! ಈತ ಒಂದಲ್ಲ, ಎರಡು ಸಲ ಬದುಕಿದ ಕ್ಷಣಾರ್ಧದಲ್ಲಿ

Accident : ಫುಲ್ ಹೆಲ್ಮೆಟ್​ ಇಲ್ಲದಿದ್ದರೆ ಖಂಡಿತ ಈತ ಬದುಕುಳಿಯುತ್ತಿರಲಿಲ್ಲ. ದೆಹಲಿ ಪೊಲೀಸರು ಟ್ವೀಟ್ ಮಾಡಿದ ಈ ವಿಡಿಯೋ ಅನ್ನು 9 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ.

Viral Video : ಹೆಲ್ಮೆಟ್​ದೇವೋಭವ! ಈತ ಒಂದಲ್ಲ, ಎರಡು ಸಲ ಬದುಕಿದ ಕ್ಷಣಾರ್ಧದಲ್ಲಿ
ಹೆಲ್ಮೆಟ್​ ಇದ್ದಿದ್ದಕ್ಕೆ ಬಚಾವ್
TV9 Web
| Edited By: |

Updated on:Sep 16, 2022 | 12:50 PM

Share

Viral Video : ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಫುಲ್ ಹೆಲ್ಮೆಟ್​ಗಳನ್ನು ಧರಿಸುವುದರಿಂದ ಶೇ. 64ರಷ್ಟು ತೀವ್ರ ಗಾಯಗಳಿಂದಾಗುವ ಮರಣ ಮತ್ತು ಶೇ. 74 ರಷ್ಟು ಮೆದುಳಿಗೆ ಆಗುವ ಗಾಯಗಳಿಂದ ರಕ್ಷಿಸಿಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ಇಲ್ಲಿ ಪ್ರಸ್ತುಪಡಿಸುತ್ತಿರುವುದರ ಹಿನ್ನೆಲೆ, ಇಲ್ಲಿರುವ ವಿಡಿಯೋ ನೋಡಿದ ಮೇಲೆ ತಿಳಿಯುತ್ತದೆ.  ದೆಹಲಿ ಪೊಲೀಸರು ಟ್ವೀಟ್​ ಮಾಡಿರುವ ಅಪಘಾತದ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾರು ಮತ್ತು ಬೀದಿದೀಪದ ನಡುವೆ ರಭಸದಿಂದ ಹಾಯ್ದು ಹೋಗುವ ಬೈಕ್ ಸವಾರನೊಬ್ಬ ಅಪಘಾತಕ್ಕೆ ಈಡಾಗುತ್ತಾನೆ.  ಕ್ಷಣ ಮಾತ್ರದಲ್ಲಿ ಎರಡು ಸಲ ಅಪಘಾತಕ್ಕೆ ಒಳಗಾದರೂ ಬದುಕುಳಿಯುತ್ತಾನೆ!

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೆಲ್ಮೆಟ್ ಧರಿಸುವುದರಿಂದ ಒಮ್ಮೆ, ಎರಡು, ಮೂರು ಮತ್ತು ಅನೇಕ ಬಾರಿ ಜೀವ ಉಳಿಸಿಕೊಳ್ಳಬಹುದಾಗಿದೆ ಎಂಬ ಸಂದೇಶವನ್ನು ಈ ವಿಡಿಯೋ ಸಾರುತ್ತದೆ. 15 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ಕಾರಿನಿಂದ ತಪ್ಪಿಸಿಕೊಂಡು ಹೋದ ಬೈಕ್​ ಸವಾರ ಮೊದಲು ಡಿವೈಡರ್​ಗೆ ಅಪ್ಪಳಿಸುತ್ತಾನೆ. ನಂತರ ಎದ್ದೇಳುತ್ತಿದ್ದಂತೆ ಬೀದಿದೀಪ ನೇರ ಅವನ ತಲೆಗೇ ಅಪ್ಪಳಿಸುತ್ತದೆ. ಹೀಗೆ ಕ್ಷಣಾರ್ಧದಲ್ಲಿ ತಲೆಗೆ ಬಲವಾಗಿ ಎರಡು ಹೊಡೆತಗಳು ಬಿದ್ದರೂ ಈತ ಬದುಕುಳಿಯುತ್ತಾನೆ ಎಂದರೆ ಅದು ಅವನು ಧರಿಸಿದ ಫುಲ್​ ಹೆಲ್ಮೆಟ್​ನಿಂದಾಗಿ.

ಈ ವಿಡಿಯೋ ಅನ್ನು 9 ಮಿಲಿಯನ್​ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. 33,000ಕ್ಕೂ ಹೆಚ್ಚು ಲೈಕ್ಸ್​ ಮತ್ತು 6,000ಕ್ಕೂ ಹೆಚ್ಚು ರೀಟ್ವೀಟ್​ ಆಗಿದೆ.

ನೆನಪಿರಲಿ ಫುಲ್​ ಹೆಲ್ಮೆಟ್​ ಧರಿಸುವುದು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:45 pm, Fri, 16 September 22

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?