Viral Video : ಚಲಿಸುತ್ತಿರುವ ರೈಲಿನ ಬೆನ್ನುಹತ್ತಿದ ಡಂಝೋ ಡೆಲಿವರಿ ಏಜೆಂಟ್, ಡಿಡಿಎಲ್​ಜೆ ಭಾಗ 2 ಎಂದ ನೆಟ್ಟಿಗರು

Dunzo : ‘ಪುಷ್ಪಾ ಝುಕೇಗಾ ನಹೀಂ, ಡಂಝೋ ರುಕೇಗಾ ನಹೀಂ’ ಶೀರ್ಷಿಕೆಯಡಿ ವೈರಲ್ ಭಯಾನಿ ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 1.2 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ.

Viral Video : ಚಲಿಸುತ್ತಿರುವ ರೈಲಿನ ಬೆನ್ನುಹತ್ತಿದ ಡಂಝೋ ಡೆಲಿವರಿ ಏಜೆಂಟ್, ಡಿಡಿಎಲ್​ಜೆ ಭಾಗ 2 ಎಂದ ನೆಟ್ಟಿಗರು
ಚಲಿಸುತ್ತಿರುವ ರೈಲಿನೊಂದಿಗೆ ಓಡಿದ ಡೆಲಿವರಿ ಏಜೆಂಟ್
Follow us
TV9 Web
| Updated By: ಶ್ರೀದೇವಿ ಕಳಸದ

Updated on: Sep 16, 2022 | 3:54 PM

Viral Video : ಆನ್​ಲೈನ್​ ಶಾಪಿಂಗ್​ನಿಂದ ಬಹಳಷ್ಟು ಜನರಿಗೆ ಅನುಕೂಲವಾಗಿದೆ. ಡಂಝೋನಂತಹ ಅಪ್ಲಿಕೇಶನ್​ಗಳಿಂದಾಗಿ ಮಹಾನಗರವಾಸಿಗಳಿಗೆ ಮನೆಬಾಗಿಲಿಗೇ ದಿನಸಿ ಮತ್ತು ಇತರೇ ಅತ್ಯಗತ್ಯ ವಸ್ತುಗಳು ತ್ವರಿತ ಗತಿಯಲ್ಲಿ ತಲುಪುತ್ತಿರುವುದರಿಂದ ಸಮಯದ ಉಳಿತಾಯವಾಗುತ್ತಿದೆ. ಶ್ರಮವೂ ಕಡಿಮೆಯಾಗುತ್ತಿದೆ. ಇಲ್ಲಿರುವ ವಿಡಿಯೋ ಗಮನಿಸಿ. ರೈಲಿನಲ್ಲಿದ್ದ ಮಹಿಳೆಗೆ ಆರ್ಡರ್​ ಮಾಡಿದ ಸಾಮಾನನ್ನು ತಲುಪಿಸಲು ಡಂಝೋ ಡೆಲಿವರಿ ರೈಲ್ವೇ ಸ್ಟೇಷನ್​ಗೆ ಬರುತ್ತಾರೆ. ಅಷ್ಟರಲ್ಲಿ ರೈಲು ಚಲಿಸಿಬಿಡುತ್ತದೆ. ಆಗ ಸುಮ್ಮನೆ ನಿಲ್ಲುವ ಬದಲು, ಏಜೆಂಟ್ ಓಡಲು ಶುರುಮಾಡುತ್ತಾರೆ. ಈ ದೃಶ್ಯವನ್ನು ಡಿಡಿಎಲ್​ಜೆ ಭಾಗ 2 ಎಂದು ಕರೆದಿದ್ದಾರೆ ನೆಟ್ಟಿಗರು.

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Viral Bhayani (@viralbhayani)

‘ಪುಷ್ಪಾ ಝುಕೇಗಾ ನಹೀಂ, ಡಂಝೋ ರುಕೇಗಾ ನಹೀಂ’ ಶೀರ್ಷಿಕೆಯಡಿ ವೈರಲ್ ಭಯಾನಿ ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 1.2 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 70,000ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ.

ಆರ್ಡರ್ ಮಾಡಿದ ವಸ್ತು ಪಡೆಯುತ್ತಿದ್ದಂತೆ ಈ ಮಹಿಳೆ ಖುಷಿಯಿಂದ ಕೈಬೀಸಿ ಧನ್ಯವಾದ ತಿಳಿಸುತ್ತಾಳೆ. ಈ ರೀಲಿಗೆ ‘ತುಜೆ ದೇಖಾ ತೋ ಯೇ ಜಾನಾ ಸನಮ್’ ಹಾಡು ಅಳವಡಿಸಲಾಗಿದೆ. ನೆಟ್ಟಿಗರು ಈ ದೃಶ್ಯವನ್ನು ನೋಡಿ, ಇದು ಡಿಡಿಎಲ್​ಜೆ ಭಾಗ 2 ಎಂದಿದ್ದಾರೆ.

ಈ ದೃಶ್ಯವನ್ನು ನಾನು ಬಹುವಾಗಿ ಮೆಚ್ಚಿದ್ದೇನೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, ಹೀಗೆಲ್ಲ ಮಾಡುವ ಇವರು ಪ್ರಚಾರ ಪಡೆದುಕೊಳ್ಳಲು ಅರ್ಹರು ಎಂದು ಟೀಕಿಸಿದ್ದಾರೆ. ಮತ್ತೊಬ್ಬರು ಡಂಝೋ ಈ ವಿಡಿಯೋವನ್ನು ತನ್ನ ಜಾಹೀರಾತಿಗಾಗಿ ಉಪಯೋಗಿಸಿಕೊಳ್ಳಬಹುದು ಎಂದಿದ್ದಾರೆ. ಇದು ಮಾರ್ಕೆಟಿಂಗ್ ಸ್ಟ್ರ್ಯಾಟಜಿ ಎಂದು ಕಾಲೆಳೆದಿದ್ದಾರೆ ಮಗದೊಬ್ಬರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ