AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮಹಿಳೆಯ ಕಾರು ಕದಿಯಲು ಬಂದ ಕಳ್ಳ, ಅಷ್ಟರಲ್ಲೇ ಎಂಟ್ರಿ ಕೊಟ್ಟ ಹೀರೋ; ಮುಂದೆ ಆಗಿದ್ದೇ ಬೇರೆ

ಮಹಿಳೆ ಮತ್ತು ಆಕೆಯ ಮಗುವನ್ನು ರಕ್ಷಿಸಲು ಕಾರು ಕಳ್ಳನೊಂದಿಗೆ ಫೈಟ್ ಮಾಡಿದ ಯುಎಸ್ ರೆಸ್ಟೊರೆಂಟ್ ಸಿಬ್ಬಂದಿಯೊಬ್ಬರು ಜನರ ಪಾಲಿಗೆ ಹೀರೋ ಆಗಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

Viral Video: ಮಹಿಳೆಯ ಕಾರು ಕದಿಯಲು ಬಂದ ಕಳ್ಳ, ಅಷ್ಟರಲ್ಲೇ ಎಂಟ್ರಿ ಕೊಟ್ಟ ಹೀರೋ; ಮುಂದೆ ಆಗಿದ್ದೇ ಬೇರೆ
ಕಾರು ಕಳ್ಳನೊಂದಿಗೆ ಹೋರಾಡಿದ ಯುಎಸ್ ರೆಸ್ಟೋರೆಂಟ್ ಸಿಬ್ಬಂದಿ
TV9 Web
| Edited By: Rakesh Nayak Manchi|

Updated on:Sep 17, 2022 | 7:28 AM

Share

ಕಾರು ಕಳ್ಳನಿಂದ ಮಹಿಳೆ ಮತ್ತು ಆಕೆಯ ಮಗುವನ್ನು ರಕ್ಷಿಸಿದ ನಂತರ ಯುಎಸ್‌ನಲ್ಲಿ ರೆಸ್ಟೋರೆಂಟ್ ಸಿಬ್ಬಂದಿಯೊಬ್ಬರು ಹೀರೋ ಆಗಿದ್ದಾರೆ. ಫ್ಲೋರಿಡಾದ ಫೋರ್ಟ್ ವಾಲ್ಟನ್ ಬೀಚ್‌ನಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ. ಒಕಲೂಸಾ ಕೌಂಟಿ ಶೆರಿಫ್ ಕಚೇರಿಯು ಟ್ವಿಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ವಿಡಿಯೋ ಕೂಡ ಹಂಚಿಕೊಂಡಿದೆ.

ಕೌಂಟಿ ಶೆರಿಫ್ ಬಿಡುಗಡೆ ಮಾಡಿದ ಒಂದು ನಿಮಿಷದ ವೀಡಿಯೊದಲ್ಲಿ ರೆಸ್ಟೋರೆಂಟ್ ಸಿಬ್ಬಂದಿ ಕಳ್ಳನೊಂದಿಗೆ ಹೋರಾಡುತ್ತಾ ಕಾರಿನಿಂದ ಹೊರಕ್ಕೆ ಎಳೆದ ನೆಲದಲ್ಲೂ ಹೋರಾಡಿದ್ದಾರೆ. ಘಟನೆಯ ವಿಡಿಯೋವನ್ನು ಹತ್ತಿರದ ವಾಹನದಿಂದ ತೆಗೆಯಲಾಗಿದೆ. ಸಿಬ್ಬಂದಿಯ ಸಾಹಸದ ವೇಳೆ ಸ್ಥಳದಲ್ಲಿ ಜನರು ಜಮಾಯಿಸಿದರು. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 7.9 ಮಿಲಿಯನ್​ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ 34,000ಕ್ಕೂ ಹೆಚ್ಚು ಲೈಕ್‌ಗಳನ್ನು ಮತ್ತು 5,000 ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಸ್ವೀಕರಿಸಿದೆ.

ಟ್ವಿಟರ್ ಬಳಕೆದಾರರು ರೆಸ್ಟೋರೆಂಟ್ ಕೆಲಸಗಾರನ ಧೈರ್ಯವನ್ನು ಶ್ಲಾಘಿಸಿದ್ದಾರೆ. ವೀಡಿಯೊ ಕುರಿತು ಕಾಮೆಂಟ್ ಮಾಡಿದ ಬಳಕೆದಾರರೊಬ್ಬರು, “ನಾನು ನೂರು ಬಾರಿ ಹೇಳುತ್ತೇನೆ: ಚಿಕ್ ಫಿಲ್ ರೆಸ್ಟೋರೆಂಟ್ ಉತ್ತಮ ಗ್ರಾಹಕ ಸೇವೆಯನ್ನು ಹೊಂದಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿ ಸಿಬ್ಬಂದಿಯನ್ನು ಹೀರೋ ಎಂದು ಕರೆದಿದ್ದಾರೆ. ಹೀರೋ ಕಳ್ಳನ ವಿರುದ್ದ ಹೋರಾಡುವ ಮುನ್ನ ಆಗಿದ್ದೇನು?

ಡಿಫುನಿಯಾಕ್ ಸ್ಪ್ರಿಂಗ್ಸ್‌ನಲ್ಲಿರುವ ವಿಕ್ಲಿಯಮ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಾರು ಕಳ್ಳ ಚಿಕ್-ಫಿಲ್-ಎ ರೆಸ್ಟೋರೆಂಟ್‌ನ ಹೊರಗೆ ಮಹಿಳೆಯಿಂದ ಕಾರಿನ ಕೀ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಶಸ್ತ್ರಸಜ್ಜಿತ ಕಳ್ಳನನ್ನು ಕಂಡು ಕಿರುಚಿದಳು. ಕೂಡಲೆ ಧೈರ್ಯ ತೋರಿದ ರೆಸ್ಟೋರೆಂಟ್ ಸಿಬ್ಬಂದಿ ಮಹಿಳೆಯ ನೆರವಿಗೆ ದಾವಿಸಿದ್ದಾರೆ. ಘಟನೆಯ ನಂತರ, ಚಿಕ್-ಫಿಲ್-ಎ ರೆಸ್ಟೋರೆಂಟ್‌ನ ಫೇಸ್‌ಬುಕ್ ಪುಟದಲ್ಲಿ ಸಿಬ್ಬಂದಿಯ ಫೋಟೋ ಹಂಚಿಕೊಂಡು “ಇವರೇ ಹೀರೋ! ಇವರು ಮೈಕೆಲ್ ಗಾರ್ಡನ್!” ಎಂದು ಬರೆಯಲಾಗಿದೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 7:26 am, Sat, 17 September 22

Follow Us
TV9 Web
TV9 Web

TV9 Kannada

Read More
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!