AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಅಪ್ಪ ಕೊಟ್ಟ ಉಡುಗೊರೆಯಿಂದ ಹನಿಗಣ್ಣಾದ ಈ ಬಾಲೆ

Special Gift : ಅಪ್ಪ ಮೊದಲು ಆಟಿಕೆಯ ನಾಯಿಯನ್ನು ಮಗಳ ಕೈಗಿಡುತ್ತಾರೆ, ಖುಷಿಯಿಂದ ಮುದ್ದಿಸುತ್ತಾಳೆ. ನಂತರ ಜೀವಂತ ನಾಯಿಮರಿಯನ್ನು ಕೊಡುತ್ತಾರೆ, ಆಗ?; ಈ ವಿಡಿಯೋ 5 ಮಿಲಿಯನ್​ಗಿಂತಲೂ ಹೆಚ್ಚು ವೀಕ್ಷಕರನ್ನು ಸೆಳೆದಿದೆ.

Viral Video : ಅಪ್ಪ ಕೊಟ್ಟ ಉಡುಗೊರೆಯಿಂದ ಹನಿಗಣ್ಣಾದ ಈ ಬಾಲೆ
ಅಪ್ಪ ಕೊಟ್ಟ ಗಿಫ್ಟ್​ ಇದೇ
TV9 Web
| Updated By: ಶ್ರೀದೇವಿ ಕಳಸದ|

Updated on:Sep 16, 2022 | 2:44 PM

Share

Viral Video  : ಮಕ್ಕಳನ್ನು ಹೇಗೆ ಖುಷಿಪಡಿಸಬೇಕು, ಅವರ ಆಸೆ ಆಕಾಂಕ್ಷೆಗಳನ್ನು ಹೇಗೆ ಈಡೇರಿಸಬೇಕು ಎಂದು ಸದಾ ಯೋಚಿಸುತ್ತಲೇ ಇರುತ್ತಾರೆ ಈಗಿನ ಅಪ್ಪ-ಅಮ್ಮ. ಆಗಾಗ ಅವರಿಗಿಷ್ಟವಾದ ಉಡುಗೊರೆಗಳನ್ನು ಕೊಟ್ಟು ಅವರ ಮುಖದಲ್ಲಿ ನಗು ಅರಳುವುದನ್ನು ಕಾಣುವ ಸಾರ್ಥಕತೆಗಾಗಿ ಹಂಬಲಿಸುತ್ತಿರುತ್ತಾರೆ. ಆದರೆ ಉಡುಗೊರೆಗಳ ಆಯ್ಕೆ ತುಂಬಾ ಮುಖ್ಯ. ಒಂದು ವಸ್ತುರೂಪದ ಉಡುಗೊರೆ ಇನ್ನೊಂದು ಜೀವಪರ ಉಡುಗೊರೆ. ವಸ್ತುರೂಪದ ಉಡುಗೊರೆಗಳನ್ನು ಕೊಡುವುದರಿಂದ ಪೋಷಕರೇ ಮಕ್ಕಳನ್ನು ಕೊಳ್ಳುಬಾಕುತನ ಸಂಸ್ಕೃತಿಗೆ ತಳ್ಳಿದಂತೆ ಆಗುತ್ತದೆ. ಇನ್ನು ಜೀವಪರ ಉಡುಗೊರೆಗಳನ್ನು ಕೊಟ್ಟಾಗ ಮಕ್ಕಳಲ್ಲಿ ಅನುಕಂಪ, ಸಹಾನುಭೂತಿ, ಸಹಾಯಗುಣದಂತ ಮಾನವೀಯ ಅಂಶಗಳನ್ನು ಮೈಗೂಡಿಸಿದಂತೆ ಆಗುತ್ತದೆ. ಇಲ್ಲಿರುವ ಈ ವಿಡಿಯೋ ಜೀವಪರ ಉಡುಗೊರೆಗೆ ಉದಾಹರಣೆ.

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Pubity (@pubity)

ಬ್ರೆನ್ನಾಳ ಅಪ್ಪ ಸೇನೆಯಲ್ಲಿ ಕೆಲಸ ಮಾಡುತ್ತಾರೆ. ಮೊದಲು ಒಂದು ಟೆಡ್ಡಿನಾಯಿಯನ್ನು ಉಡುಗೊರೆ ಕೊಟ್ಟಾಗ ಆಕೆ ಖುಷಿಪಡುತ್ತಾಳೆ. ಕೆಲ ಕ್ಷಣಗಳಲ್ಲಿಯೇ ಕಾರಿನಿಂದ ಮುದ್ದಾದ ಕಪ್ಪು ನಾಯಿಮರಿಯನ್ನು ಅವಳ ಕೈಗಿಡುತ್ತಾರೆ. ಅಚ್ಚರಿಯಿಂದ ಖುಷಿಯಿಂದ ಆಕೆ ಕಣ್ಣೀರಾಗುತ್ತಾಳೆ. ಏಕೆಂದರೆ ಈ ಉಡುಗೊರೆಯನ್ನು ಆಕೆ ನಿರೀಕ್ಷಿಸಿಯೇ ಇರಲಿಲ್ಲ!

ಬಾಲೆಯ ತಾಯಿ ಜೆನ್ನಿಫರ್ ಕ್ವಾಂಡೆ ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಇದು 5 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಅನೇಕರು ವಿಧವಿಧವಾಗಿ ಪ್ರತಿಕ್ರಿಯಿಸಿದ್ದಾರೆ.

‘ಜೀವಂತ ನಾಯಿಮರಿ ಸಿಗುತ್ತಿದ್ದಂತೆ ಆಟಿಕೆನಾಯಿಯನ್ನು ಅವಮಾನಿಸಿದ್ದಾಳೆ’ ಎಂದು ಒಬ್ಬರು ನಗುತ್ತ ಹೇಳಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ, ‘ಆಟಿಕೆನಾಯಿ ಕೊಟ್ಟಾಗಲೂ ಅಷ್ಟೇ ಪ್ರೀತಿಯಿಂದ ಅಚ್ಚರಿ ವ್ಯಕ್ತಪಡಿಸಿರುವುದ ನನಗಂತೂ ಖುಷಿ ತಂದಿದೆ’ ಎಂದಿದ್ದಾರೆ ಮತ್ತೊಬ್ಬರು. ‘ಈ ವಿಡಿಯೋ ತುಂಬಾ ಅದ್ಭುತವಾಗಿದೆ. ಇಂಥ ವಿಡಿಯೋಗಳು ಬೇಕು’ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.

3 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ನೀವೂ ಯೋಚಿಸುತ್ತೀರಲ್ಲವೆ? ನಿಮ್ಮ ಮಕ್ಕಳಿಗೆ ಏನು ಇಷ್ಟ, ಏನು ಉಡುಗೊರೆ ಕೊಟ್ಟರೆ ಅದು ಅವರ ಮಾನಸಿಕ ಹೇಗೆ ಪೂರಕವಾಗುತ್ತದೆ ಎಂದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:44 pm, Fri, 16 September 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ