Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲಿ ಕಾಟಕ್ಕೆ ಮನೆಮದ್ದು: ಇಲಿಗಳನ್ನು ಮನೆಯಿಂದ ಹೊರಹಾಕುವುದು ಹೇಗೆ? ಇಲ್ಲಿದೆ ಕೆಲವೊಂದು ಟಿಪ್ಸ್​

ಇಲಿಗಳ ಕಾಟ ತಾಳಲಾಗದೆ ಅಯ್ಯೋ ಏನಪ್ಪಾ ಮಾಡುವುದು ಈಗ ಎಂದು ಅಂದುಕೊಳ್ಳುವವರಿಗೆ ಇಲಿಗಳ ಕಾಟ ತಪ್ಪಿಸಲು ಕೆಲವೊಂದು ಟಿಪ್ಸ್​ಗಳು ಇಲ್ಲಿವೆ ನೋಡಿ.

ಇಲಿ ಕಾಟಕ್ಕೆ ಮನೆಮದ್ದು: ಇಲಿಗಳನ್ನು ಮನೆಯಿಂದ ಹೊರಹಾಕುವುದು ಹೇಗೆ? ಇಲ್ಲಿದೆ ಕೆಲವೊಂದು ಟಿಪ್ಸ್​
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: Jul 12, 2022 | 6:45 AM

ಇಲಿಗಳು (Rats) ಮನೆಗೆ ನುಗ್ಗಿದರೆ ಸಾಕು ತರಕಾರಿಗಳು ಮಾಯವಾಗುತ್ತವೆ, ಬಟ್ಟೆಗಳು ಪೀಸ್​ಪೀಸ್ ಆಗುತ್ತವೆ. ಹಂಚಿನ ಮನೆಯಾಗಿದ್ದರೆ ಅಡುಗೆ ಮನೆಯಲ್ಲಿ ಅಥವಾ ಸ್ಟಾಕ್ ರೂಮ್​ನಲ್ಲಿ ಯಾವುದಾದರೊಂದು ವಸ್ತು ತೆಗೆದರೆ ಸಾಕು ಇಲಿಯೊಂದು ಛಂಗನೇ ಹಾರಿ ಹೋಗುತ್ತದೆ. ಈ ವೇಳೆ ಹುಡುಯಿಯರಾದರೆ ಅಥವಾ ಮಹಿಳೆಯರಾದರೆ ಭಯದಿಂದ ಕೈಯಲ್ಲಿದ್ದ ಡಬ್ಬವನ್ನು ಕೆಳಗೆ ಬಿಡುವ ಸ್ಥಿತಿ. ಇಲಿಗಳ ಕಾಟ ತಾಳಲಾಗದೆ ಅಯ್ಯೋ ಏನಪ್ಪಾ ಮಾಡುವುದು ಈಗ ಎಂದು ಅಂದುಕೊಳ್ಳುವವರಿಗೆ ಇಲಿಗಳ ಕಾಟ ತಪ್ಪಿಸುವುದು ಹೇಗೆ ಎಂದು ತಿಳಿಸುತ್ತೇವೆ. ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

ಇದನ್ನೂ ಓದಿ: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ತಜ್ಞರ ಸಲಹೆ ಏನು? ಇಲ್ಲಿದೆ ಮಾಹಿತಿ

  1. ಈರುಳ್ಳಿಯ ವಾಸನೆ ಅಂದರೆ ಇಲಿಗಳಿಗೆ ಆಗಿಬರುವುದಿಲ್ಲ, ಏಕೆಂದರೆ ಅದು ಅವುಗಳಿಗೆ ವಿಷಕಾರಿಯಾಗಿದೆ. ಇಲಿಗಳು ಓಡಾಡುವ ಜಾಗದಲ್ಲಿ ಈರುಳ್ಳಿಯನ್ನು ಸುಲಿದು ಇಡಬಹುದು. ಅದಾಗ್ಯೂ ಪ್ರತಿದಿನ ಈರುಳ್ಳಿಯನ್ನು ಬದಲಾಯಿಸುತ್ತಿರಬೇಕು.
  2. ಇಲಿಗಳು ಮತ್ತು ಕೀಟಗಳನ್ನು ನಿವಾರಿಸಲು ಕೆಂಪು ಮೆಣಸಿನಕಾಯಿ ಅನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತದೆ. ಇಲಿಗಳು ಎಲ್ಲಿಂದ ಬರುತ್ತವೆ ಮತ್ತು ಅವುಗಳ ಅಡಗುದಾಣ ಎಲ್ಲಿದೆಯೋ ಅಲ್ಲಿಗೆ ಕೆಂಪು ಮೆಣಸಿನಕಾಯಿಯ ಪುಡಿಯನ್ನು ಸಿಂಪಡಿಸಿ.
  3. ಇಲಿಗಳನ್ನು ಕೊಲ್ಲಲು ಬೆಳ್ಳುಳ್ಳಿ ಪರಿಣಾಮಕಾರಿಯಾಗಿದೆ. ಬೆಳ್ಳುಳ್ಳಿಯನ್ನು ಸಣ್ಣದಾಗಿ ಕೊಚ್ಚಿದ ನೀರಿನಲ್ಲಿ ಮಿಶ್ರಣ ಮಾಡಿ. ಅಥವಾ ಬೆಳ್ಳುಳ್ಳಿಯ ಮೊಗ್ಗುಗಳನ್ನು ಅವುಗಳು ಬರುವ ಜಾಗದಲ್ಲಿ ಇಡಬಹುದು.
  4. ಇಲಿಗಳನ್ನು ಓಡಿಸಲು ಲವಂಗ ಅಥವಾ ಲವಂಗದ ಎಣ್ಣೆಯನ್ನು ಸಹ ಬಳಸಬಹುದು. ಲವಂಗದ ಮೊಗ್ಗುಗಳನ್ನು ಮಸ್ಲಿನ್ ಬಟ್ಟೆಯಲ್ಲಿ ಸುತ್ತಿ ಅಲ್ಲಿ ಇಲ್ಲಿ ಇಟ್ಟುಕೊಳ್ಳಿ. ಲವಂಗದ ಎಣ್ಣೆಯನ್ನು ಸಹ ಅದೇ ರೀತಿಯಲ್ಲಿ ಬಳಸಬಹುದು.
  5. ಪುದೀನಾ ವಾಸನೆಯನ್ನು ಇಲಿಗಳು ಸಹಿಸುವುದಿಲ್ಲ. ಹೀಗಾಗಿ ಕಾಟನ್ ಉಣ್ಣೆಯಲ್ಲಿ ಪುದೀನಾ ಹಾಕಿ ಇಲಿಗಳು ಓಡಾಡುವ ಜಾಗದಲ್ಲಿ ಬಿಡಿ. ಇಲಿಗಳು ಸ್ವತಃ ಓಡಿಹೋಗಲು ಪ್ರಾರಂಭಿಸುತ್ತವೆ.

ಗಮನಿಸಿ: ಸಲಹೆಗಳು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಟಿವಿ9 ಹೇಳಿಕೊಳ್ಳುವುದಿಲ್ಲ.

ಇದನ್ನೂ ಓದಿ: High Uric Acid: ಯೂರಿಕ್ ಆಸಿಡ್ ಮಟ್ಟ ಹೆಚ್ಚಾದರೆ ತೊಂದರೆ ನಿಶ್ಚಿತ, ಯೂರಿಕ್ ಆಸಿಡ್ ಮಟ್ಟ ಕಡಿಮೆ ಮಾಡಲು ಇಲ್ಲಿವೆ ಕೆಲವು ಸಲಹೆಗಳು

ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ