Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ತಜ್ಞರ ಸಲಹೆ ಏನು? ಇಲ್ಲಿದೆ ಮಾಹಿತಿ

How to Boost Immune System: ವರದಿಯ ಪ್ರಕಾರ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಆರೋಗ್ಯಕರ ಜೀವನಶೈಲಿಯು ಅತ್ಯಂತ ಮುಖ್ಯವಾಗಿದೆ.

ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ತಜ್ಞರ ಸಲಹೆ ಏನು? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 11, 2022 | 7:35 AM

ಭಾರತದಲ್ಲಿ ಸದ್ಯ ಮಳೆಗಾಲ (Rainy Season) ಶುರುವಾಗಿದೆ. ಅದರೊಂದಿಗೆ ರೋಗಗಳು ಹರಡುವ ಅಪಾಯವೂ ಕೂಡ ಹೆಚ್ಚಾಗಿದ್ದು, ಮಳೆಗಾಲದಲ್ಲಿ ರೋಗನಿರೋಧಕ (Immunity) ಶಕ್ತಿ ಕಡಿಮೆಯಾಗಿ ರೋಗಗಳಿಗೆ ತುತ್ತಾಗುತ್ತಾರೆ. ಈ ಕಾರಣಕ್ಕೆ ಆರೋಗ್ಯ ತಜ್ಞರು ಈ ಮಳೆಗಾಲದಲ್ಲಿ ನಮ್ಮ ಜೀವನಶೈಲಿಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಅಥವಾ ಅಳವಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಇದು ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಇದಕ್ಕಾಗಿ ಆಹಾರ ಮತ್ತು ಪಾನೀಯದ ಬಗ್ಗೆ ಕಾಳಜಿ ವಹಿಸುವುದು ಸಹ ಮುಖ್ಯವಾಗಿದೆ. ಇಂದು ನಾವು ನೈಸರ್ಗಿಕ ರೀತಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಅಥವಾ ಬಲಪಡಿಸಲು ಕೆಲವು ಸುಲಭ ಮಾರ್ಗಗಳು ಇಲ್ಲಿವೆ. ಮುಂದೆ ಓದಿ.

ಇದನ್ನೂ ಓದಿ: ಕಲ್ಲಿನ ಪುಡಿಗಿಂತ ಅಕ್ಕಿ ಹಿಟ್ಟಿನಲ್ಲಿ ರಂಗೋಲಿ ಬಿಡಿಸಿದರೆ ಹೇಗೆ? ಇದರಿಂದ ಆಗುವ ಪ್ರಯೋಜನಗಳು ಇಲ್ಲಿವೆ

ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಹೇಗೆ?

ಒಂದು ವರದಿಯ ಪ್ರಕಾರ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಆರೋಗ್ಯಕರ ಜೀವನಶೈಲಿಯು ಅತ್ಯಂತ ಮುಖ್ಯವಾಗಿದೆ. ಸಮಯಕ್ಕೆ ಸರಿಯಾಗಿ ಮಲಗುವುದು ಮತ್ತು ಏಳುವುದು, ವ್ಯಾಯಾಮ ಮಾಡುವುದು ಮತ್ತು ಸಮತೋಲಿತ ಆಹಾರವನ್ನು ತೆಗೆದುಕೊಳ್ಳುವುದು ಅತ್ಯಂತ ಪ್ರಮುಖ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಥವಾ ಬಲಪಡಿಸಲು ಕೆಟ್ಟ ಚಟಗಳಿಂದ ದೂರವಿರಬೇಕು. ಹಣ್ಣುಗಳು ಮತ್ತು ತರಕಾರಿಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ನಿಮ್ಮ ತೂಕವನ್ನು ನಿಯಂತ್ರಿಸುವುದು ಒಳ್ಳೆಯದು. ಪ್ರತಿದಿನ ಕನಿಷ್ಠ 7-8 ಗಂಟೆಗಳ ಕಾಲ ನಿದ್ದೆ ಮಾಡುವುದು ಸಹ ಮುಖ್ಯ. ಯಾವುದೇ ರೀತಿಯ ಸೋಂಕನ್ನು ತಪ್ಪಿಸಲು ಕೈಗಳನ್ನು ಆಗಾಗ್ಗೆ ತೊಳೆಯಬೇಕು.

ಇದನ್ನೂ ಓದಿ: High Uric Acid: ಯೂರಿಕ್ ಆಸಿಡ್ ಮಟ್ಟ ಹೆಚ್ಚಾದರೆ ತೊಂದರೆ ನಿಶ್ಚಿತ, ಯೂರಿಕ್ ಆಸಿಡ್ ಮಟ್ಟ ಕಡಿಮೆ ಮಾಡಲು ಇಲ್ಲಿವೆ ಕೆಲವು ಸಲಹೆಗಳು

ತಜ್ಞರು ಹೇಳುವುದು ಏನು? 

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಥವಾ ಬಲಪಡಿಸಲಿರುವ ಪ್ರಮುಖ ಮಾರ್ಗವೆಂದರೇ ಅದು ನಾವು ಸೇವಿಸುವ ಆಹಾರ. ಪ್ರತಿನಿತ್ಯ ಪೌಷ್ಟಿಕಾಂಶ ಹೊಂದಿರುವ ಆಹಾರಗಳನ್ನು ಸೇವಿಸುವುದರೊಂದಿಗೆ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಅದರೊಂದಿಗೆ ಆಹಾರದಲ್ಲಿ ಶುಂಟಿ, ಬೆಳ್ಳುಳ್ಳಿ, ನಿಂಬೆರಸವನ್ನು ಉಪಯೋಗಿಸುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತವೆ. ಇದರೊಂದಿಗೆ ತಜಾ ಹಣ್ಣುಗಳಿಂದ ತಯಾರಿಸಿದ ಜ್ಯೂಸ್​ ಸೇವನೆ ಕೂಡ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಮತ್ತು ಮನೆಯಲ್ಲಿ ಮಾಡಿರುವ ಯಾವುದೇ ಆಹಾರವನ್ನು ದೀರ್ಘಕಾಲದವರೆಗೂ ತೆಗೆದಿಡದೆ ಬೇಗನೆ ಸೇವಿಸುವುದು ಬಹಳ ಉತ್ತಮವೆಂದು ತಜ್ಞರು ಹೇಳುತ್ತಾರೆ.

ನೆನಪಿನಲ್ಲಿಡಬೇಕಾದ ಸಂಗತಿಗಳು: 

ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಾರುಕಟ್ಟೆಗಳಲ್ಲಿ ಸಾಕಷ್ಟು ಉತ್ಪನ್ನಗಳು ಸಿಗುತ್ತವೆ. ಅವುಗಳಿಂದ ನಮ್ಮ ಆರೋಗ್ಯ ಮತ್ತು ಒಟ್ಟಾರೆ ದೇಹದ ಮೇಲೆ ಪರಿಣಾಮ ಬೀರಬಹುದು. ಕೆಲವೊಮ್ಮೆ ಅಂತಹ ಉತ್ಪನ್ನವು ದೇಹದಲ್ಲಿನ ಜೀವಕೋಶಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಜೊತೆಗೆ ಇದು ಅನೇಕ ಇತರೆ ಕಾಯಿಲೆಗಳಿಗೂ ದಾರಿ ಮಾಡಿಕೊಡಬಹುದು.  ಆದ್ದರಿಂದ ಯಾವುದೇ ಪೂರಕ ಅಥವಾ ಯಾವುದೇ ಇತರೆ ಉತ್ಪನ್ನವನ್ನು ತೆಗೆದುಕೊಳ್ಳತ್ತಿದ್ದರೆ ಅಥವಾ ತೆಗೆದುಕೊಳ್ಳಲು ಬಯಸಿದರೆ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ
ಕೆಸರಿನಲ್ಲಿ ಹೂತ ಕಾರು, ಟಿಟಿ: ಜಮ್ಮು ಕಾಶ್ಮೀರ ಮೇಘಸ್ಫೋಟದ ಪರಿಣಾಮ ನೋಡಿ
ಕೆಸರಿನಲ್ಲಿ ಹೂತ ಕಾರು, ಟಿಟಿ: ಜಮ್ಮು ಕಾಶ್ಮೀರ ಮೇಘಸ್ಫೋಟದ ಪರಿಣಾಮ ನೋಡಿ
ನಿನ್ನ ಕೋಚ್ ಕೂಡ ಗೊತ್ತು ಕಣೋ... ಎಲ್ಲೆ ಮೀರಿದ ಕಿರಿಕ್ ಕೊಹ್ಲಿ
ನಿನ್ನ ಕೋಚ್ ಕೂಡ ಗೊತ್ತು ಕಣೋ... ಎಲ್ಲೆ ಮೀರಿದ ಕಿರಿಕ್ ಕೊಹ್ಲಿ
VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ
VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ
ಉಪ್ಪನ್ನ ಈ ಸಮಯದಲ್ಲಿ ಕೊಟ್ಟರೆ ಕಷ್ಟಗಳು ಕಟ್ಟಿಟ್ಟ ಬುತ್ತಿ
ಉಪ್ಪನ್ನ ಈ ಸಮಯದಲ್ಲಿ ಕೊಟ್ಟರೆ ಕಷ್ಟಗಳು ಕಟ್ಟಿಟ್ಟ ಬುತ್ತಿ