ಮಳೆಗಾಲದಲ್ಲಿ ವಾಹನದ ಒಳಗಿನ ದುರ್ಗಂಧ ಹೋಗಲಾಡಿಸಲು ಸುಲಭ ಉಪಾಯ ಇಲ್ಲಿವೆ
ಮಳೆಗಾಲ ಅಂದ ಮೇಲೆ ಮಲೆನಾಡಿನಲ್ಲಂತೂ ಪ್ರತಿ ಹಳ್ಳಿಯಲ್ಲೂ ನಿತ್ಯ ಧೋ ಎಂದು ಮಳೆ ಸುರಿಯುತ್ತಲೇ ಇರುತ್ತದೆ. ಹಾಗೆಯೇ ಮಳೆಗಾಲದಲ್ಲಿ ರಸ್ತೆಗಳು ಅಷ್ಟು ಸುರಕ್ಷಿತವಾಗಿರದ ಕಾರಣ ಕಾರನ್ನು ಮನೆಯಲ್ಲಿಯೇ ಇರಿಸಿ ಸಾಮಾನ್ಯವಾಗಿ ಎಲ್ಲರೂ ಬೈಕ್ನಲ್ಲಿಯೇ ತೆರಳುತ್ತಾರೆ
ಮಳೆಗಾಲ ಅಂದ ಮೇಲೆ ಮಲೆನಾಡಿನಲ್ಲಂತೂ ಪ್ರತಿ ಹಳ್ಳಿಯಲ್ಲೂ ನಿತ್ಯ ಧೋ ಎಂದು ಮಳೆ ಸುರಿಯುತ್ತಲೇ ಇರುತ್ತದೆ. ಹಾಗೆಯೇ ಮಳೆಗಾಲದಲ್ಲಿ ರಸ್ತೆಗಳು ಅಷ್ಟು ಸುರಕ್ಷಿತವಾಗಿರದ ಕಾರಣ ಕಾರನ್ನು ಮನೆಯಲ್ಲಿಯೇ ಇರಿಸಿ ಸಾಮಾನ್ಯವಾಗಿ ಎಲ್ಲರೂ ಬೈಕ್ನಲ್ಲಿಯೇ ತೆರಳುತ್ತಾರೆ. ಎರಡರಿಂದ ಮೂರು ತಿಂಗಳು ಕಾರು ನಿಂತಲ್ಲಿಯೇ ನಿಂತಿರುತ್ತದೆ. ಒಮ್ಮೆಲೆ ಬಾಗಿಲು ತೆರೆದಾಗ ಗಬ್ಬು ವಾಸನೆ ಮೂಗಿಗೆ ಬಡಿಯುತ್ತದೆ.
ಮಳೆಯ ಕಾರಣ ಕಾರಿನ ಗಾಜುಗಳನ್ನು ಕೆಳಗೆ ಸರಿಸಲು ಆಗುವುದಿಲ್ಲ. ಅದಕ್ಕೆ ಕಾರಿನ ಒಳಗೆ ಕುಳಿತ ನಂತರ ನಿರಂತರವಾಗಿ ಸೌಗಂಧದ್ರವ್ಯಗಳ ಸಿಂಪಡಣೆ ಮಾಡುವವರು ಹಲವರು, ಈ ದುರ್ಗಂಧ ಜೊತೆ ಸಿಂಪಡಣೆಯ ಸುಗಂಧದ ಪರಿಮಳವು ಕಾರಿನ ಒಳಗೆ ಇರುವುದು.
ಈ ಸುಗಂಧ ಸಿಂಪಡಣೆ ಹಲವರಿಗೆ ಕಾರಿನ ಒಳಗೆ ಪ್ರಯಾಣ ಮಾಡುವಾಗ ತಲೆನೋವು ಇತರ ಆರೋಗ್ಯ ಸಮಸ್ಯೆ ಉಂಟು ಮಾಡಿದ ಅನುಭವ ಕೆಲವರಿಗಿದೆ.
ಇನ್ನೂ ಕೆಲವರಿಗೆ ಈ ದ್ರವ್ಯಗಳು ಶ್ವಾಸದ ಸಮಸ್ಯೆ, ನೆಗಡಿ ಇತ್ಯಾದಿಗಳಿಗೆ ಕಾರಣವಾಗುವುದು.ಈ ರೀತಿಯ ತೊಂದರೆಗಳನ್ನು ತಪ್ಪಿಸಲು ಅತ್ಯಂತ ಸುಲಭದ ಉಪಾಯ ಎಂದರೆ ಕಾರಿನ ಒಳಗೆ ನಾಲ್ಕಾರು ದೊಡ್ಡ ಕರ್ಪೂರದ ಬಿಲ್ಲೆಗಳನ್ನು ಹಾಕಿ ಇಡುವುದು. ( ಈ ಬಿಲ್ಲೆಗಳ ಸಂಖ್ಯೆ ಅತಿ ಹೆಚ್ಚು ಬೇಡ,ಕರ್ಪೂರ ಜ್ವಲನಶೀಲ ಇರುವುದರಿಂದ ) ಕರ್ಪೂರ ಪರಿಮಳ ವಾತಾವರಣದಲ್ಲಿ ವಿಶೇಷ ಅನುಭವದ ಪ್ರಭಾವ ಬರುವಂತೆ ಮಾಡುವುದು.
ಈ ಕಾರಣಕ್ಕೆ ಕರ್ಪೂರದ ಪರಿಮಳ ಹೊರಸೂಸುವ ಯಂತ್ರಗಳು ಈಗ ಪ್ರಚಲಿತವಾಗಿದೆ.ಕರೋನಾದ ಸಮಯದಲ್ಲಿ ವಾತಾವರಣದಲ್ಲಿಯ ವೈರಸಗಳನ್ನು ನಾಶಮಾಡುವ ಗುಣದ ಬಗ್ಗೆ ಪ್ರಚಲಿತವಾಗಿತ್ತು.
ಈ ರೀತಿ ಕಾರಿನ ಒಳಗೆ ಕರ್ಪೂರ ಹಾಕಿಡುವುದು ಇದರಿಂದ ದುರ್ಗಂಧ ವಂತು ನಿವಾರಣೆಯಾಗುತ್ತದೆ, ಜೊತೆಗೆ ಸುಗಂಧದ್ರವ್ಯಗಳಿಂದ ಬರುವಂತಹ ಆರೋಗ್ಯ ಸಮಸ್ಯೆಯು ಉಂಟಾಗದು. ಹಾಗೂ ವಾಹನದ ಒಳಗೆ ಕುಳಿತಾಗ ವಿಶೇಷ ಅನುಭವದ ಜೊತೆಗೆ ತಮ್ಮ ಕಾರಿನಲ್ಲಿ ಸವಾರಿ ಮಾಡಿದವರು ಗುರುತಿಸುವುದು ಖಚಿತ.
ಇದರ ಜೊತೆಗೆ ಕಾರುಗಳಲ್ಲಿಯ ಪಾದ ಇಡುವ ಸ್ಥಳದ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ಅಗತ್ಯವಿದೆ. ಮಲೆನಾಡಿನಲ್ಲಿ ಕಾರುಗಳಲ್ಲಿ ಆಗುವ ದುರ್ಗಂಧವನ್ನು ಈ ಕರ್ಪೂರದಿಂದ ನಿವಾರಿಸಬಹುದು. (ಡಾ. ರವಿಕಿರಣ್ ಪಟವರ್ಧನ ಶಿರಸಿ, ಆಯುರ್ವೇದ ವೈದ್ಯರು)
Published On - 2:13 pm, Mon, 11 July 22